Connect with us

Corona

ಕೊರೊನಾ ಮಧ್ಯೆ ಟಗರಿನ ಕಾಳಗ- ನೂರಾರು ಜನ ಭಾಗಿ

Published

on

ವಿಜಯಪುರ: ಕೊರೊನಾ ಆತಂಕದ ಮಧ್ಯೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವೀರೇಶನಗರದಲ್ಲಿ ಬೃಹತ್ ಟಗರಿನ ಕಾಳಗವನ್ನು ಆಯೋಜನೆ ಮಾಡಲಾಗಿದೆ.

ವೀರೇಶನಗರ ಗೆಳೆಯರ ಬಳಗದ ವತಿಯಿಂದ ಆಯೋಜನೆ ಮಾಡಲಾಗಿದ್ದು, ಕಾಳಗದ ವೀಕ್ಷಣೆಗೆ ನೂರಾರು ಪ್ರೇಕ್ಷಕರು ಭಾಗಿಯಾಗಿದ್ದರು. ಈ ಕಾಳಗದಲ್ಲಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಪಾಡದೆ ಸಾರ್ವಜನಿಕರು ಸರ್ಕಾರದ ಆದೇಶವನ್ನ ಗಾಳಿಗೆ ತೂರಿದ್ದಾರೆ.

ಟಗರಿನ ಕಾಳಗಕ್ಕೆ ಆಯೋಜಕರು ಅನುಮತಿ ಕೂಡ ಪಡೆದಿಲ್ಲ. ಆದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ದಿನನಿತ್ಯ ಸಾವಿರಾರು ಕೊರೊನಾ ಪ್ರಕರಣ ಪತ್ತೆ ಆಗುತ್ತಿವೆ. ಇದರ ಮಧ್ಯೆ ಈ ಟಗರಿನ ಕಾಳಗ ಬೇಕಿತ್ತಾ ಎಂಬ ಪ್ರಶ್ನೆ ಇದೀಗ ಸಾರ್ಜಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.