Connect with us

Dina Bhavishya

ದಿನ ಭವಿಷ್ಯ 4-1-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ. ವಾರ : ಸೋಮವಾರ,
ತಿಥಿ : ಪಂಚಮಿ, ನಕ್ಷತ್ರ : ಪುಬ್ಬ,

ರಾಹುಕಾಲ: 8.10 ರಿಂದ 9.36
ಗುಳಿಕಕಾಲ: 1.54 ರಿಂದ 3.20
ಯಮಗಂಡಕಾಲ: 11.02 ರಿಂದ 12.28

ಮೇಷ: ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ವರಮಾನ, ಆಂತರಿಕ ಕಲಹ ನಿವಾರಣೆಯಾಗುವುದು, ಕೆಲ ಕಾರ್ಯಗಳಲ್ಲಿ ಪ್ರಗತಿ, ಹಿತಶತ್ರುಗಳಿಂದ ತೊಂದರೆ.

ವೃಷಭ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಹಣಕಾಸಿನ ವಿಚಾರದಲ್ಲಿ ಮೋಸ, ಉದ್ಯೋಗದಲ್ಲಿ ಹಿನ್ನಡೆ, ಆತ್ಮೀಯರ ಭೇಟಿ.

ಮಿಥುನ: ದಾಯಾದಿಗಳಿಂದ ತೊಂದರೆ, ಶತ್ರು ಪರಾಜಯ, ದಾಂಪತ್ಯ ಜೀವನದಲ್ಲಿ ನೆಮ್ಮದಿ, ಗಣ್ಯವ್ಯಕ್ತಿಗಳ ಭೇಟಿ, ಅನ್ಯ ಜನರಲ್ಲಿ ವೈಮನಸ್ಯ.

ಕಟಕ: ವಿಪರೀತ ಕೆಲಸ ಕಾರ್ಯ, ವಾಹನದಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ಥಿರಾಸ್ತಿ ಖರೀದಿ, ಧೈರ್ಯದಿಂದ ಮುನ್ನುಗ್ಗುವಿರಿ.

ಸಿಂಹ: ವಾಹನ ರಿಪೇರಿ, ಮಾನಸಿಕ ತೊಂದರೆ, ಮಾತಿನಲ್ಲಿ ಹಿಡಿತವಿರಲಿ, ಮನಕ್ಲೇಷ, ಆರೋಗ್ಯದ ಕಡೆ ಗಮನ ಕೊಡಿ.

ಕನ್ಯಾ: ಈ ದಿನ ವಾಹನ ಖರೀದಿ, ಹಣಕಾಸಿನ ಪರಿಸ್ಥಿತಿ ಉತ್ತಮ, ವ್ಯಾಪಾರದಲ್ಲಿ ಲಾಭ, ದೂರಪ್ರಯಾಣ, ವಸ್ತ್ರ ಖರೀದಿ.

ತುಲಾ: ಷೇರು ಮಾರುಕಟ್ಟೆಯಲ್ಲಿ ಲಾಭ, ಮಾನಸಿಕ ಹಿಂಸೆ, ಅಕಾಲ ಭೋಜನ, ಚಂಚಲ ಮನಸ್ಸು, ಮಕ್ಕಳಿಂದ ತೊಂದರೆ.

ವೃಶ್ಚಿಕ: ಬಂಧುಗಳಿಂದ ನಿಂದನೆ, ವಿನಾಕಾರಣ ಕಲಹ, ವ್ಯವಹಾರಗಳಲ್ಲಿ ನಷ್ಟ, ಜೀವನದಲ್ಲಿ ನೆಮ್ಮದಿ ಕಾಣುವಿರಿ.

ಧನಸ್ಸು: ಗುರು ಹಿರಿಯರ ಸಲಹೆಯಂತೆ ನಡೆಯಿರಿ, ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಲಭ್ಯ, ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ.

ಮಕರ: ವಿಪರೀತ ಖರ್ಚು, ಮಿತ್ರರ ಭೇಟಿ, ಮಾನಸಿಕ ಒತ್ತಡದಿಂದ ಮುಕ್ತರಾಗಲು ಪ್ರಯತ್ನಿಸಿ, ನಿಂತುಹೋಗಿದ್ದ ಕೆಲಸಗಳು ಮರುಚಾಲನೆ.

ಕುಂಭ: ವಿರೋಧಿಗಳಿಂದ ದೂರವಿರಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ, ಉತ್ಪನ್ನ ವಹಿವಾಟುದಾರರಿಗೆ ಅಧಿಕ ಲಾಭ.

ಮೀನ: ಸ್ತ್ರೀಯರಿಗೆ ಶುಭ ಸಮಯ, ಸರ್ಕಾರಿ ಕೆಲಸದವರಿಗೆ ಭಾಗ್ಯ ಯೋಗ, ಅಧಿಕ ಖರ್ಚು, ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗಿ, ಮನಃಶಾಂತಿ.

 

Click to comment

Leave a Reply

Your email address will not be published. Required fields are marked *

www.publictv.in