Connect with us

Latest

ಗ್ರಾಹಕರಿಗೆ ಗುಡ್‌ನ್ಯೂಸ್‌ – 2021ರಲ್ಲಿ ಮೊದಲ ಬಾರಿಗೆ ತೈಲ ಬೆಲೆ ಇಳಿಕೆ

Published

on

ನವದೆಹಲಿ: ಈ ವರ್ಷದ ಆರಂಭದಿಂದಲೂ ಏರಿಕೆ ಕಾಣುತ್ತಿದ್ದ ಪೆಟ್ರೋಲ್‌, ಡೀಸೆಲ್‌ ಬೆಲೆ ಮೊದಲ ಬಾರಿಗೆ ಇಳಿಕೆಯಾಗಿದೆ. ಬುಧವಾರ ಪ್ರತಿ ಲೀಟರ್‌ ಪೆಟ್ರೋಲ್‌ ದರ 18 ಪೈಸೆ ಮತ್ತು ಡೀಸೆಲ್ ದರ 17 ಪೈಸೆ ಇಳಿಕೆಯಾಗಿದೆ.

ವಿಶ್ವದ ಹಲವು ಕಡೆ ಕೋವಿಡ್‌ 19 ಲಾಕ್‌ಡೌನ್‌ ಜಾರಿ ಜೊತೆ ಎರಡನೇ ಅಲೆ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೇಡಿಕೆ ಇಳಿಕೆ ಆಗುತ್ತಿದ್ದು ಬೆಲೆ ಕಡಿಮೆ ಆಗುತ್ತಿದೆ. ಇದರ ನೇರ ಪರಿಣಾಮ ಭಾರತದ ಮೇಲೆ ಬಿದ್ದಿದ್ದು ತೈಲ ಬೆಲೆ ಇಳಿಕೆಯಾಗಿದೆ.

ಪೆಟ್ರೋಲ್‌ ಬೆಲೆ ಎಷ್ಟು?
ಬೆಂಗಳೂರು 94.04 ರೂ., ದೆಹಲಿ 90.99 ರೂ. ಚೆನ್ನೈ 92.95 ರೂ., ಹೈದರಾಬಾದ್‌ 94.61 ರೂ., ಮುಂಬೈ 97.40 ರೂ. ಇದೆ.

ಡೀಸೆಲ್‌ ಬೆಲೆ ಎಷ್ಟು?
ಬೆಂಗಳೂರಿನಲ್ಲಿ 86.21 ರೂ., ದೆಹಲಿ 81.30 ರೂ., ಚೆನ್ನೈ 86.29 ರೂ., ಹೈದರಾಬಾದ್‌ 94.61 ರೂ., ಮುಂಬೈ 97.40 ರೂ. ಇದೆ.

ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಯಿಂದಾಗಿ ಪೆಟ್ರೋಲ್‌, ಡೀಸೆಲ್‌ ದರ ಒಂದೊಂದು  ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ಇರುತ್ತದೆ.

ಭಾರತ ಸರ್ಕಾರದ ಮನವಿಯ ಹೊರತಾಗಿಯೂ ತೈಲ ಉತ್ಪಾದಕ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸದೇ ಇರುವ ನಿರ್ಧಾರವನ್ನು ಕೈಗೊಂಡಿತ್ತು. ಇದರಿಂದಾಗಿ ಭಾರತ ಸೇರಿದಂತೆ ವಿಶ್ವಾದ್ಯಂತ ಪೆಟ್ರೋಲ್‌ ಡೀಸೆಲ್‌ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿತ್ತು.

ಈಗ ಯುರೋಪ್‌ನಲ್ಲಿ ಹಲವು ಕಡಿಮೆ ಲಾಕ್‌ಡೌನ್‌ ಜಾರಿ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಶೇ.4 ರಷ್ಟು ಇಳಿಕೆಯಾಗಿದೆ. ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 62.08 ಡಾಲರ್‌ಗೆ(4,500 ರೂ.) ಇಳಿಕೆಯಾಗಿದೆ.

ಭಾರತದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಕಚ್ಚಾ ತೈಲದ ಬೆಲೆ ಪರಿಷ್ಕರಣೆ ಆಗುತ್ತಿದೆ. ಕಳೆದ ಫೆಬ್ರವರಿಯಲ್ಲಿ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿತ್ತು. ಈ ಸಂದರ್ಭದಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 68 ಡಾಲರ್‌ಗೆ ತಲುಪಿತ್ತು. ಹೀಗಾಗಿ ಭಾರತದ ಹಲವು ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್‌ ದರ 100 ರೂ. ಗಡಿ ದಾಟಬಹುದು ವಿಶ್ಲೇಷಿಸಲಾಗಿತ್ತು. ಆದರೆ ಫೆ.27 ರ ನಂತರ ಬೆಲೆ ಪರಿಷ್ಕರಣೆ ಸ್ಥಗಿತಗೊಂಡಿತ್ತು.

ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆ ವಿಪಕ್ಷಗಳಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿತ್ತು. ಹಲವು ರಾಜ್ಯಗಳು ತೈಲದ ಮೇಲಿದ್ದ ವ್ಯಾಟ್‌ ತೆರಿಗೆಯನ್ನು ಕಡಿಮೆ ಮಾಡಿದ್ದವು.

Click to comment

Leave a Reply

Your email address will not be published. Required fields are marked *