Thursday, 23rd May 2019

ಲವ್ ಮಾಡು ಇಲ್ಲದಿದ್ದರೆ ರೇಪ್ ಮಾಡ್ತೀನಿ- ಅಣ್ಣನಿಂದ್ಲೇ ತಂಗಿಗೆ ಬೆದರಿಕೆ

ತುಮಕೂರು: ಲವ್ ಮಾಡು ಅಂತ ಸ್ವತಃ ದೊಡ್ಡಪ್ಪನ ಮಗನೇ ಒತ್ತಾಯಿಸಿ ಹಲ್ಲೆ ಮಾಡಿ ಕಿರುಕುಳ ನೀಡಿದ ಪ್ರಕರಣವೊಂದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.

ರಮೇಶ್, ಸಹೋದರಿಯನ್ನು ಪ್ರೀತಿಸು ಎಂದು ಹಲ್ಲೆ ಮಾಡಿದ ಸಹೋದರ. ರಮೇಶ್ ತನ್ನ ಅಪ್ರಾಪ್ತ ಸಹೋದರಿಯನ್ನು ಲವ್ ಮಾಡು ಎಂದು ಪೀಡಿಸುತ್ತಿದ್ದನು. ಲವ್ ಮಾಡು ಇಲ್ಲದಿದ್ದರೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ಬಾಲಕಿ ತನ್ನ ಸಹೋದರನನ್ನು ಲವ್ ಮಾಡಲು ನಿರಾಕರಿಸಿದ್ದಾಳೆ.

ರಮೇಶ್ ನೀಡುತ್ತಿದ್ದ ಕಿರುಕುಳವನ್ನು ತಾಳಲಾರದೇ ಬಾಲಕಿ ಈ ವಿಷಯವನ್ನು ತನ್ನ ಶಾಲಾ ಶಿಕ್ಷಕರಿಗೆ ಹಾಗೂ ಪೋಷಕರಿಗೆ ತಿಳಿಸಿದ್ದಳು. ಪೋಷಕರಿಗೆ ಹಾಗೂ ಶಿಕ್ಷಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆರೋಪಿ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ. ಆರೋಪಿ ರಮೇಶ್ ತನ್ನ ಅಪ್ರಾಪ್ತ ಸಹೋದರಿ ಮೇಲೆ ರಾಡ್‍ನಿಂದ ಹಲ್ಲೆ ಮಾಡಿದ್ದಾನೆ.

ಹಲ್ಲೆಯಿಂದ ಬಾಲಕಿಗೆ ತೀವ್ರ ಪೆಟ್ಟು ಬಿದ್ದಿದೆ. ಸದ್ಯ ಬಾಲಕಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ತುಮಕೂರು ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *