Connect with us

Uncategorized

ದಿನಭವಿಷ್ಯ 18-05-2020

Published

on

ಪಂಚಾಂಗ

ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಸೋಮವಾರ, ಉತ್ತರಭಾದ್ರ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:34 ರಿಂದ 9:09
ಗುಳಿಕಕಾಲ: ಮಧ್ಯಾಹ್ನ 1:55 ರಿಂದ 3:30
ಯಮಗಂಡಕಾಲ: ಬೆಳಗ್ಗೆ 10:44 ರಿಂದ 12:09

ಮೇಷ: ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ, ಮಿತ್ರರೇ ಶತ್ರುಗಳಾಗುವರು, ಅಧಿಕವಾದ ಆಯಾಸ, ನರ ದೌರ್ಬಲ್ಯ, ಚರ್ಮ ತುರಿಕೆ, ತಲೆ ನೋವು, ಈ ದಿನ ಅಶುಭ ಫಲ.

ವೃಷಭ: ಉನ್ನತ ವಿದ್ಯಾಭ್ಯಾಸಕ್ಕೆ ಮನಸ್ಸು, ಕುಟುಂಬ ಪರಿಸ್ಥಿತಿಯಿಂದ ಹಿನ್ನಡೆ, ಮನಸ್ಸಿನಲ್ಲಿ ಆತಂಕ, ಸಂಸಾರದಲ್ಲಿ ಕಲಹ, ಆತ್ಮೀಯರೊಂದಿಗೆ ವೈಮನಸ್ಸು, ಉದ್ಯೋಗದಲ್ಲಿ ಒತ್ತಡ, ಕೆಲಸದಲ್ಲಿ ನಿರಾಸಕ್ತಿ.

ಮಿಥುನ: ಶತ್ರುತ್ವ ಹೆಚ್ಚಾಗುವುದು, ರೋಗ ಬಾಧೆ, ಅಧಿಕವಾದ ಉಷ್ಣ, ಮಾಟ-ಮಂತ್ರ ತಂತ್ರದ ಭೀತಿ, ಆತಂಕ ಸೃಷ್ಟಿಯಾಗುವುದು, ಈ ದಿನ ಅಶುಭ ಫಲ.

ಕಟಕ: ಮಕ್ಕಳಿಂದ ಆಕಸ್ಮಿಕ ಧನ ನಷ್ಟ, ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ತೊಡಕು, ಮಹಿಳೆಯರಲ್ಲಿ ವೈಮನಸ್ಸು, ಬಂಧುಗಳೊಂದಿಗೆ ಮನಃಸ್ತಾಪ.

ಸಿಂಹ: ಮಕ್ಕಳೊಂದಿಗೆ ಕಲಹ, ಮಿತ್ರರ ಜೊತೆ ವೈಮನಸ್ಸು, ಪೆಟ್ಟಾಗುವ ಸಾಧ್ಯತೆ, ಸೋಮಾರಿತನ, ಆತಂಕ, ವ್ಯವಹಾರದಲ್ಲಿ ಎಚ್ಚರ, ಆತುರ ಸ್ವಭಾವದಿಂದ ತೊಂದರೆ, ಅಕ್ರಮ ವಿಚಾರಗಳು ಬಯಲಾಗುವುದು.

ಕನ್ಯಾ: ಮಕ್ಕಳ ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ, ಮನಸ್ಸಿನಲ್ಲಿ ಆತಂಕ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಅನಗತ್ಯ ಕಲಹ.

ತುಲಾ: ಮಕ್ಕಳ ವಿಚಾರವಾಗಿ ಚಿಂತೆ, ಕುಟುಂಬದಲ್ಲಿ ವಾಗ್ವಾದ, ಹಣಕಾಸು ವಿಚಾರದಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಕಲಹ, ಸ್ನೇಹಿತರೊಂದಿಗೆ ದೂರ ಪ್ರಯಾಣ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ವಿಘ್ನ, ವ್ಯಾಪಾರ ವ್ಯವಹಾರಕ್ಕೆ ಅಡೆತಡೆ, ಮಕ್ಕಳಲ್ಲಿ ಒತ್ತಡ, ಮರೆವಿನ ಸಮಸ್ಯೆ, ಮಿತ್ರರಿಂದ ಅನುಕೂಲ, ಸ್ಥಿರಾಸ್ತಿ ಯೋಗ.

ಧನಸ್ಸು: ಮಕ್ಕಳಲ್ಲಿ ಚಟುವಟಿಕೆ ಕಡಿಮೆ, ಬಂಧುಗಳಿಂದ ಅವಮಾನ, ಆತ್ಮ ಗೌರವಕ್ಕೆ ಚ್ಯುತಿ, ಇಲ್ಲ ಸಲ್ಲದ ಅಪವಾದ, ಆತ್ಮೀಯ ಮಿತ್ರರು ದೂರವಾಗುವರು.

ಮಕರ: ಆರೋಗ್ಯದಲ್ಲಿ ಸಮಸ್ಯೆ, ಬುದ್ಧಿ ಮಂದತ್ವ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರೊಂದಿಗೆ ಕಲಹ, ಕಂಕಣ ಭಾಗ್ಯ ಒಲಿಯುವುದು.

ಕುಂಭ: ಮಾಟ-ಮಂತ್ರ ತಂತ್ರದ ಭೀತಿ, ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಹಣಕಾಸು ವಿಚಾರವಾಗಿ ಮೋಸ, ಈ ದಿನ ಅಶುಭ ಫಲ.

ಮೀನ: ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ವಾಸ್ತವ್ಯ, ದಾಂಪತ್ಯದಲ್ಲಿ ಮನಃಸ್ತಾಪ, ಸ್ಥಿರಾಸ್ತಿ ನಷ್ಟ, ವಾಹನ ರಿಪೇರಿ, ನಷ್ಟ-ಸಂಕಷ್ಟಗಳ ಆತಂಕ.