Connect with us

Dina Bhavishya

ದಿನ ಭವಿಷ್ಯ 14-03-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ವಾರ : ಭಾನುವಾರ,
ತಿಥಿ : ಪಾಡ್ಯ, ನಕ್ಷತ್ರ : ಉತ್ತರಾಭಾದ್ರ,

ರಾಹುಕಾಲ: 5.03 ರಿಂದ 6.37
ಗುಳಿಕಕಾಲ: 3.33 ರಿಂದ 5.03
ಯಮಗಂಡಕಾಲ: 12.32 ರಿಂದ 2.03

ಮೇಷ: ಯತ್ನ ಕಾರ್ಯ ಭಂಗ, ಮನಕ್ಲೇಷ, ಅಗ್ನಿಯಿಂದ ಭೀತಿ, ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ವಾಹನ ಅಪಘಾತ, ಮಿತ್ರರ ಜೊತೆ ಕಲಹ.

ವೃಷಭ: ಆದಾಯಕ್ಕಿಂತ ಖರ್ಚು ಜಾಸ್ತಿ, ಕುಟುಂಬದಲ್ಲಿ ಕಲಹ, ಅಧಿಕ ತಿರುಗಾಟ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ತೊಂದರೆ, ಋಣಭಾದೆ, ದೂರ ಪ್ರಯಾಣ, ಶತ್ರು ಭಾದೆ.

ಮಿಥುನ: ಅಧಿಕಾರಿಗಳಲ್ಲಿ ಕಲಹ, ಸಲ್ಲದ ಅಪವಾದ, ದುಃಖದಾಯಕ ಪ್ರಸಂಗಗಳು, ಸಾಲಭಾದೆ, ಮಾತಾಪಿತರಲ್ಲಿ ದ್ವೇಷ.

ಕಟಕ: ಆರೋಗ್ಯ ವೃದ್ಧಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಾಹನ ಯೋಗ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಕೃಷಿಯಲ್ಲಿ ನಷ್ಟ, ಅಧಿಕ ತಿರುಗಾಟ.

ಸಿಂಹ: ಮಿತ್ರರಿಂದ ತೊಂದರೆ, ಮನಸ್ತಾಪ, ವ್ಯರ್ಥ ಧನಹಾನಿ, ಪತ್ನಿಗೆ ಅನಾರೋಗ್ಯ, ಇಲ್ಲಸಲ್ಲದ ತಕರಾರು, ಉದ್ಯೋಗದಲ್ಲಿ ಬದಲಾವಣೆ, ಶತ್ರುಗಳಿಂದ ತೊಂದರೆ.

ಕನ್ಯಾ: ಉನ್ನತ ಉದ್ಯೋಗ ಪ್ರಾಪ್ತಿ, ನಾನಾ ರೀತಿಯ ಸಂಪಾದನೆ, ದ್ರವ್ಯಲಾಭ, ಪರರ ಧನ ಪ್ರಾಪ್ತಿ, ಧೈರ್ಯದಿಂದ ಮುನ್ನುಗ್ಗುವಿರಿ, ಭಾಗ್ಯ ವೃದ್ಧಿ.

ತುಲಾ: ದಾರಿದ್ರ್ಯ ಪರರಿಗೆ ವಂಚಿಸುವಿರಿ, ಋಣಭಾದೆ, ಶುಭ ವಾರ್ತೆ ಕೇಳುವಿರಿ, ನೀಚ ಜನರ ಸಹವಾಸ, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ.

ವೃಶ್ಚಿಕ: ದ್ರವ್ಯನಾಶ, ಚರ್ಮವ್ಯಾಧಿ, ಅಧಿಕ ಖರ್ಚು, ಅಪಕೀರ್ತಿ, ದಾಯಾದಿ ಕಲಹ, ವ್ಯಾಸಂಗದಲ್ಲಿ ತೊಂದರೆ, ಸೇವಕರಿಂದ ತೊಂದರೆ, ವಾಹನ ರಿಪೇರಿಯಿಂದ ಅಧಿಕ ಖರ್ಚು.

ಧನಸು: ದ್ರವ್ಯಲಾಭ, ಆರೋಗ್ಯ ವೃದ್ಧಿ, ಉದ್ಯೋಗದಲ್ಲಿ ಬಡ್ತಿ, ಇಷ್ಟಾರ್ಥಸಿದ್ಧಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಪುಷ್ಪ ಹಾರದಿಗಳಿಂದ ಸನ್ಮಾನ, ಸುಖ ಭೋಜನ.

ಮಕರ: ವಸ್ತ್ರ ಖರೀದಿ, ಅನೇಕ ಜನರಿಗೆ ವಿವಾಹಯೋಗ, ಸ್ತ್ರೀಯಿಂದ ಲಾಭ, ಮನೆ ಕಟ್ಟುವ ಯೋಗ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕೈಹಾಕಿದ ಕೆಲಸದಲ್ಲಿ ಪ್ರಗತಿ.

ಕುಂಭ: ರೋಗಗಳು, ಕುಟುಂಬದಲ್ಲಿ ಅಹಿತಕರ ವಾತಾವರಣ, ದೂರ ಪ್ರಯಾಣ, ಹಿತ ಶತ್ರುಗಳಿಂದ ತೊಂದರೆ, ಮನಸ್ತಾಪ, ಮೋಸ, ಯಾರನ್ನು ಹೆಚ್ಚಾಗಿ ನಂಬಬೇಡಿ.

ಮೀನ: ವಿರೋಧಿಗಳಿಂದ ತೊಂದರೆ, ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ, ಅನಾರೋಗ್ಯ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಸ್ತ್ರೀಯಿಂದ ತೊಂದರೆ, ಕೃಷಿಯಲ್ಲಿ ನಷ್ಟ.

 

Click to comment

Leave a Reply

Your email address will not be published. Required fields are marked *