Connect with us

ದಿನ ಭವಿಷ್ಯ 11-04-2021

ದಿನ ಭವಿಷ್ಯ 11-04-2021

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ,ಕೃಷ್ಣಪಕ್ಷ.
ವಾರ : ಭಾನುವಾರ, ತಿಥಿ : ಅಮಾವಾಸ್ಯೆ
ನಕ್ಷತ್ರ : ಉತ್ತರಾಭಾದ್ರ

ರಾಹುಕಾಲ:5.03 ರಿಂದ 6.35
ಗುಳಿಕಕಾಲ :3.30 ರಿಂದ 5.03
ಯಮಗಂಡಕಾಲ :12.25 ರಿಂದ1.57

ಮೇಷ: ವ್ಯಾಪಾರದಲ್ಲಿ ಅಲ್ಪ ಲಾಭ, ಅಧಿಕಾರಿಗಳಿಂದ ತೊಂದರೆ, ಮನಸ್ಸಿಗೆ ಚಿಂತೆ, ಅನಗತ್ಯ ತಿರುಗಾಟ, ವಿರೋಧಿಗಳಿಂದ ತೊಂದರೆ, ಕುಟುಂಬದಲ್ಲಿ ಅಹಿತಕರ ವಾತಾವರಣ, ಹಣದ ಅಡಚಣೆ.

ವೃಷಭ: ಆರೋಗ್ಯದಲ್ಲಿ ಚೇತರಿಕೆ, ಧನಾಗಮನ, ಸಜ್ಜನರ ಸಹವಾಸದಿಂದ ಕೀರ್ತಿ, ಮನಸ್ಸಿಗೆ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಪರಸ್ಥಳ ವಾಸ, ವ್ಯರ್ಥ ಧನಹಾನಿ.

ಮಿಥುನ: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಕುಟುಂಬ ಸೌಖ್ಯ, ಬಂಧುಮಿತ್ರರ ಭೇಟಿ, ಮನಶಾಂತಿ, ಶುಭಕಾರ್ಯಗಳಲ್ಲಿ ಭಾಗಿ, ವಸ್ತ್ರಾಭರಣ ಖರೀದಿ, ಸಂತಸದ ಸಮಾಚಾರ ಕೇಳುವಿರಿ.

ಕಟಕ: ಪ್ರಿಯ ಜನರ ಭೇಟಿ, ಸ್ಥಿರಾಸ್ತಿ ಸಂಪಾದನೆ, ಸೇವಕರಿಂದ ಸಹಾಯ, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ಶುಭಫಲಗಳು ಪ್ರಾಪ್ತಿ, ಯತ್ನ ಕಾರ್ಯ ಅನುಕೂಲ, ಭೂಲಾಭ, ಕೃಷಿಯಲ್ಲಿ ಲಾಭ.

ಸಿಂಹ: ಮನೆಯಲ್ಲಿ ಶಾಂತಿಯ ವಾತಾವರಣ, ಬಂಧುಗಳ ಆಗಮನ, ಅಧಿಕ ಖರ್ಚು, ಪುಣ್ಯಕ್ಷೇತ್ರ ದರ್ಶನ, ದೂರ ಪ್ರಯಾಣ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಸರ್ಕಾರಿ ಕೆಲಸಗಳಲ್ಲಿ ಅಡಚಣೆ.

ಕನ್ಯಾ: ಕಾರ್ಯಸಾಧನೆಗಾಗಿ ತಿರುಗಾಟ, ವ್ಯವಹಾರಗಳಲ್ಲಿ ಲಾಭ, ದಾಯಾದಿ ಕಲಹ, ಅತಿಯಾದ ಭಯ, ಮನಕ್ಲೇಷ, ಬಂಧು ಮಿತ್ರರಲ್ಲಿ ವಿರೋಧ, ಋಣಭಾದೆ, ಶತ್ರು ಭಾದೆ, ಹಣಕಾಸಿನ ತೊಂದರೆ, ದುಷ್ಟ ಜನರಿಂದ ದೂರವಿರಿ.

ತುಲಾ: ಆರ್ಥಿಕ ಪರಿಸ್ಥಿತಿ ಏರು-ಪೇರು, ಮಕ್ಕಳಿಂದ ತೊಂದರೆ, ಅಪವಾದ ನಿಂದನೆ, ಶತ್ರುಭಾದೆ, ಅಕಾಲ ಭೋಜನ, ಆಲಸ್ಯ ಮನೋಭಾವ, ಅವಿವಾಹಿತರಿಗೆ ವಿವಾಹಯೋಗ, ಸ್ತ್ರೀ ಲಾಭ, ಕಾರ್ಯ ವಿಕಲ್ಪ.

ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಸಾಲಭಾದೆ, ಅನ್ಯ ಜನರಲ್ಲಿ ದ್ವೇಷ, ಕೋಪ ಜಾಸ್ತಿ, ದ್ರವ್ಯನಾಶ, ಶೀತ ಸಂಬಂಧ ರೋಗಗಳು, ಕುಲದೇವರ ದರ್ಶನದಿಂದ ಅನುಕೂಲ.

ಧನಸು: ಮಾನಸಿಕ ಒತ್ತಡ, ಗಣ್ಯ ವ್ಯಕ್ತಿ ಯೊಬ್ಬರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಮನಃಶಾಂತಿ, ಯತ್ನ ಕಾರ್ಯಗಳಲ್ಲಿ ಜಯ, ಸ್ನೇಹಿತರಿಂದ ಸಹಾಯ,

ಮಕರ: ಆಕಸ್ಮಿಕ ಧನಲಾಭ, ಮಹಿಳೆಯರಿಗೆ ಅನುಕೂಲಕರ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ, ಸುಖ ಭೋಜನ, ವಿವಾಹ ಯೋಗ, ತಾಳ್ಮೆ ಅಗತ್ಯ, ಮಾತುಗಳಿಂದ ಕಲಹ ಸಂಭವ.

ಕುಂಭ: ದೂರ ಪ್ರಯಾಣ, ಬಾಕಿ ವಸೂಲಿ ಮಾಡುವ ಸಂಭವ, ವ್ಯವಹಾರದಲ್ಲಿ ದೃಷ್ಟಿ ದೋಷ, ದಂಡ ಕಟ್ಟುವಿರಿ ಜಾಗ್ರತೆ, ಮನಸ್ಸಿನಲ್ಲಿ ಗೊಂದಲ.

ಮೀನ: ಇಷ್ಟ ವಸ್ತುಗಳ ಖರೀದಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಪಿತ್ರಾರ್ಜಿತ ಆಸ್ತಿಗಳಿಕೆ, ಮಾತೃವಿನಿಂದ ಧನಸಹಾಯ, ಪರಿಶ್ರಮಕ್ಕೆ ತಕ್ಕ ವರಮಾನ, ವಾರಾಂತ್ಯದಲ್ಲಿ ಧನಲಾಭ, ವಿವಾಹ ಯೋಗ.

Advertisement
Advertisement
Advertisement