Connect with us

Food

ಕ್ರಿಸ್ಪಿ ಮೊಟ್ಟೆ ಮಂಚೂರಿ

Published

on

ವಾತಾವರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಚಳಿ ಮತ್ತು ಮಳೆಯ ವಾತಾವರಣ ಇದ್ದು ತಂಪಾಗಿರುವುದರಿಂದ ನಾಲಿಗೆ ಬಿಸಿ ಬಿಸಿಯಾದ ಮತ್ತು ರುಚಿಯಾಗಿ ಏನನ್ನಾದರೂ ತಿನ್ನಲು ಬಯಸುತ್ತದೆ. ಹಾಗಾಗಿ ಮನೆಯಲ್ಲಿಯೇ ರುಚಿಯಾದ ಮತ್ತು ಆರೋಗ್ಯಕರವಾದ ಕ್ರಿಸ್ಪಿ ಮೊಟ್ಟೆ ಮಂಚೂರಿ ಮಾಡಿ ಸವಿಯಿರಿ.

ಬೇಕಾಗುವ ಸಾಮಗ್ರಿಗಳು :
* ಬೇಯಿಸಿದ ಮೊಟ್ಟೆ- 4 ರಿಂದ 5
* ಅಕ್ಕಿಹಿಟ್ಟು ಅಥವಾ ಕಾನ್‍ಫ್ಲೋರ್ -2 ರಿಂದ 3 ಟೀ ಸ್ಪೂನ್
* ಅರಿಶಿಣ- ಚಿಟಿಕೆಯಷ್ಟು
* ಕೆಂಪು ಮೆಣಸಿನ ಪೌಡರ್
* ಗರಂಮಸಾಲಾ- 1 ಟೀ ಸ್ಪೂನ್
* ಜೀರಿಗೆ ಪೌಡರ್- ಅರ್ಧ ಟೀ ಸ್ಪೂನ್
* ಈರುಳ್ಳಿ- 1 ದೊಡ್ಡ ಗಾತ್ರದ್ದು
* ಬ್ರೇಡ್ ಪೌಡರ್- 4 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಹಸಿಮೆಣಸು – 5 ರಿಂದ 6
* ಎಣ್ಣೆ -1 ಕಪ್
* ಶುಂಠಿ
* ಟೊಮೆಟೊ ಸಾಸ್ – ಅರ್ಧ ಕಪ್
* ಸೊಯಾಸಾಸ್
* ಕೊತ್ತಂಬರಿ

ಮಾಡುವ ವಿಧಾನ :
* ಬೇಯಿಸಿದ ಮೊಟ್ಟೆಯನ್ನು ತೆಗೆದುಕೊಳ್ಳಬೇಕು. ಮೊಟ್ಟೆಯ ಒಳಗೆ ಇರುವ ಹಳದಿ ಅಂಶವನ್ನು ತೆಗೆದು ಹಾಕಬೇಕು.
* ನಂತರ ಮೊಟ್ಟೆಯನ್ನು ಸಣ್ಣಸಣ್ಣದಾಗಿ ಕತ್ತರಿಸಿ ಒಂದು ಬೌಲ್‍ನಲ್ಲಿ ಹಾಕಿಟ್ಟುಕೊಳ್ಳಬೇಕು.
* ಹಾಗೆ ಬೆಕರಿಯಲ್ಲಿ ಸಿಗುವ ಬ್ರೆಡ್‍ನ್ನು ಸಣ್ಣದಾಗಿ ಪೌಡರ್ ಮಾಡಿ ತಯಾರಿಸಿಟ್ಟುಕೊಂಡಿರಬೇಕು.
* ಈ ಬೌಲ್‍ಗೆ ಅರಿಶಿಣ, ಕೆಂಪು ಮೆಣಸಿನ ಪೌಡರ್, ಗರಂಮಸಾಲಾ, ಜೀರಿಗೆ ಪೌಡರ್, ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಬೇಕು. ಈ ಮೊದಲೇ ತಯಾರಿಸಿ ಇಟ್ಟಿರುವ ಬ್ರೆಡ್ ಪೌಡರ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮೊಟ್ಟೆಯೊಂದಿಗೆ ಮಸಾಲೆ ಮಿಶ್ರಣವಾಗಲು ಒಂದು ಹಸಿಮೊಟ್ಟೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

* ಈ ಮೊಟ್ಟೆ ಮಸಾಲೆಯ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಕಾದ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಬೇಕು.
* ಮಸಾಲೆಯೊಂದಿಗೆ ಮಿಶ್ರಣವಾದ ಮೊಟ್ಟೆಯನ್ನು ಚೆನ್ನಾಗಿ ಕೆಂಪಗಾಗುವವರೆಗೂ ಫ್ರೈ ಮಾಡಿ ತೆಗೆಯಬೇಕು.
* ನಂತರ ಇನ್ನೊಂದು ಪಾತ್ರೆಯನ್ನು ತೆಗೆದುಕೊಳ್ಳಬೇಕು ಸಣ್ಣ ಉರಿ ಬೆಂಕಿಯಲ್ಲಿ ಇಟ್ಟು ಎಣ್ಣೆಯನ್ನು ಹಾಕಬೇಕು.
* ಎಣ್ಣೆ ಚೆನ್ನಾಗಿ ಕಾದ ನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿದ ಹಸಿಮೆಣಸು, ಶುಂಠಿ, ಟೊಮೆಟೊ ಸಾಸ್, ಸೊಯಾ ಸಾಸ್ ಹಾಗೂ ಅರ್ಧ ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಬೇಕು.
* ಮಸಾಲೆ ಚೆನ್ನಾಗಿ ಬೆಂದ ನಂತರ ಇದಕ್ಕೆ ಈ ಮೊದಲೇ ಫ್ರೈ ಮಾಡಿಟ್ಟ ಮೊಟ್ಟೆಯನ್ನು ಹಾಕಬೇಕು.
* ಚೆನ್ನಾಗಿ ಮಸಾಲೆ ಹೀರಿಕೊಳ್ಳುವರೆಗೂ ಪ್ರೈಮಾಡಬೇಕು. ಕೊನೆಯಲ್ಲಿ ಕೊತ್ತಂಬರಿಯನ್ನು ಹಾಕಿದರೆ ರುಚಿ ರುಚಿಯಾದ ಕ್ರಿಸ್ಪಿ ಮೊಟ್ಟೆ ಮಂಚೂರಿ ಸವಿಯಲು ಸಿದ್ಧವಾಗುತ್ತದೆ.

Click to comment

Leave a Reply

Your email address will not be published. Required fields are marked *

www.publictv.in