Connect with us

Bengaluru City

ಮಲಗಿದ ಹೊತ್ತಲ್ಲಿ ನೈಟ್‌ ಕರ್ಫ್ಯೂ ದೊಡ್ಡ ಜೋಕ್‌ ಅಂತಿದ್ದಾರೆ ಜನ

Published

on

Share this

ಬೆಂಗಳೂರು: ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತೆ ಮತ್ತೆ ಎಡವಟ್ಟು, ಎಡಬಿಡಂಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಮಧ್ಯಾಹ್ನವಷ್ಟೇ ಇಂದಿನಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಕರ್ಫ್ಯೂ ಹೇರುವುದಾಗಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಕ್ರಿಸ್‍ಮಸ್ ಮಿಡ್ ನೈಟ್ ಪ್ರಾರ್ಥನೆ, ಹೊಸ ವರ್ಷಕ್ಕೆ ನಿರ್ಬಂಧ ಹೇರುವ ಸಲುವಾಗಿ ಈ ನಿರ್ಧಾರ ಅಂತಲೂ ಘೋಷಣೆ ಮಾಡಿದ್ದರು. ಆದ್ರೆ, ಸಂಜೆ ಹೊತ್ತಿಗೆ ಸರ್ಕಾರದ ನಿರ್ಧಾರವೇ ಬದಲಿ ಹೋಗಿದೆ.

ಕೇವಲ ತೋರಿಕೆ, ಕಾಟಾಚಾರಕ್ಕೇನೋ ಎಂಬಂತೆ ಇವತ್ತಿನ ಬದಲಾಗಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ ಮಾಡೋದಾಗಿ ಸಿಎಂ ಹೇಳಿದ್ದಾರೆ. ರಾತ್ರಿ 10 ಗಂಟೆ ಬದಲಾಗಿ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ಕರ್ಫ್ಯೂ ಜಾರಿ ಮಾಡಿದೆ. ಇದನ್ನೂ ಓದಿ: ನೈಟ್‌ ಕರ್ಫ್ಯೂ ಮಾರ್ಗಸೂಚಿ ಪ್ರಕಟ

ನೈಟ್ ಕರ್ಫ್ಯೂ ಇದ್ದರೂ, ಬಸ್, ಆಟೋ, ಟ್ಯಾಕ್ಸಿಗಳ ಓಡಾಟಕ್ಕೆ ಅವಕಾಶ ಕೊಡಲಾಗಿದೆ. ಎಲ್ಲರೂ ಮಲಗಿರುವ ಹೊತ್ತಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವ ಅಗತ್ಯವಿತ್ತೆ ಎಂಬ ಅಪಸ್ವರ ಕೇಳಿಬಂದಿದೆ. ನಾಳೆ ಮಧ್ಯರಾತ್ರಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲು ಕ್ರಿಶ್ಚಿಯನ್ನರಿಗೆ ಅವಕಾಶ ಮಾಡಿಕೊಟ್ಟಿದೆ. ಈ ಮೊದಲು ಕ್ರಿಸ್ಮಸ್, ಹೊಸ ವರ್ಷದ ಸಂಭ್ರಮ, ಪಾರ್ಟಿಗಳಿಗೆ ಬ್ರೇಕ್ ಹಾಕಲಾಗಿದೆ ಎಂದು ಸಚಿವ ಸುಧಾಕರ್ ಹೇಳಿದ್ರು. ಆದರೆ ಮಧ್ಯಾಹ್ನದ ಹೇಳಿಕೆ ಸಂಜೆ ಹೊತ್ತಿಗೆ ಬದಲಾಯ್ತು. ಇದನ್ನೆಲ್ಲಾ ನೋಡಿದ ಜನ, ಎಲ್ರೂ ಮಲಗಿದ ಹೊತ್ತಲ್ಲಿ ಇದೆಂಥಾ ಕರ್ಫ್ಯೂ? ದೊಡ್ಡ ಜೋಕ್‌ ಎಂದು ಹೇಳುತ್ತಿದ್ದಾರೆ.

ಕಾಟಾಚಾರದ ಮಾರ್ಗಸೂಚಿ
ಜೋಕ್ 1: ರಾತ್ರಿ 11 – ಬೆ.5ರವರೆಗೆ ನೈಟ್ ಕರ್ಫ್ಯೂ
ಜೋಕ್ 2: ರಾತ್ರಿ 11 – ಬೆ.5ರವರೆಗೆ ಎಷ್ಟು ಜನ ಓಡಾಡ್ತಾರೆ?
ಜೋಕ್ 3: ಎಲ್ಲಾ ಮಲಗಿದ ಮೇಲೆ ನೈಟ್ ಕರ್ಫ್ಯೂಯಾವ ಪುರುಷಾರ್ಥಕ್ಕೆ?
ಜೋಕ್ 4: ಬಸ್, ಆಟೋ, ಟ್ಯಾಕ್ಸಿ, ಟ್ರೈನ್, ವಿಮಾನ ಎಲ್ಲಾ ಓಡಾಟ
ಜೋಕ್ 5: ಖಾಲಿ ಸರಕು ಸಾಗಾಣೆ ವಾಹನ ಓಡಾಟಕ್ಕೂ ಅನುಮತಿ
ಜೋಕ್ 6: ರಾತ್ರಿ 11ರವರೆಗೆ ಬಾರ್, ಪಬ್ ಓಪನ್
ಜೋಕ್ 7: ನ್ಯೂ ಇಯರ್ ಪಾರ್ಟಿಗಿಲ್ಲ ಕಂಪ್ಲೀಟ್ ಬ್ರೇಕ್
ಜೋಕ್ 8: ನ್ಯೂ ಇಯರ್ ವೇಳೆ ಹಸಿರು ಪಟಾಕಿಗೆ ಅವಕಾಶ
ಜೋಕ್ 9: ಎಲ್ಲದಕ್ಕೂ ಅವಕಾಶ.. ನೆಪಮಾತ್ರಕ್ಕೆ ಕರ್ಫ್ಯೂ

Click to comment

Leave a Reply

Your email address will not be published. Required fields are marked *

Advertisement