Dina BhavishyaLatest

ದಿನ ಭವಿಷ್ಯ 12-12-2018

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಬುಧವಾರ, ಶ್ರವಣ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:17 ರಿಂದ 1:42
ಗುಳಿಕಕಾಲ: ಬೆಳಗ್ಗೆ 10:51 ರಿಂದ 12:17
ಯಮಗಂಡಕಾಲ: ಬೆಳಗ್ಗೆ 7:59 ರಿಂದ 9:25

ಮೇಷ: ಹಣಕಾಸು ವ್ಯವಹಾರದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ, ಉನ್ನತ ಶಿಕ್ಷಣಕ್ಕಾಗಿ ಮನಸ್ಸು, ಉತ್ತಮ ಯಶಸ್ಸು ಲಭಿಸುವುದು.

ವೃಷಭ: ಆದಾಯಕ್ಕೆ ತಕ್ಕ ಖರ್ಚು, ಉದ್ಯೋಗದಲ್ಲಿ ಅಭಿವೃದ್ಧಿ, ಶತ್ರುಗಳ ನಾಶ, ಪ್ರವಾಸ ಹೋಗುವ ಸಾಧ್ಯತೆ, ಮಗಳಿಂದ ಶುಭ ಸುದ್ದಿ.

ಮಿಥುನ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಬ್ಯಾಂಕ್ ಸಿಬ್ಬಂದಿಗಳಿಗೆ ಒತ್ತಡ, ಅತಿಯಾದ ಕೆಲಸ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

ಕಟಕ: ಹಿರಿಯರ ಸಹಾಯದಿಂದ ವ್ಯವಹಾರಗಳು ಸುಗಮ, ಆರೋಗ್ಯದಲ್ಲಿ ವ್ಯತ್ಯಾಸ, ಚಾಲಕರಿಗೆ ಶುಭ ದಿನ.

ಸಿಂಹ: ಕೋರ್ಟ್ ಕೇಸ್‍ಗಳಿಂದ ಪ್ರಯಾಣ, ಚೋರ ಭಯ, ಸಾಲ ಬಾಧೆ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ನಿಂದನೆ, ಶತ್ರುಗಳ ಬಾಧೆ.

ಕನ್ಯಾ: ಪ್ರೀತಿ ಸಮಾಗಮ, ಸ್ತ್ರೀಯರಿಗೆ ಅನುಕೂಲ, ದೈವಾನುಗ್ರಹ ಹೆಚ್ಚಿಸಿಕೊಳ್ಳುವಿರಿ, ಮನೆ ಖರೀದಿ ಸಾಧ್ಯತೆ, ಅಧಿಕವಾದ ಖರ್ಚು.

ತುಲಾ: ಅಲಂಕಾರಿಕ ವಸ್ತು ಮಾರಾಟದಿಂದ ಲಾಭ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರಿಗಳಿಗೆ ಲಾಭ, ವಾದ-ವಿವಾದಗಳಿಂದ ದೂರವಿರಿ.

ವೃಶ್ಚಿಕ: ಸಭೆ ಸಮಾರಂಭಗಳಲ್ಲಿ ಭಾಗಿ, ಕುಟುಂಬದಲ್ಲಿ ನೆಮ್ಮದಿ, ಚಂಚಲ ಮನಸ್ಸು, ಕೆಟ್ಟ ಆಲೋಚನೆ.

ಧನಸ್ಸು: ಕೃಷಿ ಉಪಕರಣಗಳ ಖರೀದಿ, ನೆಮ್ಮದಿ ಇಲ್ಲದ ಜೀವನ, ಬೇರೆಯವರಿಗೆ ಹೇಳಿಕೊಳ್ಳಲಾಗದ ಸಂಕಟ, ಹಿತ ಶತ್ರುಗಳಿಂದ ತೊಂದರೆ.

ಮಕರ: ಪ್ರಿಯ ಜನರ ಭೇಟಿ, ಗೌರವ ಕೀರ್ತಿ ಪ್ರಾಪ್ತಿ, ಸತ್ಕಾರ್ಯದಲ್ಲಿ ಆಸಕ್ತಿ, ದ್ರವ್ಯ ಲಾಭ, ಮಾಡುವ ಕೆಲಸದಲ್ಲಿ ಹಿಂಜರಿಕೆ.

ಕುಂಭ: ವಿದ್ಯಾರ್ಥಿಗಳಿಗೆ ಹಿನ್ನಡೆ, ಮೋಸದ ಜಾಲಕ್ಕೆ ಬೀಳುವಿರಿ, ವೈದ್ಯಕೀಯ ಕ್ಷೇತ್ರದವರಿಗೆ ಶುಭ.

ಮೀನ: ಷೇರು ವ್ಯವಹಾರಗಳಲ್ಲಿ ನಷ್ಟ, ಶರೀರದಲ್ಲಿ ಆತಂಕ ಹೆಚ್ಚುವುದು, ಆರೋಗ್ಯದಲ್ಲಿ ತೊಂದರೆ, ಮಾತಿನ ಚಕಮಕಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button