Connect with us

Dina Bhavishya

ದಿನ ಭವಿಷ್ಯ: 29-05- 2020

Published

on

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಶುಕ್ರವಾರ, ಆಶ್ಲೇಷ ನಕ್ಷತ್ರ
ಬೆಳಗ್ಗೆ 6:57 ನಂತರ ಮಖ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:44 ರಿಂದ 12:20
ಗುಳಿಕಕಾಲ: ಬೆಳಗ್ಗೆ 7:32 ರಿಂದ 9:08
ಯಮಗಂಡಕಾಲ: ಮಧ್ಯಾಹ್ನ 3:32 ರಿಂದ 5:08

ಮೇಷ: ಸ್ತ್ರೀ-ಸಂಗಾತಿಯಿಂದ ಅನುಕೂಲ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೇಮ ವಿಚಾರದಲ್ಲಿ ಬೇಸರ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ತಂದೆ ಜೊತೆ ವೈಮನಸ್ಸು, ಉದ್ಯೋಗ ಕಳೆದುಕೊಳ್ಳುವ ಭೀತಿ, ಪಿತ್ರಾರ್ಜಿತ ಆಸ್ತಿಯಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ಸ್ವಯಂಕೃತ ಅಪರಾಧಗಳಿಂದ ನಷ್ಟ, ಶೀತ, ಕಫ, ಆರೋಗ್ಯದಲ್ಲಿ ವ್ಯತ್ಯಾಸ, ಗರ್ಭ ದೋಷ, ಅನಿರೀಕ್ಷಿತ ಪೆಟ್ಟಾಗುವ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಹಿಳೆಯರಲ್ಲಿ ಗೊಂದಲ, ಮಾಟ-ಮಂತ್ರ ತಂತ್ರದ ಭೀತಿ, ಕೋರ್ಟ್ ಕೇಸ್‍ಗೆ ಓಡಾಟ, ಸಾಲ ಬಾಧೆ, ಶತ್ರುಕಾಟ.

ಮಿಥುನ: ಆಸೆ ಆಕಾಂಕ್ಷೆಗಳಿಂದ ತೊಂದರೆ, ಮಕ್ಕಳ ಭವಿಷ್ಯ ಚಿಂತೆ, ಕಲಾ-ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲ, ಬೇಡದ ವಿಚಾರಗಳಿಂದ ಸಂಕಷ್ಟ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ನಿದ್ರೆಯಲ್ಲಿ ದುಃಸ್ವಪ್ನಗಳು, ಅಲಂಕಾರಿಕ ವಸ್ತು-ಔಷಧಗಳಿಗೆ ಖರ್ಚು.

ಕಟಕ: ಕುಟುಂಬದಿಂದ ನೋವು, ಸಂಕಟ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಗ್ಯಾಸ್ಟ್ರಿಕ್, ಶರೀರದಲ್ಲಿ ನೋವು, ಶತ್ರುಗಳ ಕಾಟ, ಮಾಟ-ಮಂತ್ರ ತಂತ್ರದ ಭೀತಿ, ಸೇವಕರು-ಕಾರ್ಮಿಕರಿಂದ ಸಂಕಷ್ಟ, ಬಡತನ ಬಾಧಿಸುವುದು.

ಸಿಂಹ: ಸಂತಾನ ದೋಷ, ಒಂಟಿತನ ಬಯಸುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಕಾನೂನಿನ ಬಲೆಯಲ್ಲಿ ಸಿಲುಕುವ ಆತಂಕ, ದಂಡ ಕಟ್ಟುವ ಸನ್ನಿವೇಶ, ಉದ್ಯೋಗ ನಷ್ಟದ ಭೀತಿ, ನೆರೆಹೊರೆಯವರೊಂದಿಗೆ ವೈಮನಸ್ಸು.

ಕನ್ಯಾ: ದೂರ ಪ್ರಯಾಣದಿಂದ ಅನುಕೂಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಭವಿಷ್ಯದ ಯೋಜನೆಗಳಿಗೆ ತೊಂದರೆ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಆಸೆ ಆಕಾಂಕ್ಷೆಗಳಿಂದ ಸಮಸ್ಯೆ, ಮಾನಸಿಕ ವ್ಯಥೆ, ಮನೆ ವಾತಾವರಣ ಅಶಾಂತಿ, ಹಿತ ಶತ್ರುಗಳಿಂದ ನೋವು.

ತುಲಾ: ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಪ್ರಯಾಣದಲ್ಲಿ ನೋವು, ಪತ್ರ ವ್ಯವಹಾರದಲ್ಲಿ ಸಮಸ್ಯೆ, ಸ್ಥಿರಾಸ್ತಿ ತಗಾದೆ, ಕೋರ್ಟ್‍ನಲ್ಲಿ ಜಯದ ಸೂಚನೆ, ಮಾನಸಿಕ ವ್ಯಥೆ, ಅಹಂಭಾವ ಹೆಚ್ಚಾಗುವುದು, ಉಸಿರಾಟ ಸಮಸ್ಯೆ, ಶರೀರದಲ್ಲಿ ನೋವು.

ವೃಶ್ಚಿಕ: ಆರ್ಥಿಕ ಸಂಕಷ್ಟಗಳು, ಆತ್ಮೀಯರು ದೂರಾಗುವರು, ಬಂಧುಗಳಿಂದ ತೊಂದರೆ, ಕುಟುಂಬದಲ್ಲಿ ಕಿರಿಕಿರಿ, ಅನಗತ್ಯ ಮಾತುಗಳಿಂದ ಕಲಹ, ಸ್ಥಿರಾಸ್ತಿ ತಗಾದೆ ಮುಂದುವರಿಯುವುದು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಗುರು, ದೈವ ದರ್ಶನದ ಚಿಂತೆ, ಅನಗತ್ಯ ಖರ್ಚು ಹೆಚ್ಚು ಮಾಡುವಿರಿ.

ಧನಸ್ಸು: ಕೆಲಸ ಕಾರ್ಯದಲ್ಲಿ ಹಿನ್ನಡೆ, ಉದ್ಯೋಗ-ವ್ಯಾಪಾರದಲ್ಲಿ ನಷ್ಟ, ಆರ್ಥಿಕ ಸಂಕಷ್ಟ ಹೆಚ್ಚಾಗುವುದು, ಕುಟುಂಬದಿಂದ ದೂರವಾಗುವ ಚಿಂತೆ, ಒಂಟಿಯಾಗಿರಲು ಇಷ್ಟ ಪಡುವಿರಿ, ನೆರೆಹೊರೆ ಬಂಧುಗಳಲ್ಲಿ ವೈಮನಸ್ಸು, ದೇಹದಲ್ಲಿ ನೋವು, ಆಯುಷ್ಯದ ಚಿಂತೆ, ಸಹೋದರಿಯಿಂದ ಅನುಕೂಲ.

ಮಕರ: ಸ್ವಯಂಕೃತ ಅಪರಾಧದಿಂದ ನಷ್ಟ, ಅನಗತ್ಯ ಸಂಬಂಧಗಳಿಂದ ಕಿರಿಕಿರಿ, ಪೆಟ್ಟಾಗುವ ಸಾಧ್ಯತೆ, ಉದ್ಯೋಗದಲ್ಲಿ ನಷ್ಟ-ಸೋಲು, ನಿದ್ರೆಯಲ್ಲಿ ದುಃಸ್ವಪ್ನಗಳು, ಆರೋಗ್ಯ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರಿಂದ ದೂರ ಪ್ರದೇಶದಲ್ಲಿ ಅನುಕೂಲ.

ಕುಂಭ: ಸ್ಥಿರಾಸ್ತಿ-ವಾಹನದಿಂದ ಲಾಭ, ಶುಭ ಕಾರ್ಯ ಯೋಗ, ಅದೃಷ್ಟ ಒಲಿಯುವುದು, ಉದ್ಯೋಗದಲ್ಲಿ ಬಡ್ತಿ, ಉತ್ತಮ ಗೌರವ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯವಹಾರದಲ್ಲಿ ನಷ್ಟ, ಆರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮೀನ: ಉದ್ಯೋಗ ಸ್ಥಳದಲ್ಲಿ ಒತ್ತಡ, ಮಹಿಳೆಯರಿಂದ ಸೋಲು, ನಷ್ಟ, ನಿರಾಸೆ, ತೊಂದರೆ, ಅನಿರೀಕ್ಷಿತ ಘಟನೆಗಳಿಂದ ನಿದ್ರಾಭಂಗ, ಲಾಭ ಪ್ರಮಾಣ ಕುಂಠಿತ, ನಷ್ಟ ಅಧಿಕವಾಗುವುದು, ಮಿತ್ರರ ಜೀವನದಲ್ಲಿ ವ್ಯತ್ಯಾಸ, ಕೋರ್ಟ್ ಕೇಸ್‍ಗೆ ಅಲೆದಾಟ.