ವಯಸ್ಕರಿಗಿಂತ 2 ರಿಂದ 18 ವರ್ಷದ ಮಕ್ಕಳಲ್ಲಿ ಕೋವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿ: ಭಾರತ್ ಬಯೋಟೆಕ್

Advertisements

ಹೈದರಾಬಾದ್: ಕೋವ್ಯಾಕ್ಸಿನ್ ವಯಸ್ಕರಿಗಿಂತ 2 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ರೋಗನಿರೋಧಕ ಶಕ್ತಿಯನ್ನು ತುಂಬಿ ಪರಿಣಾಮಕಾರಿಯಾಗಿ ಕೋವಿಡ್-19 ವಿರುದ್ಧ ಹೋರಾಡಲು ಶಕ್ತಿ ತುಂಬಿದೆ. ಮತ್ತು ಕೋವ್ಯಾಕ್ಸಿನ್ ತುಂಬಾ ಸುರಕ್ಷಿತಾ ಎಂದು ಭಾರತ್ ಬಯೋಟೆಕ್ ಅಭಿಪ್ರಾಯಪಟ್ಟಿದೆ.

12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಕೆಲದಿನಗಳ ಹಿಂದೆ ಅಮನುತಿ ನೀಡಿತ್ತು. ಇದೀಗ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಲಸಿಕೆ ಕಂಡುಹಿಡಿದ ಭಾರತ್ ಬಯೋಟೆಕ್, ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ಪರೀಕ್ಷಿಸಿದಾಗ ಇದು ವಯಸ್ಕರಿಗಿಂತ 1.7 ಪಟ್ಟು ಹೆಚ್ಚು ರೋಗನಿರೋಧಕ ಶಕ್ತಿಯನ್ನು ಮಕ್ಕಳಲ್ಲಿ ವೃದ್ಧಿಸುತ್ತದೆ ಎಂಬ ಅಂಶ ತಿಳಿದುಬಂದಿದೆ. ಲಸಿಕೆ ಪರೀಕ್ಷೆ ವೇಳೆ 95 ರಿಂದ 98% ಮಕ್ಕಳಲ್ಲಿ ಮೊದಲ ಡೋಸ್ ಪಡೆದ ಬಳಿಕ ಎರಡನೇ ಡೋಸ್ ವೇಳೆ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: 12 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ

Advertisements

525 ಮಂದಿ ಮಕ್ಕಳಿಗೆ ಲಸಿಕೆ ಪರೀಕ್ಷೆ ಮಾಡಲಾಗಿದ್ದು, ಈ ವೇಳೆ 2 ರಿಂದ 6 ವರ್ಷದ 175 ಮಕ್ಕಳು, 6 ರಿಂದ 12 ವರ್ಷದ 175 ಮಕ್ಕಳು ಮತ್ತು 12 ರಿಂದ 18 ವರ್ಷದ 176 ಮಕ್ಕಳಿಗೆ ಲಸಿಕೆ ಪ್ರಯೋಗ ಮಾಡಲಾಗಿದೆ. ಇದನ್ನೂ ಓದಿ: ನಾಳೆ ಬಂದ್ ಇಲ್ಲ – ವ್ಯಾಪಾರ, ವ್ಯವಹಾರ ನಡೆಸಬಹುದು: ಬೊಮ್ಮಾಯಿ

Advertisements

ಈ ಬಗ್ಗೆ ಮಾಹಿತಿ ಹಂಚಿಕೊಂಡ ಭಾರತ್ ಬಯೋಟೆಕ್‍ನ ವ್ಯವಸ್ಥಾಪಕ ನಿದೇರ್ಶಕ ಡಾ.ಕೃಷ್ಣ, ಕೋವ್ಯಾಕ್ಸಿನ್ ಮಕ್ಕಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಸುರಕ್ಷಿತವಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಟ್ರಯಲ್‍ನಿಂದ ತಿಳಿದುಬಂದಿದೆ. ಈ ಮೂಲಕ ಸುರಕ್ಷಿತವಾದ ಕೋವಿಡ್-19 ಲಸಿಕೆ ಮಕ್ಕಳಿಗೆ ನಿರ್ಮಿಸುವ ನಮ್ಮ ಗುರಿ ಯಶಸ್ವಿಯಾಗಿದೆ ಎಂದರು.

Advertisements
Exit mobile version