ಎರಡನೇ ಮಗುವಿನ ನಿರೀಕ್ಷೆಯಲ್ಲಿ ಪಾಂಡ್ಯ ದಂಪತಿ

Advertisements

ಮುಂಬೈ: ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ರೂಪದರ್ಶಿ-ನಟಿ ನತಾಶಾ ಸ್ಟಾಂಕೋವಿಕ್ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕುಟುಂಬದ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ನತಾಶಾ, ಬೇಬಿ ಬಂಪ್ ಪ್ರದರ್ಶಿಸಿದ್ದಾರೆ.

ನತಾಶಾ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಈ ಫೋಟೋಕ್ಕೆ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್‌ಗಳು ಬಂದಿವೆ. ಒಟ್ಟಾರೆಯಾಗಿ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರನ್ನು ಸಿಕ್ಕಾಪಟೆ ಟ್ರೋಲ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆದಿದ್ದಾರೆ.

Advertisements

28 ವರ್ಷದ ಹಾರ್ದಿಕ್ ಪಾಂಡ್ಯ 2020ರ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೆ, ಮೇನಲ್ಲಿ ನತಾಶಾ ಗರ್ಭಿಣಿಯಾಗಿರುವ ವಿಷಯವನ್ನು ಪ್ರಕಟಿಸಿದ್ದರು. ಅದೇ ವೇಳೆ ಅವರ ಸರಳ ವಿವಾಹವೂ ಬಹಿರಂಗಗೊAಡಿತ್ತು. 2020ರ ಜುಲೈನಲ್ಲಿ ಮೊದಲನೇ ಪುತ್ರ ಅಗಸ್ತ್ಯ ಜನಿಸಿದ್ದ.

Advertisements

ಬರೋಡ ಆಟಗಾರ ಹಾರ್ದಿಕ್ ಸದ್ಯ ಗಾಯದ ಸಮಸ್ಯೆಯಿಂದ ಕ್ರಿಕೆಟ್‌ನಿಂದ ದೂರವಿದ್ದಾರೆ. ಸಂಪೂರ್ಣ ಫಿಟ್ ಇಲ್ಲದಿದ್ದರೂ, ಕಳೆದ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಭಾರತದ ಪರ ಆಡಿದ್ದರು.

Advertisements
Exit mobile version