Connect with us

Dakshina Kannada

ಕಾಫಿ ಕೆಫೆಯೊಂದರಲ್ಲಿ ಮಂಗ್ಳೂರು ಜೋಡಿಯ ಚುಮ್ಮಾ…ಚುಮ್ಮಾ

Published

on

ಮಂಗಳೂರು: ಕಾಫಿ ಕೆಫೆಯೊಂದರಲ್ಲಿ ಯುವಕನೊಬ್ಬ ಯುವತಿಗೆ ಓಪನ್ನಾಗಿ ಕಿಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,

ಇಬ್ಬರು ಕೆಫೆಯಲ್ಲಿ ಏನೋ ಮಾತನಾಡುತ್ತಾ ಯುವಕ ಯುವತಿಯನ್ನು ಹತ್ತಿರಕ್ಕೆಳೆದುಕೊಂಡು ಕಿಸ್ ಮಾಡಿದ್ದಾನೆ. ಎಲ್ಲಿ ನಡೆದಿರುವುದು ಅನ್ನೋದು ಇನ್ನೂ ದೃಢಪಟ್ಟಿಲ್ಲ. ಆದರೆ ಮಂಗಳೂರಿನ ಯಾವುದೋ ಕಾಫ್ ಶಾಪ್ ನಲ್ಲಿ ನಡೆದಿದೆ ಅನ್ನುವಂತೆ ಈ ವಿಡಿಯೋ ಶೇರ್ ಆಗುತ್ತಿದೆ.

ಮೇಲ್ನೋಟಕ್ಕೆ ಇವರಿಬ್ಬರು ಲವರ್ ಆಗಿರುವಂತೆ ಕಾಣುತ್ತಿದೆ. ಆದರೆ ಯುವತಿ ಯಾವುದೋ ಕಾಲೇಜು ವಿದ್ಯಾರ್ಥಿನಿಯಂತೆ ತೋರುತ್ತಿದ್ದು ಕಾಲೇಜು ಆಸುಪಾಸಿನ ಕೆಫೆಯಲ್ಲಿ ನಡೆದಿರುವ ಸಾಧ್ಯತೆಯಿದೆ.

ವಿಡಿಯೋದಲ್ಲಿರುವ ಯುವತಿ ಕಾಲೇಜಿನ ಸಮವಸ್ತ್ರ ಧರಿಸಿದ್ದು, ಯಾವ ಕಾಲೇಜಿನ ವಿದ್ಯಾರ್ಥಿನಿ ಎನ್ನುವುದು ತಿಳಿದುಬಂದಿಲ್ಲ. ಕೆಫೆ ಕ್ಯಾಂಪಸ್ ನಿಂದ ಹೊರಗಡೆ ಇದ್ದಿದ್ದರಿಂದ ಇಬ್ಬರೂ ರಾಜರೋಷವಾಗಿ ಕಿಸ್ಸಿಂಗ್ ಮಾಡಿದ್ದಾರೆ. ಈ ಜೋಡಿ ಪ್ರತಿದಿನ ಈ ಕೆಫೆಗೆ ಬರುತ್ತಿದ್ದನ್ನು ಗಮನಿಸಿದ ಪರಿಚಯಸ್ಥರೇ ಈ ವಿಡಿಯೋ ಮಾಡಿ ಹರಿಬಿಟ್ಟಿರಬಹುದು ಎಂದು ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

https://youtu.be/iLK9l3jUTEo