Connect with us

Dina Bhavishya

ದಿನ ಭವಿಷ್ಯ: 01-07-2020

Published

on

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಬುಧವಾರ, ವಿಶಾಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:27 ರಿಂದ 2:03
ಗುಳಿಕಕಾಲ: ಬೆಳಗ್ಗೆ 10:51 ರಿಂದ 12:27
ಯಮಗಂಡಕಾಲ: ಬೆಳಗ್ಗೆ 7:39 ರಿಂದ 9:15

ಮೇಷ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸ್ತ್ರೀಯರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಹಣಕಾಸು ಲಾಭ, ಅಧಿಕ ತಿರುಗಾಟ, ವಾದ-ವಿವಾದ ಹೆಚ್ಚಾಗುವುದು.

ವೃಷಭ: ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ, ನಿರೀಕ್ಷಿತ ಲಾಭ ಲಭಿಸುವುದು, ಮಾನಸಿಕ ನೆಮ್ಮದಿ, ಆತ್ಮೀಯರಿಂದ ಹೊಗಳಿಕೆ, ದಾಂಪತ್ಯದಲ್ಲಿ ಪ್ರೀತಿ.

ಮಿಥುನ: ದುಷ್ಟರಿಂದ ದೂರವಿರಿ, ಯತ್ನ ಕಾರ್ಯಗಳಲ್ಲಿ ಜಯ, ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ.

ಕಟಕ: ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ, ಉತ್ತಮ ಫಲ, ಶೀತ ಸಂಬಂಧಿತ ಸಮಸ್ಯೆ, ವಿವಾದಗಳಿಗೆ ಅಸ್ಪಾದಕೊಡಬೇಡಿ, ಹಿತ ಶತ್ರುಗಳ ಬಾಧೆ.

ಸಿಂಹ: ಪ್ರಭಾವಿ ವ್ಯಕ್ತಿಗಳ ಭೇಟಿ, ಅಲ್ಪ ಕಾರ್ಯ ಸಿದ್ಧಿ, ಚಂಚಲ ಮನಸ್ಸು, ಕ್ರಯ-ವಿಕ್ರಯಗಳಿಂದ ಲಾಭ, ಮಿಶ್ರ ಫಲ ಯೋಗ ಪ್ರಾಪ್ತಿ.

ಕನ್ಯಾ: ವಿದ್ಯಾರ್ಥಿಗಳಲ್ಲಿ ಗೊಂದಲ, ನೆಮ್ಮದಿ ಇಲ್ಲದ ಜೀವನ, ಕಾರ್ಯ ಸಾಧನೆಗಾಗಿ ಓಡಾಟ, ಪರಿಶ್ರಮಕ್ಕೆ ತಕ್ಕ ಫಲ, ಆತ್ಮೀಯರ ಮೇಲೆ ಅತಿಯಾದ ನಂಬಿಕೆ, ಯತ್ನ ಕಾರ್ಯದಲ್ಲಿ ಅನುಕೂಲ.

ತುಲಾ: ದುಶ್ಚಟಗಳು ಹೆಚ್ಚಾಗುವುದು, ಪೆಟ್ಟಾಗುವ ಸಾಧ್ಯತೆ ಎಚ್ಚರ, ಆಲಸ್ಯ ಮನೋಭಾವ, ಇಲ್ಲ ಸಲ್ಲದ ತಕರಾರು, ಆಕಸ್ಮಿಕ ಅಧಿಕ ಖರ್ಚು.

ವೃಶ್ಚಿಕ: ದೂರ ಪ್ರಯಾಣದಿಂದ ಸಮಸ್ಯೆ, ನಂಬಿಕಸ್ಥರಿಂದ ಮೋಸ, ಯಾರನ್ನೂ ನಂಬಬೇಡಿ, ಎಲ್ಲ ಕಡೆಯಿಂದಲೂ ಒತ್ತಡ ಜಾಸ್ತಿ, ಕುಟುಂಬಸ್ಥರಿಂದ ಅಲ್ಪ ಕಿರಿಕಿರಿ, ದೈವಾನುಗ್ರಹದಿಂದ ಅನುಕೂಲ.

ಧನಸ್ಸು: ಪ್ರಯತ್ನಕ್ಕೆ ತಕ್ಕ ಫಲ, ಹಿರಿಯರಿಂದ ಹಿತನುಡಿ, ಮಿತ್ರರಿಂದ ಬೆಂಬಲ, ದಾಂಪತ್ಯದಲ್ಲಿ ಪ್ರೀತಿ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ.

ಮಕರ: ನಾನಾ ಮೂಲಗಳಿಂದ ಧನಾಗಮನ, ಹಣಕಾಸು ಲಾಭ, ಸ್ತ್ರೀಯರಿಗೆ ತಾಳ್ಮೆಯಿಂದ ಉತ್ತಮ ಫಲ, ವೈರಿಗಳಿಂದ ದೂರವಿರಿ, ಅನ್ಯರ ಕಷ್ಟಕ್ಕೆ ಸ್ಪಂದಿಸುವ ಸಾಧ್ಯತೆ.

ಕುಂಭ: ಪರರ ತಪ್ಪಿನಿಂದ ನಿಂದನೆ, ಗೌರವಕ್ಕೆ ಧಕ್ಕೆ, ದ್ರವ್ಯ ಲಾಭ, ಕೃಷಿಕರಿಗೆ ಲಾಭ, ಭಾವನೆಗಳಿಗೆ ಸ್ಪಂದಿಸುವಿರಿ.

ಮೀನ: ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಮಾನಸಿಕ ಕಿರಿಕಿರಿ, ಕೆಲಸ ಕಾರ್ಯದಲ್ಲಿ ಅಧಿಕ ಒತ್ತಡ, ಮಾತೃವಿನಿಂದ ಶುಭ ಹಾರೈಕೆ.