Latest
ಭಾರತದಲ್ಲಿ ಜ.16ರಿಂದ ಲಸಿಕೆ ಹಂಚಿಕೆ – ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಭಾರತದಲ್ಲಿ ಕೊರೊನಾ ಲಸಿಕೆಯನ್ನು ಜ. 16 ರಿಂದ ವಿತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಕೊರೊನಾ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು. ಎರಡನೇ ಹಂತದಲ್ಲಿ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗುವುದು. ಮೊದಲ 3 ಕೋಟಿಯ ಲಸಿಕೆಯೆ ಖರ್ಚನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಪ್ರಕಟಿಸಿದರು.
ಕೊರೊನಾ ವಿರುದ್ಧ ನಾವೆಲ್ಲ ಒಂದಾಗಿ ಹೋರಾಡಿದ್ದೇವೆ. ಈಗ ಎರಡು ಸ್ವದೇಶಿ ಲಸಿಕೆ ಬಳಕೆಗೆ ಸಿದ್ಧವಾಗಿದೆ. 4 ಲಸಿಕೆಗಳು ಪ್ರಯೋಗದ ಹಂತದಲ್ಲಿದೆ. ಕೊರೊನಾ ಲಸಿಕೆಗೆ ನಾವು ವಿದೇಶವನ್ನು ನಂಬಿಕೊಂಡಿಲ್ಲ. ನಮ್ಮ ವ್ಯಾಕ್ಸಿನ್ ಪರಿಣಾಮಕಾರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Speaking at the interaction with CMs on vaccination rollout. https://t.co/gbWZ4LsQGB
— Narendra Modi (@narendramodi) January 11, 2021
ಮೋದಿ ಭಾಷಣದ ಮುಖ್ಯಾಂಶಗಳು:
ಜನವರಿ 16ರಿಂದ ವಿಶ್ವದ ಅತಿದೊಡ್ಡ ಲಸಿಕೆ ಹಂಚಿಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. 2 ಸ್ವದೇಶಿ ಲಸಿಕೆ ಬಳಕೆಗೆ ತುರ್ತು ಅನುಮೋದನೆ ನೀಡಲಾಗಿದೆ . ಕೋವಿಡ್ 19 ಸಂದರ್ಭದಲ್ಲಿ ನಾವು ಮಾಡಿದ ಕೆಲಸ ನನಗೆ ತೃಪ್ತಿ ನೀಡಿದೆ. ಎಲ್ಲರೂ ನೀಡಿದ ಸಹಕಾರದಿಂದ ಭಾರತದಲ್ಲಿ ಕೊರೊನಾ ನಿಯತ್ರಣದಲ್ಲಿದೆ
ಬಳಕೆಗೆ ಅನುಮೋದನೆ ನೀಡಲಾಗಿರುವ ಎರಡು ಸ್ವದೇಶಿ ಲಸಿಕೆಗೆ ಬಹಳ ಅಗ್ಗವಾಗಿದ್ದು, ಪರಿಣಾಮಕಾರಿಯಾಗಿದೆ. ಮೊದಲ ಹಂತರ 3 ಕೋಟಿ ಲಸಿಕೆಯ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಕೊರೊನಾ ವಾರಿಯರ್ಸ್ ಮತ್ತು ಫ್ರಂಟ್ಲೈನ್ ಕೆಲಸಗಾರರಿಗೆ ಲಸಿಕೆ ಸಿಗಲಿದೆ. ಸರ್ಕಾರಿ ಮತ್ತು ಖಾಸಗಿ, ನೈರ್ಮಲ್ಯ ಕೆಲಸಗಾರರು, ರಕ್ಷಣೆ, ಪೊಲೀಸ್ ಮತ್ತು ಇತರೇ ಪ್ಯಾರಾ ಮಿಲಿಟರಿ ಸಿಬ್ಬಂದಿ ಮೊದಲ ಹಂತದಲ್ಲಿ ಲಸಿಕೆಯನ್ನು ಪಡೆದುಕೊಳ್ಳಲಿದ್ದಾರೆ.
ಮುಂದಿನ ಹಂತದಲ್ಲಿ 30 ಕೋಟಿ ಮಂದಿಗೆ ಲಸಿಕೆ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಮತ್ತು ವಿವಿಧ ರೋಗಗಳಿಂದ ಬಳಲುತ್ತಿರುವ ಮಂದಿಗೆ ಲಸಿಕೆ ನೀಡಲಾಗುವುದು. ಮೊದಲ ಡೋಸ್ ಪಡೆದವರಿಗೆ ಇ ಸರ್ಟಿಫಿಕೇಟ್ ಸಿಗಲಿದೆ.
