Connect with us

Dina Bhavishya

ದಿನ ಭವಿಷ್ಯ: 30-05-2020

Published

on

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಶನಿವಾರ, ಮಖ ನಕ್ಷತ್ರ
ಬೆಳಗ್ಗೆ 6:04 ನಂತರ ಪೂರ್ವ ಫಾಲ್ಗುಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:08 ರಿಂದ 10:44
ಗುಳಿಕಕಾಲ: ಬೆಳಗ್ಗೆ 5:57 ರಿಂದ 7:32
ಯಮಗಂಡಕಾಲ: ಮಧ್ಯಾಹ್ನ 1:56 ರಿಂದ 3:32

ಮೇಷ: ಆರ್ಥಿಕವಾಗಿ ಅನುಕೂಲವಾದ ದಿನ, ಶುಭ ಕಾರ್ಯಗಳಿಗೆ ಸಕಾಲ, ಲಾಭ ಪ್ರಮಾಣದ ಚೇತರಿಕೆ, ಮಾತೃವಿನಿಂದ ಧನಾಗಮನ, ವಾಹನ ಖರೀದಿ ಯೋಗ, ಗೃಹ ನಿರ್ಮಾಣಕ್ಕೆ ಚಿಂತನೆ, ಸಂಗಾತಿಯಿಂದ ನೋವು, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಲಂಕಾರಿಕ ವಸ್ತುಗಳಿಂದ ತೊಂದರೆ.

ವೃಷಭ: ಉದ್ಯಮ-ವ್ಯಾಪಾರದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಒತ್ತಡ, ಸಂಗಾತಿ ಜೊತೆ ವಾಗ್ವಾದ, ಗರ್ಭ ದೋಷ, ಬಿ.ಪಿ-ಶುಗರ್‍ನಲ್ಲಿ ವ್ಯತ್ಯಾಸ, ಬಾಡಿಗೆದಾರರೊಂದಿಗೆ ಕಿರಿಕಿರಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

ಮಿಥುನ: ದುಶ್ಚಟಗಳಿಗೆ ದಾಸರಾಗುವಿರಿ, ಪ್ರೇಮಿಗಳ ಮಧ್ಯೆ ಅನಗತ್ಯ ಚರ್ಚೆ, ಜೀವನಕ್ಕೆ ಆತ್ಮೀಯರು ಪಾತ್ರವಹಿಸುವರು, ಹೆಣ್ಣು ಮಕ್ಕಳಿಂದ ಲಾಭ, ಗುಪ್ತ ಆಲೋಚನೆ, ಆರೋಗ್ಯದಲ್ಲಿ ಏರುಪೇರು, ಕಲ್ಪನೆಗಳಿಂದ ನಿದ್ರಾಭಂಗ.

ಕಟಕ: ಉದ್ಯೋಗ ಸ್ಥಳದಲ್ಲಿ ಅಶಾಂತಿ, ಸ್ತ್ರೀಯರಿಗೆ ಕಿರಿಕಿರಿ, ವಾಹನ ಖರೀದಿ, ಗೃಹ ನಿರ್ಮಾಣದ ಆಸೆ, ಮಕ್ಕಳಿಂದ ನೋವು, ಮಾತೃವಿನಿಂದ ಧನಾಗಮನ, ಸ್ಥಿರಾಸ್ತಿಯಿಂದ ಲಾಭ, ವ್ಯಾಪಾರಿಗಳಿಗೆ ಅನುಕೂಲ, ಮೋಜು-ಮಸ್ತಿಯಲ್ಲಿ ತೊಡಗುವಿರಿ.

ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಹೆಣ್ಣು ಮಕ್ಕಳ ನಡವಳಿಕೆಯಿಂದ ಬೇಸರ, ಸ್ಥಿರಾಸ್ತಿ ಪತ್ರ ವ್ಯವಹಾರದಲ್ಲಿ ಜಯ, ನೆರೆಹೊರೆಯವರಿಂದ ಅನುಕೂಲ, ಉದ್ಯೋಗ ಬದಲಾವಣೆ ಚಿಂತೆ, ದೂರ ಪ್ರದೇಶದಲ್ಲಿ ಉದ್ಯೋಗ ಹುಡುಕಾಟ, ಶೀತ, ಕೆಮ್ಮು ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾ: ಅದೃಷ್ಟದ ದಿನ ನಿಮ್ಮದಾಗುವುದು, ಸ್ತ್ರೀಯರಿಂದ ಅನುಕೂಲ, ಮಿತ್ರರಿಂದ ಸಹಕಾರ, ತಂದೆ ಜೊತೆ ಮನಃಸ್ತಾಪ, ಪ್ರಯಾಣದಲ್ಲಿ ಅಡ್ಡಿ-ಆತಂಕ, ಆಕಸ್ಮಿಕ ಧನಾಗಮನ, ಪತ್ರ ವ್ಯವಹಾರಗಳಲ್ಲಿ ತೊಂದರೆ.

ತುಲಾ: ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಲಾಭ, ಅನಿರೀಕ್ಷಿತ ಆರ್ಥಿಕ ನೆರವು, ಪಾಲುದಾರಿಕೆಯಲ್ಲಿ ಅನುಕೂಲ, ನಿರ್ಧಾರಗಳಲ್ಲಿ ಗೊಂದಲ, ಅಲಂಕಾರಿಕ ವಸ್ತುಗಳ ಮೇಲೆ ಒಲವು, ಆತ್ಮೀಯರಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ವಿದ್ಯಾಭ್ಯಾಸದ ಆಲೋಚನೆ, ಭವಿಷ್ಯದ ಚಿಂತೆ, ಆತುರ ಸ್ವಭಾವದಿಂದ ಸಮಸ್ಯೆಗೆ ಸಿಲುಕುವಿರಿ.

ವೃಶ್ಚಿಕ: ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಅನುಕೂಲ, ಸಂಸಾರಿಕ ಜೀವನದಿಂದ ದೂರವಿರಲು ಯೋಚನೆ, ಸಂಗಾತಿ-ಸ್ನೇಹಿತರೇ ಶತ್ರುವಾಗುವರು, ಪಾಲುದಾರಿಕೆಯಲ್ಲಿ ಮೋಸ, ಆರೋಗ್ಯ ಸಮಸ್ಯೆ, ಅವಕಾಶ ಕೈತಪ್ಪುವುದು, ಮಾನಸಿಕ ಒತ್ತಡ, ನಾನಾ ಆಲೋಚನೆ, ಇಂದು ತಾಳ್ಮೆ ವಹಿಸುವುದು ಉತ್ತಮ.

ಧನಸ್ಸು: ಮಕ್ಕಳ ನಡವಳಿಕೆಯಲ್ಲಿ ಬೇಸರ, ಗೊಂದಲಗಳಿಂದ ಅವಕಾಶ ಕೈತಪ್ಪುವುದು, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ರೋಗ ಬಾಧೆ, ಭವಿಷ್ಯದ ಬಗ್ಗೆ ಆತಂಕ, ನೆರೆಹೊರೆಯವರ ಜೊತೆ ಶತ್ರುತ್ವ, ಬರಹದಲ್ಲಿ ವ್ಯತ್ಯಾಸ.

ಮಕರ: ಪ್ರೇಮ ವಿಚಾರದಲ್ಲಿ ಯಶಸ್ಸು, ಇಲ್ಲ ಸಲ್ಲದ ಅಪವಾದ, ಭಾವನೆಗಳಿಂದ ಧಕ್ಕೆ, ಸ್ಪರ್ಧಾತ್ಮಕ ವಿಚಾರದಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮೋಜು-ಮಸ್ತಿಯಲ್ಲಿ ಭಾಗಿ, ಶಕ್ತಿದೇವತೆಯ ಆರಾಧನೆ, ಮಹಿಳೆಯರಿಗೆ ಅದೃಷ್ಟ, ಉದ್ಯೋಗದಲ್ಲಿ ಯಶಸ್ಸು.

ಕುಂಭ: ಸ್ತಿರಾಸ್ತಿ-ವಾಹನದಿಂದ ಅನುಕೂಲ, ಮಾತೃವಿನಿಂದ ಧನಾಗಮನ, ಆತ್ಮೀಯರೇ ಶತ್ರುವಾಗುವರು, ಭಾವನೆಗಳಿಗೆ ಮನ್ನಣೆ, ಇಷ್ಟಾರ್ಥ ಸಿದ್ಧಿಸುವುದು, ಪ್ರಯಾಣದಲ್ಲಿ ಅನುಕೂಲ, ಗುರು ಉಪದೇಶ ಆಲಿಸುವಿರಿ, ತಂದೆಯಿಂದ ಅದೃಷ್ಟ.

ಮೀನ: ಸ್ವಂತ ಉದ್ಯಮದಲ್ಲಿ ಎಚ್ಚರ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ದೂರ ಪ್ರಯಾಣಕ್ಕೆ ಆಲೋಚನೆ, ಕುಟುಂಬದಲ್ಲಿ ಗೊಂದಲದ ವಾತಾವರಣ, ಮನಸ್ಸಿನಲ್ಲಿ ನಾನಾ ರೀತಿಯ ಯೋಚನೆ, ಉದ್ಯೋಗ ಬದಲಾವಣೆಗೆ ಮನಸ್ಸು, ತಂದೆಯ ನಡವಳಿಕೆಯಿಂದ ಬೇಸರ.