Bengaluru City
522 ಪಾಸಿಟಿವ್, 2 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

ಬೆಂಗಳೂರು: ಇಂದು ಕರ್ನಾಟಕದಲ್ಲಿ 522 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 465 ಜನ ಡಿಸ್ಚಾರ್ಜ್ ಆಗಿದ್ದಾರೆ. ನಾಲ್ವರು ಕೊರೊನಾಗೆ ಬಲಿಯಾಗಿದ್ದಾರೆ.
ಇಂದು ಹಾವೇರಿ ಮತ್ತು ಕೊಪ್ಪಳದಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,39,387 ಕ್ಕೆ ಏರಿಕೆ ಆಗಿದೆ. ಈ ಪೈಕಿ 9,21,122 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 6029 ಸಕ್ರಿಯ ಪ್ರಕರಣಗಳಿವೆ.
ಒಟ್ಟು ಇಲ್ಲಿಯವರೆಗೆ 12,217 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 145 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 3,896 ಆಂಟಿಜನ್ ಟೆಸ್ಟ್, 71,555 ಆರ್ ಟಿ.ಪಿಸಿ.ಆರ್ ಸೇರಿದಂತೆ ಒಟ್ಟು 75,451 ಪರೀಕ್ಷೆ ಮಾಡಲಾಗಿದೆ.
ಎಂದಿನಂತೆ ಬೆಂಗಳೂರು ನಗರದಲ್ಲಿ 242 ಮಂದಿಗೆ ಸೋಂಕು ಬಂದಿದೆ. ಚಿಕ್ಕಬಳ್ಳಾಪುರ 17, ತುಮಕೂರು 23, ದಕ್ಷಿಣ ಕನ್ನಡದ 33 ಮಂದಿಗೆ ಸೋಂಕು ಬಂದಿದೆ. ಒಟ್ಟು 145 ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 68 ಕಲಬುರಗಿ 13, ತುಮಕೂರು 5 ಮಂದಿ, ಉಡುಪಿಯಲ್ಲಿ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
