Bengaluru City
ಜೂನ್, ಜುಲೈನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ?

ಬೆಂಗಳೂರು: ಪ್ರತಿ ವರ್ಷ ಮಾರ್ಚ್, ಏಪ್ರಿಲ್ನಲ್ಲಿ ನಡೆಯುತ್ತಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ಈ ಬಾರಿ 2 ತಿಂಗಳು ಮುಂದೂಡಿಕೆಯಾಗುವ ಸಾಧ್ಯತೆಯಿದೆ.
ಈ ವರ್ಷ ಕೋವಿಡ್ 19 ಹಿನ್ನೆಲೆಯಲ್ಲಿ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಆನ್ಲೈನ್ ತರಗತಿಗಳು ತಡವಾಗಿ ಆರಂಭವಾಗಿದೆ. ಈ ಕಾರಣಕ್ಕೆ ಜೂನ್ – ಜುಲೈ ತಿಂಗಳಿಗೆ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ತಜ್ಞರ ಸಲಹೆಯನ್ನು ಸರ್ಕಾರ ಒಪ್ಪುತ್ತಾ? ಇಲ್ಲ ಎನ್ನುವುದು ಮುಂದೆ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಈಗಾಗಲೇ ಶಿಕ್ಷಣ ಸಚಿವರು ಶಾಲೆ ಯಾವಾಗ ಆರಂಭಿಸಬೇಕು ಎನ್ನುವುದರ ಬಗ್ಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಕೋವಿಡ್ ಎರಡನೇ ಅಲೆ ಜನವರಿಯಿಂದ ಆರಂಭವಾಗಬಹುದು ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಎರಡನೇ ಅಲೆ ಆರಂಭವಾಗದೇ ಇದ್ದರೆ ಕರ್ನಾಟಕದಲ್ಲಿ ಜನವರಿ ವೇಳೆ ತರಗತಿಯನ್ನು ತೆರೆಯಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ತರಗತಿಗಳು ಪ್ರಾರಂಭವಾದರೂ ವಿದ್ಯಾರ್ಥಿಗಳು ತರಗತಿಯಲ್ಲಿ ಮತ್ತೊಮ್ಮೆ ಪಾಠ ಮಾಡಬೇಕು. ಅಲ್ಲದೇ ರಿವಿಷನ್ ಕ್ಲಾಸ್ ಗಳು ಮಾಡಬೇಕು. ಹೀಗಾಗಿ ಮಾರ್ಚ್-ಏಪ್ರಿಲ್ ನಲ್ಲಿ ಪರೀಕ್ಷೆ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
