Connect with us

Dina Bhavishya

ದಿನ ಭವಿಷ್ಯ: 16-01-2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹಿಮಂತ ಋತು, ಪುಷ್ಯ ಮಾಸ,
ತೃತಿಯ / ಚತುರ್ಥಿ,
ಶನಿವಾರ, ಶತಭಿಷ ನಕ್ಷತ್ರ
ರಾಹುಕಾಲ: 09:41 ರಿಂದ 11:07
ಗುಳಿಕಕಾಲ: 06:48 ರಿಂದ 8:15
ಯಮಗಂಡಕಾಲ: 01:59 ರಿಂದ 03:25

ಮೇಷ: ವಾಹನ ಭೂಮಿಯಿಂದ ಅನುಕೂಲ, ಚರ್ಮ ರೋಗ, ಸುಸ್ತು, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ದುಡುಕಿನ ಮಾತಿನಿಂದ ಸಮಸ್ಯೆ, ವಿಪರೀತ ಕೋಪ ಆತಂಕ, ಅಪಜಯ.

ವೃಷಭ: ಯಂತ್ರೋಪಕರಣಗಳಿಗೆ ಖರ್ಚು, ಆತುರದ ನಿರ್ಧಾರದಿಂದ ಸಂಕಷ್ಟ, ಸಂಗಾತಿಯ ಬೇಜವಾಬ್ದಾರಿತನ, ದೂರ ಪ್ರದೇಶದಲ್ಲಿ ಉದ್ಯೋಗ ಅನುಕೂಲ, ಬಂಧು ಬಾಂಧವರಿಂದ ನಷ್ಟ, ಪಾಲುದಾರಿಕೆಯಲ್ಲಿ ಸಮಸ್ಯೆಗಳು.

ಮಿಥುನ: ದುಃಸ್ವಪ್ನಗಳು, ಶತ್ರು ಕಾಟ, ಕುಟುಂಬಸ್ಥರಿಂದ ವಿರೋಧ, ತಂದೆಯಿಂದ ಅಸಹಕಾರ, ಅಕ್ರಮ ಆಲೋಚನೆ, ಅನಾರೋಗ್ಯ, ಮಾತಿನಿಂದ ಸಂಕಷ್ಟ.

ಕಟಕ: ಉದ್ಯೋಗ ಲಾಭ, ಸ್ನೇಹಿತರಿಂದ ಸಹಕಾರ, ಸ್ತ್ರೀಯರಿಂದ ನೋವು, ಸ್ವಯಂಕೃತ ಅಪರಾಧದಿಂದ ತೊಂದರೆ, ಮಕ್ಕಳಿಂದ ಅದೃಷ್ಟ, ವಿದ್ಯಾಭ್ಯಾಸ ಪ್ರಗತಿ, ಸಂತಾನ ಚಿಂತೆ, ಪ್ರೀತಿ-ಪ್ರೇಮದಲ್ಲಿ ಗೊಂದಲ.

ಸಿಂಹ: ಸ್ಥಿರಾಸ್ತಿ ಯೋಗ, ಕೈಗಾರಿಕೆಯವರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಅದೃಷ್ಟ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ತೊಂದರೆ, ಉದ್ಯೋಗ ಒತ್ತಡಗಳು.

ಕನ್ಯಾ: ಕೋರ್ಟ್ ಕೇಸ್‍ಗಳ ಚಿಂತೆ, ಕಲಹಗಳು, ಅಪವಾದ ಅಪನಿಂದನೆ, ಸೋಲು ನಷ್ಟ ನಿರಾಸೆ, ಅನಗತ್ಯ ತಿರುಗಾಟ, ಮನೋರೋಗಗಳು, ಪತ್ರ ವ್ಯವಹಾರಗಳಲ್ಲಿ ಅನುಕೂಲ.

ತುಲಾ: ಅನಿರೀಕ್ಷಿತ ಧನಾಗಮನ, ಸಂಗಾತಿಯಿಂದ ಆರ್ಥಿಕ ನೆರವು, ಪಾಲುದಾರಿಕೆಯಲ್ಲಿ ಬೇಸರ, ಬೆಂಕಿ ಯಂತ್ರ ವಾಹನದಿಂದ ಜಾಗ್ರತೆ, ಉತ್ತಮ ಹೆಸರು ಮಾಡುವ ಹಂಬಲ, ಮಾತಿನಿಂದ ದಾಂಪತ್ಯದಲ್ಲಿ ತೊಂದರೆ.

ವೃಶ್ಚಿಕ: ಶತ್ರುಗಳಿಂದ ತೊಂದರೆ, ಆಲಸ್ಯ ಬೇಸರ, ದಾಂಪತ್ಯ ವಿರಸ, ಶತ್ರುಗಳು ಮತ್ತು ಸಾಲದ ಚಿಂತೆ, ತೀವ್ರ ಅನಾರೋಗ್ಯ, ಪ್ರಯಾಣದಲ್ಲಿ ಗೊಂದಲಗಳು, ವಸ್ತುಗಳು ಕಳವು.

ಧನಸ್ಸು: ಶತ್ರು ನಾಶ, ಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ, ಯಂತ್ರೋಪಕರಣಗಳಿಂದ ನಷ್ಟ, ಪ್ರಯಾಣದಲ್ಲಿ ಅಡೆತಡೆಗಳು, ವ್ಯವಹಾರದ ಚಿಂತೆ.

ಮಕರ: ಸ್ಥಿರಾಸ್ತಿಯಿಂದ ಶುಭಫಲ, ದೂರದ ವ್ಯಕ್ತಿಗಳಿಂದ ಅನುಕೂಲ, ರಕ್ತ ಸಂಬಂಧಿಗಳಿಂದ ನೋವು, ಮಾಟ ಮಂತ್ರ ತಂತ್ರದ ಸನ್ನಿವೇಶ, ತಾಯಿಂದ ಸಹಕಾರ, ಪ್ರೀತಿ-ಪ್ರೇಮದಲ್ಲಿ ಆತುರ, ದುಶ್ಚಟಗಳಿಂದ ತೊಂದರೆ.

ಕುಂಭ: ದಾಯಾದಿಗಳಿಂದ ತೊಂದರೆ, ಸ್ಥಿರಾಸ್ತಿ ವಾಹನ ಲಾಭ, ಮಹಿಳೆಯರಿಂದ ಅನುಕೂಲ, ನೆರೆಹೊರೆಯವರಿಂದ ಒತ್ತಡ, ಶತ್ರುಗಳಿಂದ ತೊಂದರೆ, ದುರ್ಘಟನೆಗಳ ಬಗ್ಗೆ ಚರ್ಚೆ, ಉದ್ಯೋಗ ಅನುಕೂಲ.

ಮೀನ: ಆರ್ಥಿಕ ಚೇತರಿಕೆ, ಅವಕಾಶ ಪ್ರಾಪ್ತಿ, ಮಹಿಳೆಯರಿಂದ ತೊಂದರೆ, ಪ್ರೇಮಿಗಳಲ್ಲಿ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಗೊಂದಲ, ದುಶ್ಚಟಗಳಿಂದ ನಷ್ಟ.

Click to comment

Leave a Reply

Your email address will not be published. Required fields are marked *