Connect with us

Bengaluru City

ಕೊರೊನಾ ಸುನಾಮಿ – 19,067 ಪಾಸಿಟಿವ್, 81 ಬಲಿ

Published

on

ಬೆಂಗಳೂರು: ಕರ್ನಾಟಕದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಪ್ರತಿ ದಿನವೂ ಹಿಂದಿನ ದಾಖಲೆಯನ್ನು ಮುರಿಯುತ್ತಿದೆ. ಇಂದು ಬರೋಬ್ಬರಿ 19,067 ಮಂದಿಗೆ ಕೊರೊನಾ ಬಂದಿದೆ. ಒಟ್ಟು 81 ಮಂದಿಗೆ ಕೊರೊನಾಗೆ ಬಲಿಯಾಗಿದ್ದಾರೆ.

ಬೆಂಗಳೂರು ನಗರದಲ್ಲಿ 12,793, ಮೈಸೂರು 777, ಕಲಬುರಗಿ 671, ತುಮಕೂರು 494, ಮಂಡ್ಯ 338, ಹಾಸನದಲ್ಲಿ 348 ಮಂದಿಗೆ ಸೋಂಕು ಬಂದಿದೆ.

ರಾಜ್ಯದಲ್ಲಿ ಇಂದು 4,603 ಮಂದಿ ಬಿಡುಗಡೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 11,61,065ಕ್ಕೆ ಏರಿಕೆ ಆಗಿದೆ. ಈ ಪೈಕಿ 1,33,643 ಸಕ್ರಿಯ ಪ್ರಕರಣಗಳಿದ್ದರೆ 10,14,152 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಟ್ಟು ಸಾವಿನ ಸಂಖ್ಯೆ 13,351ಕ್ಕೆ ಏರಿಕೆ ಆಗಿದ್ದು ಐಸಿಯುನಲ್ಲಿ 620 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 13,589 ಆಂಟಿಜನ್, 1,32,056 ಆರ್‌ಟಿಸಿ ಪಿಸಿಆರ್ ಸೇರಿದಂತೆ ಒಟ್ಟು 1,45,645 ಕೊರೊನಾ ಪರೀಕ್ಷೆ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ 134, ಕಲಬುರಗಿ 109, ಮೈಸೂರು 40, ತುಮಕೂರು 42 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *