ಅಪ್ಪ ಹಣ ಕೊಡದಿದ್ದಕ್ಕೆ, ಚಾಕುನಿಂದ ಕೈ, ಕತ್ತು ಕೊಯ್ದುಕೊಂಡ

Advertisements

ಚಾಮರಾಜನಗರ: ಪಾಲಕರ ಬಳಿ ಮಕ್ಕಳು ಹಣ ಕೇಳುತ್ತಾರೆ. ಕೊಡದಿದ್ದರೆ ಕೋಪಿಸಿಕೊಳ್ಳುವುದು, ಮುನಿಸಿಕೊಳ್ಳುವುದನ್ನು ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಗ ತನ್ನ ಅಪ್ಪ ಹಣ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Advertisements

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ನಿವಾಸಿ ಸಂತೋಷ್(29) ತನ್ನ ತಂದೆ ಸುರೇಶ್ ಕುಮಾರ್ ಬಳಿ 20 ಸಾವಿರ ರೂಪಾಯಿ ಕೇಳಿದ್ದಾನೆ. ಹಣ ಕೊಡದೆ ಇರುವುದಕ್ಕೆ ಚಾಕು ತೆಗೆದುಕೊಂಡು ಕೈ ಮತ್ತು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದನ್ನೂ ಓದಿ: ಪಾದಯಾತ್ರೆ ಹಿನ್ನೆಲೆ ಕೊಡಗಿನ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ

Advertisements

ಸಂತೋಷ್ ಸದ್ಯ ಕೊಳ್ಳೇಗಾಲದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಸಮೂಹ ದೇವಾಲಯದ ದಾಸೋಹ ಭವನದಲ್ಲಿ ಸಂತೋಷ್ ಅಡುಗೆ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಸ್ನೇಹಿತರ ಬಳಿ ಸಂತೋಷ್ ಸಾಲ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ದನ್ನೂ ಓದಿ: ರಾಹುಲ್ ಗಾಂಧಿ ನಿಜವಾದ ಹಿಂದೂ ಅಲ್ಲ: ನಾರಾಯಣಸ್ವಾಮಿ ವಾಗ್ದಾಳಿ

Advertisements
Advertisements
Exit mobile version