Connect with us

International

ನಾವು ಯಾವಾಗ ಕಪ್ ಗೆಲ್ಲೋದು- ಆರ್‌ಸಿಬಿ ಸೋಲಿಗೆ ಇಂಗ್ಲೆಂಡ್ ಆಟಗಾರ್ತಿ ಅಲೆಕ್ಸೆಂಡ್ರಾ ಬೇಸರ

Published

on

ಲಂಡನ್: ಐಪಿಎಲ್ 12ನೇ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹೊರ ನಡೆದಿದ್ದಕ್ಕೆ ಅಭಿಮಾನಿಗಳು ತೀವ್ರ ಬೇಸರಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವ ಮೂಲಕ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅದೇ ರೀತಿ ಇಂಗ್ಲೆಂಡ್ ತಂಡದ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಅಲೆಕ್ಸೆಂಡ್ರಾ ಹಾರ್ಟ್ಲೆ ಸಹ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕಪ್ ಗೆಲ್ಲುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಆಕ್ರೋಶ ಹಾಗೂ ಬೇಸರದ ಟ್ವೀಟ್ ಮಾಡಿದ್ದಾರೆ. ಐಪಿಎಲ್ ಎಲಿಮಿನೇಟ್ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್(ಎಸ್‍ಆರ್ ಎಚ್) ವಿರುದ್ಧ ಸೆಣಸಾಡಿ 6 ವಿಕೆಟ್‍ಗಳ ಸೋಲನುಭವಿಸಿ, ಸ್ಪರ್ಧೆಯಿಂದಲೇ ಹೊರ ಬಿದ್ದಿದೆ.

ಇದು ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇಂಗ್ಲೆಂಡ್ ಅಂತರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರ್ತಿ ಅಲೆಕ್ಸಾಂಡ್ರಿಯಾ ಹಾಟ್ರ್ಲೆ ಸಹ ಆರ್‌ಸಿಬಿ ಅಭಿಮಾನಿಯಾಗಿದ್ದು, ಗೆದ್ದಾಗ ಅತೀವ ಸಂತಸ ಪಟ್ಟಿದ್ದರು. ಅಲ್ಲದೆ ಸೋಲನುಭವಿಸಿದಾಗ ಅಷ್ಟೇ ಬೇಸರದಿಂದ ಟ್ವೀಟ್ ಮಾಡಿದ್ದರು. ಇದೀಗ ಆರ್‌ಸಿಬಿ ಎಲಿಮಿನೇಟ್ ಆಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊನೆಯಲ್ಲಿ ಸತತ ಎರಡು ಬೌಂಡರಿ – ಐಪಿಎಲ್‍ನಿಂದ ಆರ್‌ಸಿಬಿ ಔಟ್

ನಾವು ಮತ್ತೊಂದು ಆಟವನ್ನು ನರಕ ಮಾಡಿಕೊಂಡು ಟೂರ್ನಿಯಿಂದ ಹೊರ ಬಂದಿದ್ದೇವೆ. ಇನ್ಯಾವಾಗ ನಾವು ಕಪ್ ಗೆಲ್ಲುವುದು ಎಂದು ಪ್ರಶ್ನಿಸಿ ಅಳುತ್ತಿರುವ ಎಮೋಜಿ ಹಾಕಿ ನೋವು ಹೊರ ಹಾಕಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ಅಲೆಕ್ಸೆಂಡ್ರಾ, ಆರ್‌ಸಿಬಿ ಅಭಿಮಾನಿಗಳಿಗೆ ಇದು ತುಂಬಾ ವಿಶೇಷ ದಿನ. ವಿರಾಟ್ ಕೊಹ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದರು.

ಇಂಗ್ಲೆಂಡ್ ತಂಡದ ಎಡಗೈ ಆರ್ಥೋಡಾಕ್ಸ್ ಬೌಲರ್ ಆಗಿರುವ ಹಾರ್ಟ್ಲೆ, 28 ಏಕದಿನ ಪಂದ್ಯಗಳಲ್ಲಿ 39 ವಿಕೆಟ್, 4 ಟಿ20ಐ ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ. 2017ರ ಮಹಿಳಾ ಕ್ರಿಕೆಟ್ ವಿಶ್ವಕಪ್‍ನಲ್ಲಿ ಹಾರ್ಟ್ಲೆ ಇಂಗ್ಲೆಂಡ್ ತಂಡದ ಆಟಗಾರ್ತಿಯಾಗಿದ್ದರು.

Click to comment

Leave a Reply

Your email address will not be published. Required fields are marked *