Connect with us

ದಿನ ಭವಿಷ್ಯ: 27-05-2021

ದಿನ ಭವಿಷ್ಯ: 27-05-2021

ಪಂಚಾಂಗ

ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ,
ಕೃಷ್ಣಪಕ್ಷ, ಪ್ರಥಮ (ಹಗಲು 01:04 ನಂತರ ದ್ವಿತೀಯ)
ಗುರುವಾರ, ಜೇಷ್ಠ ನಕ್ಷತ್ರ

ರಾಹುಕಾಲ: 01:56 ರಿಂದ 03:32
ಗುಳಿಕಕಾಲ: 09:08 ರಿಂದ 10:44
ಯಮಗಂಡಕಾಲ: 5.57 ರಿಂದ 7:32

ಮೇಷ: ಅಧಿಕ ಖರ್ಚು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಬಂಧುಗಳಿಂದ ನಷ್ಟ.

ವೃಷಭ: ಕಾನೂನುಬಾಹಿರ ಚಟುವಟಿಕೆಯಿಂದ ಧನ ಸಂಪಾದನೆ, ಆಸ್ತಿ ವಿಚಾರದಲ್ಲಿ ತೊಂದರೆ, ಕೆಲಸಕಾರ್ಯಗಳಲ್ಲಿ ನಿಧಾನ ಪ್ರಗತಿ.

ಮಿಥುನ: ಸಾಲ ಮಾಡುವ ಪರಿಸ್ಥಿತಿ, ಸ್ವಂತ ಕಾರ್ಯಕರ್ತವ್ಯಗಳಲ್ಲಿ ಅಡೆತಡೆ, ಕೆಟ್ಟ ಮತ್ತು ದುರಾಲೋಚನೆಗಳು.

ಕಟಕ: ನಿದ್ರಾಭಂಗ, ದಾಂಪತ್ಯದಲ್ಲಿ ಕಲಹ, ಅಧಿಕ ಖರ್ಚು.

ಸಿಂಹ: ಸಾಲದಿಂದ ಮುಕ್ತಿ ಹೊಂದುವ ಆಲೋಚನೆ, ಮಾನಸಿಕ ನೋವು, ಮನೆಯ ವಾತಾವರಣದಲ್ಲಿ ಕಲುಷಿತ.

ಕನ್ಯಾ: ಸಹೋದರಿಯಿಂದ ಲಾಭ, ಮಿತ್ರರಿಂದ ಸಹಕಾರ, ಪಾಲುದಾರಿಕೆಯಲ್ಲಿ ಮತ್ತು ಮೇಲಾಧಿಕಾರಿಗಳಿಂದ ನಷ್ಟ.

ತುಲಾ: ಉದ್ಯೋಗದಿಂದ ಅನುಕೂಲ, ಕೆಲಸ ಕಾರ್ಯನಿಮಿತ್ತ ಪ್ರಯಾಣ, ಸ್ಥಿರಾಸ್ತಿ ವಿಚಾರವಾಗಿ ವಾಗ್ವಾದ.

ವೃಶ್ಚಿಕ: ವಂಶಪಾರಂಪರ್ಯ ವೃತ್ತಿಪರರಿಗೆ ಅನುಕೂಲ, ಮಕ್ಕಳಿಗೋಸ್ಕರ ಪ್ರಯಾಣ, ಬಂಧು ಆಗಮನ.

ಧನಸ್ಸು: ಮಾನಸಿಕ ನೆಮ್ಮದಿ ಭಂಗ, ಆರ್ಥಿಕ ದುಸ್ಥಿತಿ, ಉದ್ಯೋಗ ದೊರಕುವ ಭರವಸೆ.

ಮಕರ: ಮಿತ್ರರೇ ಶತ್ರು, ಸ್ವಂತ ಉದ್ಯಮ ವ್ಯಾಪಾರದಲ್ಲಿ ಅನುಕೂಲ, ಪ್ರಯಾಣದಲ್ಲಿ ಗೊಂದಲ ಮತ್ತು ಅಡೆತಡೆ.

ಕುಂಭ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಮಕ್ಕಳಿಂದ ಅನುಕೂಲ, ಆದಾಯ ಮತ್ತು ಖರ್ಚು ಸಮಪ್ರಮಾಣ.

ಮೀನ: ತಂದೆಯಿಂದ ಅನುಕೂಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯ ಮತ್ತು ಸ್ನೇಹಿತರಿಂದ ದೂರ ಆಗುವ ಮನಸ್ಸು.

Advertisement
Advertisement