Connect with us

Dina Bhavishya

ದಿನ ಭವಿಷ್ಯ: 12-05- 2020

Published

on

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಮಂಗಳವಾರ, ಉತ್ತರಾಷಾಢ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:29 ರಿಂದ 5:04
ಗುಳಿಕಕಾಲ: ಮಧ್ಯಾಹ್ನ 12:19 ರಿಂದ 1:54
ಯಮಗಂಡಕಾಲ: ಬೆಳಗ್ಗೆ 9:09 ರಿಂದ 10:44

ಮೇಷ: ಅಧಿಕವಾದ ಖರ್ಚು, ನಂಬಿಕಸ್ಥರಿಂದ ಮೋಸ, ಅಲ್ಪ ಕಾರ್ಯ ಸಿದ್ಧಿ, ಶತ್ರುಗಳ ನಾಶ, ಉದ್ಯೋಗದಲ್ಲಿ ಕಿರಿಕಿರಿ, ಈ ದಿನ ತಾಳ್ಮೆ ಅತ್ಯಗತ್ಯ.

ವೃಷಭ: ವ್ಯಾಪಾರದಲ್ಲಿ ಅಲ್ಪ ಲಾಭ, ಕುಟುಂಬ ಸೌಖ್ಯ, ಸುಖ ಭೋಜನ ಪ್ರಾಪ್ತಿ, ಬಂಧುಗಳಿಂದ ನಿಂದನೆ, ಆತ್ಮೀಯರಲ್ಲಿ ವೈಮನಸ್ಸು.

ಮಿಥುನ: ಆಸ್ತಿ ವಿಚಾರದಲ್ಲಿ ಕಲಹ, ಸ್ವಯಂಕೃತ ಅಪರಾಧದಿಂದ ನಷ್ಟ, ಮಾನಸಿಕ ವ್ಯಥೆ, ವಾದ-ವಿವಾದಗಳು ಹೆಚ್ಚಾಗುವುದು, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.

ಕಟಕ: ಮನೆಯಲ್ಲಿ ಸಂತಸ, ಋಣ ಬಾಧೆ, ಕೃಷಿಕರಿಗೆ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ, ಚಿನ್ನಾಭರಣ-ಹಣ ನಷ್ಟ ಸಾಧ್ಯತೆ.

ಸಿಂಹ: ಮಕ್ಕಳಿಂದ ನೋವು, ಮನಸ್ಸಿಗೆ ಬೇಸರ, ಸಾಲ ಬಾಧೆ, ವಿದ್ಯಾರ್ಥಿಗಳಿಗೆ ಹಿನ್ನಡೆ, ಕುಟುಂಬದಲ್ಲಿ ಪ್ರೀತಿ, ಆಕಸ್ಮಿಕ ಧನವ್ಯಯ.

ಕನ್ಯಾ: ಆರೋಗ್ಯದ ಕಡೆ ಗಮನಹರಿಸಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಹಿರಿಯರಲ್ಲಿ ಶ್ರದ್ಧೆ ವಿನಯತೆ, ಕೆಲಸ ಕಾರ್ಯಗಳಲ್ಲಿ ಅಲ್ಪ ಮುನ್ನಡೆ, ಹಣಕಾಸು ಪರಿಸ್ಥಿತಿ ಚೇತರಿಕೆ.

ತುಲಾ: ಮಿತ್ರರಿಂದ ಸಲಹೆ, ವಾಸಗೃಹದಲ್ಲಿ ತೊಂದರೆ, ತಾಳ್ಮೆ ವಹಿಸುವುದು ಉತ್ತಮ, ಸಣ್ಣ ಪುಟ್ಟ ವಿಚಾರಗಳಿಂದ ಕಿರಿಕಿರಿ, ಅನಗತ್ಯ ಮನಃಸ್ತಾಪ, ಯೋಚಿಸಿ ನಿರ್ಧಾರ ಕೈಗೊಳ್ಳಿ.

ವೃಶ್ಚಿಕ: ಯಾರನ್ನೂ ಹೆಚ್ಚು ನಂಬಬೇಡಿ, ಶೀತ ಸಂಬಂಧಿತ ರೋಗ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಹಣಕಾಸು ನಷ್ಟ, ಆತ್ಮೀಯರಲ್ಲಿ ಮನಃಸ್ತಾಪ, ಅಕಾಲ ಭೋಜನ.

ಧನಸ್ಸು: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿಚಾರಗಳ ಬಗ್ಗೆ ಚರ್ಚೆ ಮಾಡುವಿರಿ, ಮಾನಸಿಕ ವೇದನೆ, ಮನೆಯಲ್ಲಿ ಗೊಂದಲದ ವಾತಾವರಣ, ಮನಸ್ಸಿನಲ್ಲಿ ಆತಂಕ,

ಮಕರ: ಆತುರ ಸ್ವಭಾವ, ಭವಿಷ್ಯದ ಆಲೋಚನೆ, ಅಧಿಕವಾದ ಖರ್ಚು, ಮಾತಿನ ಮೇಲೆ ಹಿಡಿತ ಅಗತ್ಯ, ಕೆಲಸದಲ್ಲಿ ಅಧಿಕ ಒತ್ತಡ.

ಕುಂಭ: ಅನ್ಯ ಜನರಲ್ಲಿ ವೈಮನಸ್ಸು, ಯತ್ನ ಕಾರ್ಯಗಳಲ್ಲಿ ವಿಳಂಬ, ಉತ್ತಮ ಬುದ್ಧಿಶಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಸಮಾಧಾನವಾಗಿರುವುದು ಉತ್ತಮ.

ಮೀನ: ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರುಗಳ ಬಾಧೆ, ವ್ಯಾಪಾರದಲ್ಲಿ ಲಾಭ, ದಾಂಪತ್ಯದಲ್ಲಿ ವಿರಸ, ಆರೋಗ್ಯದಲ್ಲಿ ವಿಪರೀತ ತೊಂದರೆ.