Thursday, 23rd January 2020

Recent News

ದಿನ ಭವಿಷ್ಯ: 07-12-2019

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಬೆಳಗ್ಗೆ 7:37 ನಂತರ ಏಕಾದಶಿ ತಿಥಿ,
ಶನಿವಾರ, ರೇವತಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:22 ರಿಂದ 10:48
ಗುಳಿಕಕಾಲ: ಬೆಳಗ್ಗೆ 6:31 ರಿಂದ 7:56
ಯಮಗಂಡಕಾಲ: ಮಧ್ಯಾಹ್ನ 1:40 ರಿಂದ 3:06

ಮೇಷ: ಸ್ನೇಹಿತರೊಂದಿಗೆ ಮನಃಸ್ತಾಪ, ಆರೋಗ್ಯದಲ್ಲಿ ಏರುಪೇರು, ಚಿಂತೆಯಿಂದ ನಿದ್ರಾಭಂಗ, ಸಾಲ ಬಾಧೆ, ಶತ್ರುಗಳ ಕಾಟ, ನೆರೆಹೊರೆಯವರಿಂದ ಕಿರಿಕಿರಿ, ಮನಸ್ಸಿನಲ್ಲಿ ಆತಂಕ.

ವೃಷಭ: ಉದ್ಯೋಗದಲ್ಲಿ ಒತ್ತಡ, ಇಲ್ಲ ಸಲ್ಲದ ಅಪವಾದ, ದೇವತಾ ಕಾರ್ಯಗಳಿಗಾಗಿ ಖರ್ಚು, ವಿಪರೀತ ವೆಚ್ಚ, ಮಕ್ಕಳ ಕುಟುಂಬದಲ್ಲಿ ಕಿರಿಕಿರಿ.

ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಪ್ರಯಾಣದಲ್ಲಿ ಕಿರಿಕಿರಿ, ಸ್ಥಿರಾಸ್ತಿ-ವಾಹನದಿಂದ ಲಾಭ, ಮಾತೃವಿನಿಂದ ಧನಾಗಮನ.

ಕಟಕ: ಉದ್ಯೋಗ ನಿಮಿತ್ತ ಪ್ರಯಾಣ, ದೇವತಾ ಕಾರ್ಯಗಳಿಗೆ ಮನಸ್ಸು, ಹಣಕಾಸು ಸಂಕಷ್ಟ, ಕುಟುಂಬದಲ್ಲಿ ಆತಂಕ, ಬೇಜವಾಬ್ದಾರಿಯಿಂದ ವಸ್ತು ಕಳೆದುಕೊಳ್ಳುವಿರಿ.

ಸಿಂಹ: ಅನಿರೀಕ್ಷಿತ ಧನಾಗಮನ, ದಾಂಪತ್ಯದಲ್ಲಿ ವಿರಸ, ಬಂಧುಗಳ ವಿಚಾರದಲ್ಲಿ ಮನಃಸ್ತಾಪ, ಕುಟುಂಬಕ್ಕಾಗಿ ಖರ್ಚು, ದೇವತಾ ಕಾರ್ಯಗಳಿಗೆ ವೆಚ್ಚ.

ಕನ್ಯಾ: ಸ್ವಯಂ ಕೃತ್ಯಗಳಿಂದ ತೊಂದರೆ, ಸಂಸಾರದಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ನಷ್ಟ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಆಲೋಚನೆಗಳಿಂದ ನಿದ್ರಾಭಂಗ, ಕೆಲಸಗಳಲ್ಲಿ ಒತ್ತಡ.

ತುಲಾ: ಸಂತಾನ ವಿಚಾರದಲ್ಲಿ ದಾಂಪತ್ಯದಲ್ಲಿ ವಿರಸ, ದೂರದ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಭಾವನೆಗಳಿಗೆ ಧಕ್ಕೆ, ಜೀವನದಲ್ಲಿ ನಿರಾಸೆ ಜಿಗುಪ್ಸೆ.

ವೃಶ್ಚಿಕ: ಆಕಸ್ಮಿಕ ಪ್ರಯಾಣ, ವಿಪರೀತ ಉಷ್ಣ ಬಾಧೆ, ತಲೆ ನೋವು, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಕಿರಿಕಿರಿ, ಸಾಲಗಾರರಿಂದ ಶತ್ರುಗಳಿಂದ ಮಾನಹಾನಿ.

ಧನಸ್ಸು: ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಮಕ್ಕಳ ಸಣ್ಣ ತಪ್ಪುಗಳಿಂದ ಕಲಹ, ದಾಂಪತ್ಯ ಜೀವನದಲ್ಲಿ ನೆಮ್ಮದಿಗೆ ಭಂಗ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.

ಮಕರ: ಶತ್ರುಗಳೊಂದಿಗೆ ವಾಗ್ವಾದ, ಅಜೀರ್ಣ ಸಮಸ್ಯೆ, ನರ ದೌರ್ಬಲ್ಯ, ಚರ್ಮ ರೋಗ ಬಾಧೆ, ಮನಸ್ಸಿನಲ್ಲಿ ಆತಂಕ, ಮಾಟ ಮಂತ್ರದ ಭೀತಿ.

ಕುಂಭ: ಮಕ್ಕಳು ಅನಗತ್ಯ ತಿರುಗಾಡುವರು, ಬಂಧುಗಳಿಂದ ಆರ್ಥಿಕ ನೆರವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ.

ಮೀನ: ಮಕ್ಕಳು ಆಗಮನದ ನಿರೀಕ್ಷೆ, ನೀವಾಡುವ ಮಾತಿನಿಂದ ಸಮಸ್ಯೆ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ದಾಂಪತ್ಯದಲ್ಲಿ ವಿರಸ, ಅಧಿಕ ಚಿಂತೆಯಿಂದ ನಿದ್ರಾಭಂಗ, ಕನಸಿನಲ್ಲಿ ಸರ್ಪಗಳು ಕಾಣಿಸುವುದು.

Leave a Reply

Your email address will not be published. Required fields are marked *