Connect with us

ದಿನ ಭವಿಷ್ಯ: 18-05-2021

ದಿನ ಭವಿಷ್ಯ: 18-05-2021

ಪಂಚಾಂಗ:
ಪ್ಲವ ನಾಮ ಸಂವತ್ಸರ,ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ.
ವೃದ್ಧಿ ಯೋಗ, ತೈತಲೆ ಕರಣ
ರಾಹುಕಾಲ:3.30 ರಿಂದ 5.05
ಮಂಗಳವಾರ, ಷಷ್ಠಿ , ಪುಷ್ಯ ನಕ್ಷತ್ರ
ಗುಳಿಕಕಾಲ :12.19 ರಿಂದ 1.55
ಯಮಗಂಡಕಾಲ :9.09 ರಿಂದ 10.44

ಮೇಷ: ಭೂ ವ್ಯವಹಾರದಲ್ಲಿ ಲಾಭ, ಮಾನಸಿಕ ನೆಮ್ಮದಿ, ಅನಗತ್ಯ ಪ್ರಯಾಣ, ಚಂಚಲ ಮನಸ್ಸು, ಮಕ್ಕಳಿಂದ ನೋವು.

ವೃಷಭ: ಅನಾವಶ್ಯಕ ವಿಚಾರಗಳಿಂದ ದೂರವಿರಿ, ದಾಂಪತ್ಯದಲ್ಲಿ ಕಲಹ, ಮಿತ್ರರಿಂದ ಸಹಾಯ, ಮನಕ್ಲೇಷ, ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ.

ಮಿಥುನ: ಕೋಪ ಜಾಸ್ತಿ, ವಾಗ್ವಾದದಲ್ಲಿ ಜಯ, ಹಿರಿಯರ ಮಾರ್ಗದರ್ಶನದಿಂದ ಒಳಿತು, ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ.

ಕಟಕ: ಹಣಕಾಸು ವಿಚಾರದಲ್ಲಿ ಜಾಗ್ರತೆ, ಮಾನಸಿಕ ಒತ್ತಡ, ಹೊಗಳಿಕೆ ಮಾತಿಗೆ ವಶರಾಗುವಿರಿ, ಎಚ್ಚರಿಕೆ ಅಗತ್ಯ.

ಸಿಂಹ: ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಅನಗತ್ಯ ವಾಗ್ವಾದ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಶೀತ ಸಂಬಂಧಿತ ರೋಗ.

ಕನ್ಯಾ: ಅನಿರೀಕ್ಷಿತ ಧನಲಾಭ, ದಾಯಾದಿಗಳಿಂದ ಪ್ರಶಂಸೆ, ವ್ಯಾಪಾರ ವ್ಯವಹಾರದಲ್ಲಿ ಲಾಭ, ನಂಬಿಕಸ್ಥರಿಂದ ಮೋಸ.

ತುಲಾ: ಸ್ಥಿರಾಸ್ತಿಯಿಂದ ಲಾಭ, ಶತ್ರು ಬಾಧೆ, ನೆರೆಹೊರೆಯವರೊಂದಿಗೆ ಶತ್ರುತ್ವ, ಇಲ್ಲಸಲ್ಲದ ಅಪವಾದ, ಮೇಲಾಧಿಕಾರಿಗಳಿಂದ ಪ್ರಶಂಸೆ.

ವೃಶ್ಚಿಕ: ಉದ್ಯೋಗದಲ್ಲಿ ಬಡ್ತಿ, ಭೋಗ ವಸ್ತು ಖರೀದಿ, ವಿವಾಹ ಯೋಗ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಯತ್ನ ಕಾರ್ಯದಲ್ಲಿ ಜಯ.

ಧನಸ್ಸು: ಧಾರ್ಮಿಕ ಕಾರ್ಯಗಳಲ್ಲಿ ಒಲವು, ಶತ್ರು ಬಾಧೆ, ಸ್ಥಿರಾಸ್ತಿ ಮಾರಾಟ, ಯತ್ನ ಕಾರ್ಯದಲ್ಲಿ ವಿಳಂಬ, ಆರೋಗ್ಯದಲ್ಲಿ ಏರುಪೇರು, ವಾಹನಕ್ಕಾಗಿ ಖರ್ಚು.

ಮಕರ: ಉದ್ಯೋಗದಲ್ಲಿ ಕಿರಿ-ಕಿರಿ, ಮನಕ್ಲೇಷ, ಕೆಲಸಕಾರ್ಯಗಳಲ್ಲಿ ನಿಷ್ಠೆ, ಚಂಚಲ ಮನಸ್ಸು, ಇಲ್ಲ ಸಲ್ಲದ ಅಪವಾದ.

ಕುಂಭ: ಯತ್ನ ಕಾರ್ಯದಲ್ಲಿ ಜಯ, ಮಾನಸಿಕ ನೆಮ್ಮದಿ, ಪ್ರೇಮಿಗಳಿಗೆ ಕುಟುಂಬದಿಂದ ಸಹಕಾರ, ಸ್ಥಿರಾಸ್ತಿ ಮಾರಾಟ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ವಾದ ವಿವಾದಗಳಿಂದ ದೂರವಿರಿ.

ಮೀನ: ಎಲ್ಲರೊಂದಿಗೆ ಸ್ನೇಹ ವೃದ್ಧಿ, ಬಂಧುಗಳ ಆಗಮನದಿಂದ ಸಂತಸ, ಸ್ತ್ರೀಯರಿಗೆ ಲಾಭ, ಕಾರ್ಯಸಾಧನೆಗಾಗಿ ತಿರುಗಾಟ, ವಾಹನ ಅಪಘಾತ ಸಾಧ್ಯತೆ.

Advertisement
Advertisement