Latest
14 ದಿನದ ಕಂದಮ್ಮನ ಜೊತೆ ಸೇವೆಗೆ ಹಾಜರಾದ ಐಎಎಸ್ ಅಧಿಕಾರಿ

ಲಕ್ನೋ: 14 ದಿನದ ಕಂದಮ್ಮನ ಜೊತೆ ಐಎಎಸ್ ಅಧಿಕಾರಿ ಸೇವೆಗೆ ಹಾಜರಾಗಿದ್ದಾರೆ. ಮಗುವಿನ ಜೊತೆ ಕೆಲಸ ನಿರ್ವಹಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಗಾಜಿಯಾಬಾದ್ನ ಮೋದಿನಗರದ ಎಸ್ಡಿಎಂ ಐಎಎಸ್ ಅಧಿಕಾರಿ ಸೌಮ್ಯಾ ಪಾಂಡೆ ಕೇವಲ 14 ದಿನ ಹೆರಿಗೆ ರಜೆ ತೆಗೆದುಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಕೆಲಸದ ಜೊತೆ ತಾಯಿಯ ಜವಾಬ್ದಾರಿಯನ್ನು ಸೌಮ್ಯಾ ಪಾಂಡೆ ನಿರ್ವಹಿಸುತ್ತಿದ್ದಾರೆ.
Modinagar SDM, Covid nodal officer rejoins work 14 days after giving birth
Read @ANI Story | https://t.co/3rHbXNwVv7 pic.twitter.com/sfm4PeEje9
— ANI Digital (@ani_digital) October 13, 2020
ನಾನು ಐಎಎಸ್ ಅಧಿಕಾರಿಯಾಗಿದ್ದರಿಂದ ಕೋವಿಡ್-19 ಸೇರಿದಂತೆ ಹಲವು ಜವಾಬ್ದಾರಿಗಳಿವೆ. ದೇವರು ಮಹಿಳೆಗೆ ಮಗುವಿಗೆ ಜನ್ಮ ನೀಡುವ ಶಕ್ತಿ ನೀಡುವದರ ಜೊತೆಗೆ ಅದರ ಲಾಲನೆ ಪಾಲನೆ ಮಾಡುವ ಸಾಮಥ್ರ್ಯವನ್ನು ನೀಡಿದ್ದಾನೆ. ಗ್ರಾಮೀಣ ಭಾಗದ ಮಹಿಳೆಯರು ಮಗುವಿಗೆ ಜನ್ಮ ನೀಡುವ ಕೊನೆಯ ದಿನದವರೆಗೂ ಕೆಲಸ ಮಾಡುತ್ತಿರುತ್ತಾರೆ. ಹಾಗೆ ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಕೃಷಿ ಜೊತೆಗೆ ಮನೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಅದೇ ರೀತಿ ನಾನು ಸಹ ವಾರದ ಕಂದಮ್ಮನ ಜೊತೆ ಕೆಲಸ ಮಾಡುತ್ತಿದ್ದೇನೆ ಎಂದು ಸೌಮ್ಯಾ ಪಾಂಡೆ ಹೇಳುತ್ತಾರೆ.
Must be inspired by @GummallaSrijana ! @IASassociation Soumya Pandey (SDM Modinagar) didnt availed 06 months maternity leave, joined back office with her infant daughter. #CoronaWarriors pic.twitter.com/8Q6Cju2X49
— Dr.Prashanth (@prashantchiguru) October 12, 2020
ಕೊರೊನಾ ನಿಯಂತ್ರಣಕ್ಕಾಗಿ ಬಹುತೇಕ ಅಧಿಕಾರಿಗಳು ಹಗಲಿರುಳು ಎನ್ನದೇ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ನೀಡುವ ಹೆರಿಗೆ ರಜೆಯನ್ನ ಕೇವಲ 22 ದಿನಕ್ಕೆ ಸೌಮ್ಯಾ ಪಾಂಡೆ ಮೊಟಕುಗೊಳಿಸಿಕೊಂಡಿದ್ದಾರೆ. ಕೋವಿಡ್ ಹಿನ್ನೆಲೆ ಮಗುವಿನ ಆರೋಗ್ಯದ ಬಗ್ಗೆಯೂ ಗಮನ ನೀಡಬೇಕು. ಹಾಗಾಗಿ ಸೌಮ್ಯಾ ಅವರ ಬಳಿ ಹೋಗುವ ಎಲ್ಲ ಫೈಲ್ ಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.
Ghaziabad: Saumya Pandey, Modinagar sub-divisional magistrate who gave birth to a baby girl recently, rejoined office 14 days after her delivery. She says, "District Magistrate & administration's supported me throughout my pregnancy period as well as after my delivery." (12.10) pic.twitter.com/x93SIQXvyW
— ANI UP (@ANINewsUP) October 12, 2020
