Connect with us

ಇಸ್ಕಾನ್‍ನಲ್ಲಿ ಇಂದು ಸಂಜೆ ನರಸಿಂಹ ಜಯಂತಿ – ನೇರ ಪ್ರಸಾರದಲ್ಲಿ ವೀಕ್ಷಿಸಿ

ಇಸ್ಕಾನ್‍ನಲ್ಲಿ ಇಂದು ಸಂಜೆ ನರಸಿಂಹ ಜಯಂತಿ – ನೇರ ಪ್ರಸಾರದಲ್ಲಿ ವೀಕ್ಷಿಸಿ

ಬೆಂಗಳೂರು: ಇಸ್ಕಾನ್‍ನಲ್ಲಿ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿಯಾದ ಇಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ.

ವಿಷ್ಣುವಿನ ವಿವಿಧ ಅವತಾರದಲ್ಲಿ ನರಸಿಂಹ ದೇವರ ಅವತಾರವೂ ಒಂದು. ಅವನ ಆತ್ಮಿಯ ಭಕ್ತ ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಅವನ ರಕ್ಷಣೆಗೋಸ್ಕರ ‘ನರಸಿಂಹ’ ಅವತಾರವನ್ನು ತಾಳುತ್ತಾನೆ. ಈ ಸಾಂಕ್ರಾಮಿಕ ಸಮಯದಲ್ಲಿ ನಮ್ಮೆಲ್ಲರಿಗೂ ಕೂಡ ವಿಶೇಷವಾಗಿ ಆ ಭಗವಂತನ ರಕ್ಷಣೆ ಬೇಕೇ ಬೇಕು.

ಈ ಹಿನ್ನೆಲೆಯಲ್ಲಿ ಒಳಿತಿಗಾಗಿ, ಲೋಕ ಕಲ್ಯಾಣಕ್ಕಾಗಿ ಇಸ್ಕಾನ್ ಬೆಂಗಳೂರು ಶ್ರೀ ನರಸಿಂಹ ಜಯಂತಿಯ ಶುಭ ಸಂದರ್ಭದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮ, ಅಭಿಷೇಕ, ಹೋಮ-ಹವನಗಳನ್ನು ಹಮ್ಮಿಕೊಂಡಿದೆ. ಅದಷ್ಟೇ ಅಲ್ಲದೆ ಇಸ್ಕಾನ್ ದೇವಾಲಯದ ಭಕ್ತರೆಲ್ಲರೂ ಸೇರಿ ಸಾಮೂಹಿಕವಾಗಿ ಶ್ರೀ ನರಸಿಂಹ ದೇವರ ಮಂತ್ರವನ್ನು ಪಠಿಸಲಿದ್ದಾರೆ.

ಇಂದು ಸಂಜೆ 6ಕ್ಕೆ ಇಸ್ಕಾನ್ ಬೆಂಗಳೂರಿನ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರವಾಗುವ ಈ ಲೋಕ ಕ್ಷೇಮ ಪ್ರಾರ್ಥನೆ ಮತ್ತು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವಂತ ಕೃಪೆಗೆ ಪಾತ್ರರಾಗಬೇಕಾಗಿ ಇಸ್ಕಾನ್ ಮನವಿ ಮಾಡಿದೆ.

Advertisement
Advertisement