Connect with us

Dina Bhavishya

ದಿನ ಭವಿಷ್ಯ: 01-01-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರಮಾಸ,
ಕೃಷ್ಣಪಕ್ಷ, ದ್ವಿತೀಯ (ಬೆಳಗ್ಗೆ 09:35)
ತೃತೀಯ”, ಶುಕ್ರವಾರ, “ಪುಷ್ಯ ನಕ್ಷತ್ರ”

ರಾಹುಕಾಲ: 11: 1ರಿಂದ 12: 27
ಗುಳಿಕಕಾಲ: 08 :09 ರಿಂದ 09:35
ಯಮಗಂಡಕಾಲ: 3:18 ರಿಂದ 04:44

ಮೇಷ: ಕೋರ್ಟ್ ಕೇಸುಗಳಲ್ಲಿ ಜಯ, ಆರೋಗ್ಯ ಸಮಸ್ಯೆಗಳು ಕಾಣಿಸುವುದು, ಬಂಧುಗಳಿಂದ ಆರ್ಥಿಕ ನಷ್ಟ.

ವೃಷಭ: ಸ್ವಂತ ಉದ್ಯಮ ಅಥವಾ ಉದ್ಯೋಗದಲ್ಲಿರುವವರಿಗೆ ಅನುಕೂಲ, ನೆರೆಹೊರೆಯವರಿಂದ ಅಪ ನಿಂದನೆ, ಅಪಕೀರ್ತಿ, ಮಾನಹಾನಿ, ಪಿತ್ರಾರ್ಜಿತ ಆಸ್ತಿಗಾಗಿ ಅಧಿಕ ಖರ್ಚು.

ಮಿಥುನ: ಸ್ಥಿರಾಸ್ತಿ ಮಾರಾಟದಿಂದ ನಷ್ಟ, ತಂದೆಯ ಬಂಧುಗಳಿಂದ ಅಥವಾ ಸರ್ಕಾರದಿಂದ ಅನುಕೂಲ, ಕುಟುಂಬದಲ್ಲಿ ಆತಂಕದ ಬೆಳವಣಿಗೆ.

ಕಟಕ: ಬಂಧುಬಾಂಧವರ ಭೇಟಿ, ಸಹೋದರಿ ಅಥವಾ ಸೋದರ ಮಾವನಿಂದ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ.

ಸಿಂಹ: ತಂದೆಯಿಂದ ಧನಾಗಮನ, ಸರ್ಕಾರಿ ಉನ್ನತ ಹುದ್ದೆಯಲ್ಲಿರುವವರಿಗೆ ಬಡ್ತಿ, ಉದ್ಯೋಗ ಅಥವಾ ಕೆಲಸಕಾರ್ಯಗಳಿಗಾಗಿ ಹಣಕೊಟ್ಟು ಮೋಸ.

ಕನ್ಯಾ: ಸ್ವಂತ ಕೆಲಸಕಾರ್ಯಗಳಿಗೆ ಸರ್ಕಾರದಿಂದ ಅಥವಾ ಸರ್ಕಾರಿ ಅಧಿಕಾರಿಗಳಿಂದ ತಡೆ, ಪೂರ್ವಜರ ಆಸ್ತಿ ಅಥವಾ ಹಣ ಆಕಸ್ಮಿಕವಾಗಿ ಲಭಿಸುವುದು, ಅಕ್ರಮ ಹಣಗಳಿಕೆ ಯೋಚನೆ.

ತುಲಾ: ಉದ್ಯೋಗ ನಷ್ಟ, ದಾಂಪತ್ಯ ಕಲಹಗಳಿಂದ ನಿದ್ರಾಭಂಗ, ಆಕಸ್ಮಿಕ ಪ್ರಯಾಣ ಮತ್ತು ಅವಕಾಶ.

ವೃಶ್ಚಿಕ: ಸೇವಾವೃತ್ತಿ ಉದ್ಯೋಗ, ಲಾಭ, ಭೂವ್ಯಾಜ್ಯ ಗಳಿಂದ ಮುಕ್ತಿ, ಅಕ್ರಮ ಅಥವಾ ದೂರಾಲೋಚನೆ ಗಳಿಗೆ ಬಲಿ.

ಧನಸ್ಸು: ಸ್ನೇಹಿತರು ಶತ್ರುಗಳಾಗುವರು, ಉದ್ಯೋಗ ಸ್ಥಳದಲ್ಲಿ ಆತಂಕ, ಮಕ್ಕಳಲ್ಲಿ ಅಹಂಭಾವ ಮೊಂಡುತನ.

ಮಕರ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವರು, ತಂದೆಯಿಂದ ಮನೋವ್ಯಾಧಿ, ವಾಹನ ಅಪಘಾತಗಳಾಗುವ ಸಂಭವ ಎಚ್ಚರ.

ಕುಂಭ: ವಿಪರೀತ ರಾಜಯೋಗ ದಿನ, ಸಂಗಾತಿಯ ಬಂಧುಗಳ ಆಗಮನ ಮಕ್ಕಳಿಂದ ಆಸ್ತಿ ಅಥವಾ ವಾಹನ ಕೊಳ್ಳುವ ಯೋಗ.

ಮೀನ: ಆತ್ಮಗೌರವ ಮತ್ತು ಭಾವನೆಗಳಿಗೆ ಪೆಟ್ಟು, ಅಧಿಕ ಉಷ್ಣದಿಂದ ಬಾಯಿ ಗಂಟಲು ಉರಿ, ಸಾಲದ ಹಣ ಮರುಪಾವತಿ.

Click to comment

Leave a Reply

Your email address will not be published. Required fields are marked *

www.publictv.in