Connect with us

Dina Bhavishya

ದಿನ ಭವಿಷ್ಯ: 06-06-2020

Published

on

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
ಗುರುವಾರ, ಜೇಷ್ಠ ನಕ್ಷತ್ರ
ಮಧ್ಯಾಹ್ನ 3:11 ನಂತರ ಮೂಲಾ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:11 ರಿಂದ 10:46
ಗುಳಿಕಕಾಲ: ಬೆಳಗ್ಗೆ 5:57 ರಿಂದ 7:34
ಯಮಗಂಡಕಾಲ: ಮಧ್ಯಾಹ್ನ 1:58 ರಿಂದ 3:34

ಮೇಷ: ಬಂಧು ಮಿತ್ರರಿಂದ ನೆರವು, ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ, ಬಡ್ಡಿ ವ್ಯವಹಾರದಲ್ಲಿ ತೊಂದರೆ, ವ್ಯಾಪಾರದಲ್ಲಿ ನಷ್ಟ, ಪಿತ್ರಾರ್ಜಿತ ಆಸ್ತಿ ತಗಾದೆ ಶಮನ ಸಾಧ್ಯತೆ, ಕೋರ್ಟ್ ಕೇಸ್‍ಗಳಲ್ಲಿ ಜಯದ ಸೂಚನೆ.

ವೃಷಭ: ಸ್ಥಿರಾಸ್ತಿಯ ಮೇಲೆ ಸಾಲ ಮಾಡುವ ಸಾಧ್ಯತೆ, ಉದ್ಯೋಗ-ವ್ಯಾಪಾರದಲ್ಲಿ ಅನುಕೂಲ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಆಸೆ ಆಕಾಂಕ್ಷೆಗಳು ಈಡೇರುವುದಿಲ್ಲ, ನಿರಾಸೆಯ ದಿನ ನಿಮ್ಮದಾಗುವುದು.

ಮಿಥುನ: ಉದ್ಯೋಗ ಬದಲಾವಣೆಗೆ ಅವಕಾಶ, ಉತ್ತಮ ಹೆಸರು ಗೌರವ ಪ್ರಾಪ್ತಿ, ಸ್ಥಿರಾಸ್ತಿ ವ್ಯವಹಾರದಲ್ಲಿ ಅನುಕೂಲ, ಗೃಹ, ಸ್ಥಳ ಬದಲಾವಣೆಗೆ ಶುಭ ಕಾಲ, ಮಕ್ಕಳಿಂದ ಆರ್ಥಿಕ ನೆರವು, ಆಹಾರ-ವಾತಾವರಣ ವ್ಯತ್ಯಾಸದಿಂದ ಅನಾರೋಗ್ಯ.

ಕಟಕ: ಕೃಷಿ ಭೂಮಿಯಿಂದ ಅನುಕೂಲ, ವಾಹನ ಚಾಲಕರಿಗೆ ಲಾಭ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉದ್ಯೋಗ-ವ್ಯಾಪಾರದಲ್ಲಿ ನಷ್ಟ, ದುಶ್ಚಟಗಳು ಹೆಚ್ಚಾಗುವುದು, ಮನಸ್ಸಿನಲ್ಲಿ ಕೆಟ್ಟಾಲೋಚನೆ.

ಸಿಂಹ: ಆರೋಗ್ಯಕ್ಕಾಗಿ ಅಧಿಕ ಖರ್ಚು, ಬಂಧು-ಮಿತ್ರರಿಂದ ಸಹಾಯ ಕೇಳುವಿರಿ, ಹಣಕಾಸು ಸಂಕಷ್ಟ, ಮಕ್ಕಳ ಭವಿಷ್ಯದ ಚಿಂತೆ, ಶುಭ ಕಾರ್ಯಕ್ಕಾಗಿ ಓಡಾಟ-ಯೋಚನೆ, ಮಾನಸಿಕ ಕಿರಿಕಿರಿ, ಅಧಿಕವಾದ ಚಿಂತೆ.

ಕನ್ಯಾ: ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಧಾರ್ಮಿಕ ಗುರುಗಳ ಭೇಟಿ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ, ಅಧಿಕವಾದ ಖರ್ಚು, ವ್ಯಾಪಾರ ಆರಂಭಕ್ಕೆ ಶುಭ ದಿನ, ಕೆಲಸ ಕಾರ್ಯಗಳಲ್ಲಿ ಜಯ.

ತುಲಾ: ಹಣ, ಉದ್ಯೋಗ ನಿಮಿತ್ತ ಪ್ರಯಾಣ, ಕೃಷಿ ಉತ್ಪನ್ನ ಖರೀದಿಗಾಗಿ ಖರ್ಚು, ಉದ್ಯೋಗ ವ್ಯಾಪಾರಕ್ಕಾಗಿ ವೆಚ್ಚ, ಸ್ಥಿರಾಸ್ತಿ ತಗಾದೆ, ಅನಗತ್ಯ ಮಾತುಗಳಿಂದ ವಾಗ್ವಾದ.

ವೃಶ್ಚಿಕ: ದೂರ ಪ್ರದೇಶದಲ್ಲಿ ಉತ್ತಮ ಹೆಸರು, ಉದ್ಯೋಗ ಲಭಿಸುವ ಸಾಧ್ಯತೆ, ಕೆಲಸದಲ್ಲಿ ಕಿರಿಕಿರಿ, ಅಧಿಕವಾದ ಖರ್ಚು, ಸ್ವಯಂಕೃತ ಅಪರಾಧದಿಂದ ಸಂಕಷ್ಟ, ಪ್ರಯಾಣಕ್ಕೆ ಅಡೆತಡೆ, ಕೆಲಸ ಕಾರ್ಯಗಳಲ್ಲಿ ವಿಘ್ನ.

ಧನಸ್ಸು: ಉದ್ಯೋಗಾವಕಾಶಗಳು ಪ್ರಾಪ್ತಿ, ದೂರ ಪ್ರದೇಶಕ್ಕೆ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮಿತ್ರರಿಂದ ಅನುಕೂಲ, ಪ್ರಯಾಣದಲ್ಲಿ ಸುಖಕರ ವಾತಾವರಣ.

ಮಕರ: ಸಂಗಾತಿಯಿಂದ ಲಾಭ, ಆಕಸ್ಮಿಕ ಉದ್ಯೋಗ ಪ್ರಾಪ್ತಿ, ಅಧಿಕ ಆಯಾಸ, ಗ್ಯಾಸ್ಟ್ರಿಕ್, ನರದೌರ್ಬಲ್ಯ, ತಲೆ ನೋವು, ಆರೋಗ್ಯದಲ್ಲಿ ವ್ಯತ್ಯಾಸ, ಯೋಚಿಸಿ ನಿರ್ಧಾರ ಕೈಗೊಳ್ಳಿ.

ಕುಂಭ: ಉದ್ಯೋಗ ಸ್ಥಳದಲ್ಲಿ ಮಿತ್ರರಿಂದ ಅವಮಾನ, ಸಾಲದಿಂದ ಸಂಕಷ್ಟ-ನಿಂದನೆ, ಪ್ರೇಮ ವಿಚಾರದಲ್ಲಿ ಯಶಸ್ಸು, ಕುಟುಂಬದಲ್ಲಿ ಸಹಕಾರ ಲಭಿಸುವುದು, ಮೇಲಾಧಿಕಾರಿಗಳಿಂದ ಪ್ರಶಂಸೆ.

ಮೀನ: ವಿಚ್ಛೇದನ ಕೇಸ್‍ಗಳಲ್ಲಿ ಜಯ, ದಾಂಪತ್ಯದಲ್ಲಿ ಕಲಹ ಶಮನ, ಮೇಲಾಧಿಕಾರಿಗಳಿಂದ ಕಿರಿಕಿರಿ, ಉದ್ಯೋಗ ಕಳೆದುಕೊಳ್ಳುವ ಆತಂಕ, ಸ್ಥಿರಾಸ್ತಿ ತಗಾದೆ, ಕೋರ್ಟ್ ಕೇಸ್‍ಗಳಲ್ಲಿ ಓಡಾಟ, ಹಿರಿಯರಿಂದ ಗೊಂದಲ ನಿವಾರಣೆ.