Connect with us

ಸಾವಿನಲ್ಲೂ ಒಂದಾದ ದಂಪತಿ

ಸಾವಿನಲ್ಲೂ ಒಂದಾದ ದಂಪತಿ

ಬಳ್ಳಾರಿ: ಪತಿ ಸಾವನ್ನಪಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಪಂ ವ್ಯಾಪ್ತಿಯಾ ಅಪ್ಪೇನಹಳ್ಳಿಯಲ್ಲಿ ನಡೆದಿದೆ.

ಪರಮೇಶ್ವರ, ಅಂಗಡಿ ವಾಮದೇವಮ್ಮ(60) ಮೃತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಪರಮೇಶ್ವರ ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ. ಪತಿ ಸಾವಿನ ಸುದ್ದಿ ತಿಳಿದ ಪತ್ನಿ ಅಂಗಡಿ ವಾಮದೇವಮ್ಮ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಕಳೆದ ಒಂದು ವಾರದ ಹಿಂದ ಪರಮೇಶ್ವರಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು, ಇದಾದ ಬಳಿಕ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಪರಮೇಶ್ವರ ನಿನ್ನೆ ಸಂಜೆ ಮೃತಪಟ್ಟಿದ್ದಾರೆ.

ವಾಮದೆವಮ್ಮ ಪತಿ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಆಗ ಅವರ ಆರೋಗ್ಯ ಸ್ಥಿತಿ ಸಹಜವಾಗಿತ್ತು. ಆದರೆ ಸಾಯಂಕಾಲ ಅಂತ್ಯಕ್ರಿಯೆ ಮಾಡಿ ಮನೆಗೆ ಬಂದು ಒಂದು ಗಂಟೆಯಲ್ಲಿ ದಿಡೀರ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಪತಿಯ ಅಗಲಿಕೆ ನೋವು ತಾಳದೇ ಕೆಲವೇ ತಾಸುಗಳ ಅಂತರದಲ್ಲಿ ನಿಧನರಾಗಿದ್ದಾರೆ. ಈ ಮೂಲಕ ಒಟ್ಟಿಗೆ ಬಾಳಿ ಬದುಕಿದ ಜೋಡಿ, ಮರಳಿಬಾರದೂರಿಗೆ ಪಯಣ ಬಳಸಿದ್ದಾರೆ.

Advertisement
Advertisement