Bengaluru City
ಬೆಂಗಳೂರು ತಲುಪಿದ ಕೊರೊನಾ ಲಸಿಕೆ

ಬೆಂಗಳೂರು: ಪುಣೆಯಿಂದ ಹೊರಟ ಕೊರೊನಾ ಸಂಜೀವಿನಿ ಕೋವಿಶೀಲ್ಡ್ ಲಸಿಕೆ ಬೆಂಗಳೂರು ತಲುಪಿದೆ.
ಕೋವಿಡ್-19 ವಿರುದ್ಧ ಭಾರತದ ಲಸಿಕಾ ಅಭಿಯಾನದ ಮೊದಲ ಭಾಗವಾಗಿ 30 ಕೋಟಿ ಜನರಿಗೆ ಲಸಿಕೆ ಪೊರೈಕೆ ಮಾಡಲು 3 ಟ್ರಕ್ಗಳಲ್ಲಿ ಲಸಿಕೆ ಸಾಗಾಟಕ್ಕೆ ಇಂದು ಬೆಳಗಿನ ಜಾವ ಚಾಲನೆ ನೀಡಲಾಗಿತ್ತು. ಪುಣೆಯ ಸೆರಂ ಇನ್ಸ್ಟಿಟ್ಯೂಟ್ನಿಂದ 3 ಟ್ರಕ್ ಗಳಲ್ಲಿ ಹೊರಟ ಲಸಿಕೆ ದೇಶದ 13 ಸ್ಥಳಗಳಿಗೆ ವಿಮಾನದ ಮೂಲಕ ತಲುಪಲಿದೆ.
ಲಸಿಕೆ ಹೊಂದಿರುವ ಎಲ್ಲಾ ಮೂರು ಟ್ರಕ್ಗಳು ತಾಪಮಾನ ನಿಯಂತ್ರಿತವಾಗಿದ್ದು. ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ಸರಕು ಸಾಗಾಟ ವಿಮಾನದ ಮೂಲಕ ದೇಶದ ವಿವಿಧ ಲಸಿಕಾ ಕೇಂದ್ರಕ್ಕೆ ರವಾನೆಯಾಗಲಿದೆ. ಪುಣೆಯ ಸೆರಂ ಇನ್ಸ್ಟಿಟ್ಯೂಟ್ನಿಂದ ಬೆಳಗ್ಗೆ 5 ಗಂಟೆಗೆ ಹೊರಟ ಟ್ರಕ್ಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ಕೊಡಲಾಯಿತು.
ಬೆಂಗಳೂರಲ್ಲಿ 11 ಲಕ್ಷದ 34 ಸಾವಿರ ಕೋವಿಶೀಲ್ಡ್ ಲಸಿಕೆ ಸಂಗ್ರಹವನ್ನು ಮಾಡಲಾಗುತ್ತದೆ. ಬೆಳಗಾವಿಯಲ್ಲಿ 2.5 ಲಕ್ಷದಷ್ಟು ಕೋವಿಶೀಲ್ಡ್ ಲಸಿಕೆ ಸಂಗ್ರಹ ಮಾಡಲಾಗುತ್ತದೆ. ಬೆಳಗಾವಿಯಿಂದ ಬಾಗಲಕೋಟೆ, ಗದಗ, ಕೊಪ್ಪಳ, ವಿಜಯಪುರ, ಧಾರವಾಡ, ಹಾವೇರಿ, ಉತ್ತರಕನ್ನಡಕ್ಕೆ ಲಸಿಕೆ ಪೊರೈಸಲಾಗುತ್ತದೆ. ಉಳಿದ 22 ಜಿಲ್ಲೆಗಳಿಗೆ ಬೆಂಗಳೂರಿನಿಂದಲೇ ಲಸಿಕೆ ಪೊರೈಕೆ ಹಂಚಿಕೆ ಮಾಡುವ ಯೋಜನೆಯನ್ನು ರೂಪಿಸಿಕೊಂಡಿದೆ.
