Connect with us

Latest

7 ದಶಕಗಳಿಂದ ಕಾನೂನು ಪಾಠ ಹೇಳಿಕೊಟ್ಟಿಲ್ಲ, ಈಗ ಆರೋಪಿಗಳಿಗೆ ಕಲಿಸುತ್ತೇವೆ: ಸಿ.ಟಿ.ರವಿ

Published

on

ನವದೆಹಲಿ: ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣದಲ್ಲಿರುವ ಆರೋಪಿಗಳಿಗೆ ಕಾನೂನು ಪಾಠ ಹೇಳಿಕೊಡಲಾಗುವುದು ಎಂದು ಆರೋಪಿಗಳ ವಿರುದ್ಧ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಆರೋಪಿಗಳಿಗೆ ಏಳು ದಶಕಗಳಿಂದ ಕಾನೂನು ಪಾಠ ಹೇಳಿಕೊಟ್ಟಿಲ್ಲ. ಟ್ಯಾಕ್ಸ್ ಕಟ್ಟದೇ ಅಕ್ರಮವಾಗಿ ಸೌಲಭ್ಯ ಪಡೆಯುತ್ತಿದ್ದಾರೆ. ಪರವಾನಿಗೆ ಇಲ್ಲದೇ ವ್ಯವಹಾರ ಮಾಡುತ್ತಿದ್ದಾರೆ ನಾವು ಅವರಿಗೆ ಕಾನೂನಿನ ಪಾಠ ಹೇಳಲಿದ್ದೇವೆ ಎಂದರು.

ಶ್ರೀರಾಮನ ವಿರುದ್ಧ ಪೋಸ್ಟ್ ಹಾಕಿದ್ದಕ್ಕೆ ನವೀನ್ ಪ್ರತಿ ಪೋಸ್ಟ್ ಹಾಕಿದ್ದ ಒಂದು ಸಂದರ್ಭವನ್ನು ಶಾಸಕ ಅಖಂಡ ಶ್ರೀನಿವಾಸ ವಿರೋಧಿಗಳು ಬಳಸಿಕೊಂಡು ಸೇಡು ತೀರಿಸಿಕೊಂಡಿದ್ದಾರೆ. ಘಟನೆಯಲ್ಲಿ ಭಾಗಿಯಾದವರು ಮುಗ್ದರು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಹಣಕಾಸಿನ ನೆರವು ನೀಡುತ್ತಿದ್ದಾರೆ. ಮುದೊಂದು ದಿನ ಕಾಶ್ಮೀರ ಉಗ್ರರಿಗೂ ಹಣಕಾಸಿನ ನೆರವು ನೀಡುತ್ತಾರೆ ಎಂದು ಸಿ.ಟಿ.ರವಿ ಆರೋಪಿಸಿದರು.

ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಅಖಂಡ ಶ್ರೀನಿವಾಸ್ ಮನೆ ಸುಟ್ಟಿರುವುದು, ವಾಹನ ಸುಟ್ಟು ಹಾಕಿರುವುದು ಸಮರ್ಥಿಸಿಕೊಳ್ಳುವುದಾ? ಕಾಂಗ್ರೆಸ್ ಜಾತಿ, ರಾಜಕಾರಣ ಮಾಡಿ ಕೆಲವು ರಾಜ್ಯಗಳಿಗೆ ಸೀಮಿತವಾಗಿದೆ. ಮುಂದೆ ಕೆಲವು ಕ್ಷೇತ್ರಗಳಿಗೆ ಸೀಮಿತವಾಗಲಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು.

ಸರ್ಕಾರ ತನಿಖೆ ನಡೆಸುತ್ತಿದೆ. ಇತ್ತ ಬಿಜೆಪಿ ನಾಯಕರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ಮಾಡಿದೆ. ಈ ಸಮಿತಿ ಪಕ್ಷದ ಅಧ್ಯಕ್ಷರಿಗೆ ವರದಿ ನೀಡುತ್ತಿದೆ. ಅವಶ್ಯಕತೆ ಬಂದರೆ ಸರ್ಕಾರಕ್ಕೂ ವರದಿ ನೀಡಲಿದೆ ಎಂದು ಸಿ.ಟಿ.ರವಿ ಹೇಳಿದರು.

Click to comment

Leave a Reply

Your email address will not be published. Required fields are marked *