Connect with us

Latest

500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡಿ ವೆಡ್ಡಿಂಗ್ ಡೇ ಆಚರಿಸಿಕೊಂಡ ದಂಪತಿ

Published

on

ಭುವನೇಶ್ವರ್: ಸಾಮಾನ್ಯವಾಗಿ ವಿವಾಹ ಮಹೋತ್ಸವವನ್ನು ತಮ್ಮ ಹತ್ತಿರದ ಸಂಬಂಧಿಗಳಿಗೆ ಪಾರ್ಟಿಗಳನ್ನು ಆಯೋಜಿಸುವ ಮೂಲಕ ಸೆಲೆಬ್ರೆಟ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ದಂಪತಿ ಮಾತ್ರ ವಿವಾಹವಾದ ದಿನವನ್ನು 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

ಹೌದು. ಒಡಿಶಾ ಮೂಲದ ಯುರೇಕಾ ಅಪ್ತಾ ಹಾಗೂ ಜೋವಾನ್ನಾ ವಾಂಗ್ ದಂಪತಿ ಇಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೆಪ್ಟೆಂಬರ್ 25ರಂದು ದಂಪತಿ ಭುವನೇಶ್ವರದಲ್ಲಿ ವಿವಾಹವಾಗಿದ್ದಾರೆ. ಇದೇ ದಿನದಂದು ಅವರು ಪ್ರಾಣಿ ಸಂರಕ್ಷಣಾ ಸಂಸ್ಥೆಯ ಸಹಾಯದಿಂದ ನಗರದ ಸುಮಾರು 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡಿದ್ದಾರೆ.

ಟ್ಯಾಂಗಿ ಬಳಿಯ ದೇವಸ್ಥಾನವೊಂದರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಾಣಿ ಸಂರಕ್ಷಣಾ ಸಂಸ್ಥೆ ಶ್ವಾನಗಳಿಗೆ ಆಹಾರ ನೀಡಿದೆ. ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡಗೆಯನ್ನು ನಿಡಬೇಕು ಎಂದು ಇಬ್ಬರೂ ತೀರ್ಮಾನ ಮಾಡಿದ್ದೆವು ಎಂದು ಜೋವಾನ್ನಾ ವಾಂಗ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಾವು ಪ್ರಾಣಿ ಸಂರಕ್ಷಣಾ ಸಂಸ್ಥೆಯ(ಎಡಬ್ಲ್ಯೂಟಿಇ) ಸಂಸ್ಥಾಪಕಿ ಪೂರ್ವಿ ಅವರೊಂದಿಗೆ ಭುವನೇಶ್ವರದಾದ್ಯಂತ ಸುಮಾರು 500ಕ್ಕೂ ಹೆಚ್ಚು ಪ್ರಾಣಿಗಳಿಗೆ ಆಹಾರ ನೀಡಲು ನಿರ್ಧರಿಸಿದೆವು ಎಂದು ಹೇಳಿದರು.

ಎಡಬ್ಲ್ಯೂಟಿಇನಿಂದ ಮಾಡಲ್ಪಟ್ಟ ಕೆಲಸದಿಂದ ಅವರು ಸ್ಫೂರ್ತಿ ಪಡೆದಿದ್ದಾರೆ. ಹೀಗಾಗಿ ದಂಪತಿ ತಮ್ಮ ಮದುವೆಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದರು. ಪ್ರತಿಯೊಬ್ಬರೂ ಆಪ್ತಾ ಮತ್ತು ವಾಂಗ್‍ನಂತೆಯೇ ಯೋಚಿಸಲು ಪ್ರಾರಂಭಿಸಿದರೆ, ಈ ಜಗತ್ತಿನಲ್ಲಿ ಒಂದು ಬದಲಾವಣೆ ಸಂಭವಿಸುತ್ತದೆ. ಅಲ್ಲದೆ ಅದು ಅನೇಕ ಪ್ರಾಣಿಗಳ ಜೀವ ಉಳಿಸುವಂತಹ ಕೆಲಸವಗುತ್ತದೆ ಎಂದು ಸ್ಥಳೀಯರು ಹೇಳಿದರು.

Click to comment

Leave a Reply

Your email address will not be published. Required fields are marked *

www.publictv.in