Connect with us

Dina Bhavishya

ದಿನ ಭವಿಷ್ಯ: 12-09-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣಪಕ್ಷ, ದಶಮಿ, ಶನಿವಾರ,
ಆರಿದ್ರ ನಕ್ಷತ್ರ/ಪುನರ್ವಸು ನಕ್ಷತ್ರ
ರಾಹುಕಾಲ: 9.15 ರಿಂದ 10:47
ಗುಳಿಕಕಾಲ: 6.12ರಿಂದ 07:43
ಯಮಗಂಡಕಾಲ: 01:51 ರಿಂದ 03:23

ಮೇಷ: ಮಾನಸಿಕವಾಗಿ ಸಂಕಟಗಳು ಬಾಧಿಸುವ ಸಾಧ್ಯತೆ, ಅನಗತ್ಯ ಬೇಸರದ ಪರಿಸ್ಥಿತಿಗಳು,
ತಾಯಿ ಆರೋಗ್ಯದಲ್ಲಿ ಏರುಪೇರು.

ವೃಷಭ: ಮಾನ ಅಪಮಾನಗಳು, ಪಾಲುದಾರಿಕೆಯಲ್ಲಿ ಆರ್ಥಿಕ ಮುಗ್ಗಟ್ಟು, ಕುಟುಂಬದ ಮಾನಹಾನಿ.

ಮಿಥುನ: ಧನಾಗಮನ, ವರ್ಗಾವಣೆಯಾಗುವ ಆತಂಕ, ಆರೋಗ್ಯದಲ್ಲಿ ವ್ಯತ್ಯಾಸಗಳು.

ಕಟಕ: ನಷ್ಟಗಳು ಉಂಟಾಗುವವು, ನಿದ್ರಾಭಂಗ, ಆಕಸ್ಮಿಕ ದುರ್ಘಟನೆಗಳು ನಡೆಯುವುವು.

ಸಿಂಹ: ಭೂಮಿಯಿಂದ ಲಾಭ, ಮಹಿಳೆಯರಿಂದ ತೊಂದರೆ, ಅಧಿಕ ಉಷ್ಣದಿಂದ ಬಾಯಿ ಹುಣ್ಣು.

ಕನ್ಯಾ: ಅಧಿಕ ಲಾಭ, ವಾಹನ ಚಾಲನೆಯಿಂದ ಪೆಟ್ಟು, ಮೊಂಡುವಾದ ಧೋರಣೆಯಿಂದ ತೊಂದರೆ.

ತುಲಾ: ಉದ್ಯೋಗ ಸಮಸ್ಯೆಯಿಂದ ನಿದ್ರಾಭಂಗ, ಮಾನಸಿಕವಾಗಿ ಕೆಟ್ಟ ಆಲೋಚನೆಗಳು, ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ನಿಂದನೆ.

ವೃಶ್ಚಿಕ: ಸಾಲಗಾರರಿಂದ ಮುಕ್ತಿ, ಮಿತ್ರರೊಂದಿಗೆ ದುಷ್ಟ ಕೆಲಸ, ದುರಾಚಾರಗಳಿಗೆ ಮುಂದಾಗುವಿರಿ, ಅನಿರೀಕ್ಷಿತವಾಗಿ ಪ್ರಯಾಣ ರದ್ದು.

ಧನಸ್ಸು: ಪ್ರೀತಿ-ಪ್ರೇಮದ ಪ್ರಸ್ತಾವನೆಗಳು, ದಾಂಪತ್ಯ ಸಮಸ್ಯೆಗಳು ಹೆಚ್ಚಾಗುವುದು, ಪ್ರೀತಿ ಪ್ರೇಮ ವಿಷಯಗಳಲ್ಲಿ ನಿರಾಸಕ್ತಿ.

ಮಕರ: ಸಾಲ ಮಾಡುವ ಪರಿಸ್ಥಿತಿ, ಸ್ವಂತ ಉದ್ಯಮದಿಂದ ಹಿಂದೆ ಸರಿಯುವಿರಿ, ಸಾಲದಿಂದ ತೊಂದರೆಗೆ ಸಿಲುಕುವಿರಿ.

ಕುಂಭ: ಬೆಳವಣಿಗೆಯಲ್ಲಿ ಕುಂಠಿತವಾಗುವುದು, ನಿಮಗೆ ಸಿಗಬೇಕಾದ ಮಾನ ಸನ್ಮಾನಗಳು ಬೇರೆಯವರ ಪಾಲು, ಕಲ್ಪನಾ ಭಾವಗಳಿಂದ ತೊಂದರೆಗೆ ಸಿಲುಕುವ ಸಂಭವ.

ಮೀನ: ತಾಯಿಂದ ಸಹಕಾರ, ಪ್ರೀತಿ-ಪ್ರೇಮದಲ್ಲಿ ಬಿರುಕು, ವಾಹನ ಖರೀದಿಗೆ ತಂದೆಯೊಂದಿಗೆ ಸಮಾಲೋಚನೆ.

Click to comment

Leave a Reply

Your email address will not be published. Required fields are marked *