Connect with us

Chikkaballapur

ಪತ್ನಿಯ ಜೊತೆ ಅನೈತಿಕ ಸಂಬಂಧ – ಪತಿಯಿಂದ ಪ್ರಿಯಕರನ ಕೊಲೆ

Published

on

ಚಿಕ್ಕಬಳ್ಳಾಪುರ: ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯ ಪ್ರಿಯಕರನನ್ನ ಪತಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಚುಂಚದೇನಹಳ್ಳಿಯಲ್ಲಿ ನಡೆದಿದೆ.

ಬೆಲ್ಲಾವಲಹಳ್ಳಿ ಗ್ರಾಮದ ವೆಂಕಟೇಶಪ್ಪ(48) ಚುಂಚದೇನಹಳ್ಳಿಯ ನರಸಿಂಹಪ್ಪನ ಪತ್ನಿ ಚಂದ್ರಕಲಾ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ವಿಚಾರವಾಗಿ ತಿಳಿದ ಪತಿ ಕೋಪಗೊಂಡು ಕೊಲೆ ಮಾಡಿದ್ದಾನೆ.

 

ಪತ್ನಿಯ ಅನೈತಿಕ ಸಂಬಂಧದ ಕುರಿತಾಗಿ ತಿಳಿದ ನರಸಿಂಹಪ್ಪ ಚುಂಚದೇನಹಳ್ಳಿ ಗ್ರಾಮದ ಜಮೀನು ಬಳಿ ಇದ್ದ ವೆಂಕಟೇಶಪ್ಪನೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಸಂಬಂಧ ನರಸಿಂಹಪ್ಪನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಂಚೇನಹಳ್ಳೀ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *