Bengaluru City
1,04,811 ಮಂದಿಗೆ ಪರೀಕ್ಷೆ- 8,477 ಪಾಸಿಟಿವ್, 85 ಬಲಿ

ಬೆಂಗಳೂರು: ಇಂದು ಒಟ್ಟು 8,477 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 8,841 ಮಂದಿ ಬಿಡುಗಡೆಯಾಗಿದ್ದಾರೆ. 85 ಮಂದಿ ಮೃತಪಟ್ಟಿದ್ದಾರೆ.
ಸೋಂಕಿತರ ಸಂಖ್ಯೆ 7,43,848ಕ್ಕೆ ಏರಿಕೆಯಾಗಿದೆ. ಈ ಪೈಕಿ 6,20,008 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 1,13,538 ಸಕ್ರಿಯ ಪ್ರಕರಣಗಳಿವೆ.
ಇಲ್ಲಿಯವರೆಗೆ ಒಟ್ಟು 10,283 ಮಂದಿ ಮೃತಪಟ್ಟಿದ್ದು, 939 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
30,977 ಆಂಟಿಜನ್, 73,834 ಆರ್ಟಿ ಪಿಸಿಆರ್ ಸೇರಿದಂತೆ ಒಟ್ಟು 1,04,811 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 63,55,803 ಕೋವಿಡ್ 19 ಪರೀಕ್ಷೆ ಮಾಡಲಾಗಿದೆ.
ಎಂದಿನಂತೆ ಬೆಂಗಳೂರು ನಗರದಲ್ಲಿ 3,788 , ಬೆಂಗಳೂರು ಗ್ರಾಮಾಂರ 454, ಹಾಸನ 440, ಮೈಸೂರು 303, ಬೆಳಗಾವಿ 303, ದಕ್ಷಿಣ ಕನ್ನಡ 301 ಮಂದಿಗೆ ಸೋಂಕು ಬಂದಿದೆ.
ಬೆಂಗಳೂರು ನಗರದಲ್ಲಿ 352, ಧಾರವಾಡ 80, ಬಳ್ಳಾರಿ 75, ಹಾಸನ 51 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
