Bengaluru City
772 ಪಾಸಿಟಿವ್, 7 ಮಂದಿ ಬಲಿ – 1,261 ಡಿಸ್ಚಾರ್ಜ್

ಬೆಂಗಳೂರು: ಇಂದು ಕರ್ನಾಟಕದಲ್ಲಿ 772 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 1,261 ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,10,241ಕ್ಕೆ ಏರಿಕೆ ಆಗಿದೆ. ಈ ಪೈಕಿ 8,84,205 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 14,001 ಸಕ್ರಿಯ ಪ್ರಕರಣಗಳಿವೆ.
ಇಲ್ಲಿಯವರೆಗೆ ಒಟ್ಟು 12, 016 ಮಂದಿ ಕೊರೊನಾಗೆ ಬಲಿಯಾಗಿದ್ದು, ಸದ್ಯ 219 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 4,358 ಆಂಟಿಜನ್ ಟೆಸ್ಟ್, 69,293 ಆರ್ಟಿ ಪಿಸಿಆರ್ ಸೇರಿದಂತೆ 73,651 ಪರೀಕ್ಷೆ ಮಾಡಲಾಗಿದೆ. ಒಟ್ಟು ರಾಜ್ಯದಲ್ಲಿ ಇಲ್ಲಿಯವರೆಗೆ 1,31,21,419
ಕೊರೊನಾ ಪರೀಕ್ಷೆ ಮಾಡಲಾಗಿದೆ.
ಎಂದಿನಂತೆ ಬೆಂಗಳೂರು ನಗರದಲ್ಲಿ 363 ಮಂದಿಗೆ ಸೋಂಕು ಬಂದಿದ್ದು 5 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಮೈಸೂರು 40, ಬಳ್ಳಾರಿ 36, ಹಾಸನ 32, ಕೋಲಾರ 31, ಮಂದಿಗೆ ಸೋಂಕು ಬಂದಿದೆ.
ಐಸಿಯುನಲ್ಲಿಒಟ್ಟು 219 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 102, ತುಮಕೂರು 12, ಕಲಬುರಗಿಯಲ್ಲಿ 15 ಮಂದಿ ಇದ್ದಾರೆ.
