Bengaluru City
ಬ್ರಿಟನ್ ಕೊರೊನಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆ

ಬೆಂಗಳೂರು: ರೂಪಾಂತರಿ ಕೊರೊನಾ ವೈರಸ್ ಸೋಂಕಿತರಿಗೆ ವಿಕ್ಟೋರಿಯ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ಗಳಲ್ಲಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಬ್ರಿಟನ್ನಿಂದ ಬೆಂಗಳೂರಿಗೆ ಹಿಂತಿರುಗಿ ಬಂದ 3 ಜನರಲ್ಲಿ ರೂಪಾಂತರಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಹಳೆಯ ವೈರಸ್ ರೋಗಿಗಳ ಜೊತೆಗೆ ಹೊಸ ವೈರಸ್ ರೋಗಿಗಳನ್ನು ಸೇರಿಸಿ ಒಂದೇ ವಾರ್ಡ್ನಲ್ಲಿ ಚಿಕಿತ್ಸೆ ನೀಡುವುದು ಬೇಡ. ಬದಲಾಗಿ ಹೊಸ ತಳಿಯ ವೈರಸ್ ಹೊಂದಿರುವ ರೋಗಿಗಳಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಿ ಚಿಕಿತ್ಸೆ ನೀಡಿ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಗೆ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ.
ಬ್ರಿಟನ್ನಿಂದ ಬಂದವರಿಗೆ ಆರಂಭದಲ್ಲೇ ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿ 10 ಬೆಡ್ಗಳ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಲಾಗಿದೆ.
ವಸಂತನಗರ ಅಪಾರ್ಟ್ಮೆಂಟ್ನಲ್ಲಿ ಇಬ್ಬರಿಗೆ ಮತ್ತು ಜೆಪಿ ನಗರದ ನಿವಾಸಿಯೊಬ್ಬರಿಗೆ ಬ್ರಿಟನ್ ಸೋಂಕು ಇರುವುದು ದೃಢಪಟ್ಟಿದೆ.
