Connect with us

Cinema

ವಿನೂತನ ದಾಖಲೆ ಬರೆದ ವಿಕ್ಟರಿ ವೆಂಕಟೇಶ್ ಮಗಳು

Published

on

Share this

ಹೈದರಾಬಾದ್: ಟಾಲಿವುಡ್‍ನಟ ವಿಕ್ಟರಿ ವೆಂಕಟೇಶ್ ಅವರ ಮಗಳು ಆಶ್ರೀತಾ ದಗ್ಗುಬಾಟಿ ಒಂದು ಕ್ಷೇತ್ರದಲ್ಲಿ ವಿನೂತನ ದಾಖಲೆಯನ್ನು ಬರೆಯುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಇನ್‍ಸ್ಟಾಗ್ರಾಮ್ ಶ್ರೀಮಂತರ ಪಟ್ಟಿಯಲ್ಲಿ ಆಶ್ರೀತಾ ಕೂಡಾ ಸ್ಥಾನ ಪಡೆದಿದ್ದಾರೆ. ಅಡುಗೆ ಮಾಡುವ ಹವ್ಯಾಸ ಹೊಂದಿರುವ ಇವರು ಇನ್ಫಿನಿಟಿ ಪ್ಲ್ಯಾಟರ್ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್‍ನಲ್ಲಿ ಖಾತೆ ತೆರೆದು ವಿವಿಧ ಅಡುಗೆ ರೆಸಪಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್‍ಸ್ಟಾಗ್ರಾಮ್‍ನಲ್ಲಿ 13 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

 

View this post on Instagram

 

A post shared by Infinity Platter (@infinityplatter)

ಇತ್ತೀಚೆಗೆ Hopper.com ಇನ್‍ಸ್ಟಾಗ್ರಾಮ್‍ನಲ್ಲಿ ಹೆಚ್ಚು ಸಂಪಾದಿಸುವ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಫುಟ್‍ಬಾಲ್ ಆಟಗಾರ ಕ್ರಿಶ್ಚಿಯನೋ ರೊನಾಲ್ಡೊ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭಾರತದಿಂದ ವಿರಾಟ್ ಕೊಹ್ಲಿ, ಪ್ರಿಯಾಂಕಾ ಚೋಪ್ರಾ ಪಟ್ಟಿಯಲಿದ್ದಾರೆ. ಅದೇ ಪಟ್ಟಿಯಲ್ಲಿ ವೆಂಕಟೇಶ್ ಪುತ್ರಿ ಆಶ್ರೀತಾ ಕೂಡಾ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿಶ್ವದ 337ನೇ ಸ್ಥಾನ ಪಡೆದಿರುವ ಆಶ್ರೀತಾ ಏಷ್ಯಾದಲ್ಲಿ 27ನೇ ಸ್ಥಾನದಲ್ಲಿದ್ದಾರೆ.

 

View this post on Instagram

 

A post shared by Infinity Platter (@infinityplatter)

ಈ ಬಗ್ಗೆ ಆಶ್ರೀತಾ ಸಂತಸವನ್ನು ಸೋಶಿಯಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2019ರಲ್ಲಿ ವಿನಾಯಕ ರೆಡ್ಡಿ ಅವರನ್ನು ಮದುವೆಯಾಗಿ ಪ್ರಸ್ತುತ ಸ್ಪೇನ್‍ನ ಬಾರ್ಸಿಲೋನಾದಲ್ಲಿ ನೆಲೆಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement