Connect with us

Dina Bhavishya

ದಿನ ಭವಿಷ್ಯ: 24-05-2020

Published

on

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ, ಭಾನುವಾರ.

ಮೇಷ: ಕೆಲಸ ಕಾರ್ಯಗಳಲ್ಲಿ ಒತ್ತಡ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಹಣಕಾಸು ಪರಿಸ್ಥಿತಿ ಚೇತರಿಕೆ, ಆತ್ಮೀಯರಿಂದ ಕಿರಿಕಿರಿ, ಕುಟುಂಬದಲ್ಲಿ ಅಲ್ಪ ನೆಮ್ಮದಿ ವಾತಾವರಣ, ಅನಗತ್ಯ ಖರ್ಚು ಮಾಡಬೇಡಿ.

ವೃಷಭ: ಕಾರ್ಯ ಯಶಸ್ಸಿಗಾಗಿ ಓಡಾಟ, ಮನಸ್ಸಿನಲ್ಲಿ ನಾನಾ ಆಲೋಚನೆ, ಪರಿಶ್ರಮಕ್ಕೆ ತಕ್ಕ ಫಲ, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಹಣಕಾಸು ವಿಚಾರದಲ್ಲಿ ಓಡಾಟ, ಶುಭ ಕಾರ್ಯ ನಿಮಿತ್ತ ಪ್ರಯಾಣ.

ಮಿಥುನ: ಕಾರಣವಿಲ್ಲದೇ ಓಡಾಡುವಿರಿ, ವ್ಯವಹಾರಗಳಲ್ಲಿ ಅಭಿವೃದ್ಧಿ, ಇಷ್ಟಾರ್ಥ ಸಿದ್ಧಿ ಯೋಗ, ಸೈಟ್-ವಾಹನ ಲಾಭ ಸಾಧ್ಯತೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ದೂರ ಪ್ರಯಾಣಕ್ಕೆ ಮನಸ್ಸು, ಇಲ್ಲ ಸಲ್ಲದ ಅಪವಾದ.

ಕಟಕ: ಗೌರವ ಸನ್ಮಾನ ಪ್ರಾಪ್ತಿ, ಯೋಚಿಸಿ ನಿರ್ಧಾರ ಕೈಗೊಳ್ಳುವಿರಿ, ನೆಮ್ಮದಿಯ ಜೀವನಕ್ಕೆ ಮನಸ್ಸು, ಕೆಲಸ ಕಾರ್ಯಗಳಲ್ಲಿ ಉತ್ಸಾಹ, ಹಣಕಾಸು ಸಮಸ್ಯೆ, ದುಷ್ಟರ ಸಹವಾಸದಿಂದ ದೂರವಿರಿ,ಮನಸ್ಸಿನಲ್ಲಿ ಗೊಂದಲ.

ಸಿಂಹ: ದೃಷ್ಠಿ ದೋಷದಿಂದ ತೊಂದರೆ, ಕಾರ್ಯಗಳಲ್ಲಿ ವಿಳಂಬ, ವಿದೇಶ ಪ್ರಯಾಣ, ದಂಡ ಕಟ್ಟುವ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು.

ಕನ್ಯಾ: ವ್ಯವಹಾರ ಆರಂಭಕ್ಕೆ ಮನಸ್ಸು, ಹೊಸ ಪ್ರಯತ್ನಗಳಲ್ಲಿ ಯಶಸ್ಸು, ಮನೆ ನಿರ್ಮಾಣಕ್ಕೆ ತೊಂದರೆ, ಹಣಕಾಸು ಸಮಸ್ಯೆ, ಕೆಲಸದಲ್ಲಿ ಅನುಕೂಲ, ಚಿನ್ನಾಭರಣ ಖರೀದಿಯೋಗ, ಅಧಿಕಾರ ಪ್ರಾಪ್ತಿ,ಅಪರಿಚಿತರಿಂದ ದೂರ ಉಳಿಯಿರಿ.

ತುಲಾ: ಆತುರ ಸ್ವಭಾವದಿಂದ ಸಂಕಷ್ಟ, ಕೆಲಸ ಕಾರ್ಯಗಳಲ್ಲಿ ತಾಳ್ಮೆ ಅತ್ಯಗತ್ಯ, ಶತ್ರು ವಿಚಾರದಲ್ಲಿ ಭಯ, ಮುಂಗೋಪ ಹೆಚ್ಚಾಗುವುದು, ಅರ್ಥವಿಲ್ಲದ ಮಾತುಗಳನ್ನಾಡುವಿರಿ, ಕಾರ್ಯ ನಿಮಿತ್ತ ಓಡಾಟ.

ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಉತ್ತಮ, ಕುಟುಂಬದ ಬಗ್ಗೆ ಯೋಚನೆ, ಆತ್ಮೀಯರಲ್ಲಿ ವೈಮನಸ್ಸು, ಸಂಬಂಧ ಇಲ್ಲದವರಿಂದ ಸಹಕಾರ, ಅಪರಿಚಿತರ ವಿಚಾರದಲ್ಲಿ ಎಚ್ಚರ, ಹಿರಿಯರಿಂದ ಮಾರ್ಗದರ್ಶನ, ಉದ್ಯೋಗದಲ್ಲಿ ಒತ್ತಡ ಜಾಸ್ತಿ, ಎಲ್ಲಿ ಹೋದರೂ ಅಶಾಂತಿ.

ಧನಸ್ಸು: ಶುಭ ಕಾರ್ಯ ನಿಮಿತ್ತ ಬಂಧುಗಳ ಆಗಮನ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸ್ಥಿರಾಸ್ತಿ ವಿಚಾರದಲ್ಲಿ ಲಾಭ, ಶುಭ ಕಾರ್ಯದ ಚಿಂತೆ, ವಿದ್ಯಾರ್ಥಿಗಳಿಗೆ ಓದಿನ ಒತ್ತಡ, ಸ್ಥಿರಾಸ್ತಿ ಅನುಕೂಲ.

ಮಕರ: ಹಣಕಾಸು ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಪರಿಶ್ರಮಕ್ಕೆ ತಕ್ಕ ಫಲ ಲಭಿಸುವುದಿಲ್ಲ, ಸ್ತ್ರೀಯರಿಗೆ ಅಲ್ಪ ಅನುಕೂಲ, ಆತ್ಮೀಯರಿಂದ ಸಹಾಯ, ಶತ್ರುಗಳಿಂದ ತೊಂದರೆ, ಉದ್ಯೋಗದಲ್ಲಿ ಒತ್ತಡ ನಿರಾಸಕ್ತಿ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ನೆಮ್ಮದಿ ಇಲ್ಲದ ಜೀವನ.

ಕುಂಭ: ಭೂ ವ್ಯವಹಾರದಲ್ಲಿ ಅನುಕೂಲ, ಟ್ರಾವೆಲ್ಸ್ ನವರಿಗೆ ಲಾಭ, ವ್ಯಾಪಾರದಲ್ಲಿ ನಷ್ಟ, ಕಾರಣವಿಲ್ಲದೇ ದ್ವೇಷ-ಕೋಪ, ಮಾಡಿದ ಸಾಲ ತೀರಿಸಲು ಯತ್ನ, ಮೋಸದ ಜಾಲಕ್ಕೆ ಸಿಲುಕುವ ಸಾಧ್ಯತೆ, ಅಪರಿಚಿತರಿಂದ ಎಚ್ಚರಿಕೆ.

ಮೀನ: ಉದ್ಯೋಗಕ್ಕಾಗಿ ಅಲೆದಾಟ, ಅವಕಾಶಗಳು ಕೈ ತಪ್ಪುವುದು, ಮನಸ್ಸಿನಲ್ಲಿ ನಾನಾ ಆಲೋಚನೆ, ಚಿಂತೆಯಿಂದ ನೆಮ್ಮದಿಗೆ ಭಂಗ, ಕೆಲಸ ಕಾರ್ಯಗಳಲ್ಲಿ ಅಲ್ಪ ಸಿದ್ಧಿ, ನೆಮ್ಮದಿ ಇಲ್ಲದ ವಾತಾವರಣ, ಅಗೌರವ, ಅವಮಾನ ಪ್ರಾಪ್ತಿ, ಹಿರಿಯರ ಸಲಹೆಗೆ ಮನ್ನಣೆ ನೀಡಿ.