ಮೈಸೂರು: ರೆಡ್ಹ್ಯಾಂಡ್ ಆಗಿ ಸಿಕ್ಕಿ ಬೀಳುವ ಭಯದಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಜೋಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ರಮಾಬಾಯಿ ನಗರದಲ್ಲಿ ನಡೆದಿದೆ.
ಸಂತೋಷ್ ಕುಮಾರ್ (34) ಹಾಗೂ ಸುಮಿತ್ರ(35) ಆತ್ಮಹತ್ಯೆ ಮಾಡಿಕೊಂಡ ಜೋಡಿ. ಸಂತೋಷ್ ಕುಮಾರ್ ಮನೆಯಲ್ಲೆ ಇಬ್ಬರು ಆತ್ಮಹತ್ಯಗೆ ಶರಣಾಗಿದ್ದಾರೆ.
ಸಂತೋಷ್ ಕುಮಾರ್, ಅರ್ಚನಾ ಜೊತೆ ಮದುವೆ ಆಗಿದ್ದರೆ, ಸುಮಿತ್ರ, ಸಿದ್ದರಾಜು ಎಂಬವರನ್ನು ಮದುವೆ ಆಗಿದ್ದಳು. ಸುಮಿತ್ರ ಹಾಗೂ ಸಂತೋಷ್ ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಸುಮಿತ್ರ ಹಾಗೂ ಸಂತೋಷ್ ಜೊತೆಯಲ್ಲಿ ಇರುವ ವಿಷಯ ಸಿದ್ದರಾಜುನಿಗೆ ತಿಳಿದಿದೆ.
ಸಿದ್ದರಾಜು ರೆಡ್ ಹ್ಯಾಂಡಾಗಿ ಹಿಡಿಯಲು ಪೊಲೀಸರ ಜೊತೆ ಸಂತೋಷ್ ಮನೆಗೆ ಹೋಗಿದ್ದಾನೆ. ಈ ವಿಷಯ ತಿಳಿದು ಸಂತೋಷ್ ಹಾಗೂ ಸುಮಿತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.