Connect with us

Corona

ಕೊರೊನಾಗೆ ಶಿರಾದ ವೃದ್ಧ ಬಲಿ – ಟ್ರಾವೆಲ್ ಹಿಸ್ಟರಿ ಇಲ್ಲಿದೆ

Published

on

– ರಾಸಾಯನಿಕ ಸಿಂಪಡಿಸಿ ವೃದ್ಧನ ಅಂತ್ಯಕ್ರಿಯೆ

ತುಮಕೂರು: ಕೊರೊನಾ ವೈರಸ್ ಸದ್ಯ ತುಮಕೂರಿಗೆ ಕಾಲಿಟ್ಟಿದೆ. ದೆಹಲಿಗೆ ಹೋಗಿ ಬಂದ ವೃದ್ಧನೋರ್ವನಿಗೆ ಸೋಂಕು ತಗಲಿ ಇಂದು ಸಾವನ್ನಪ್ಪಿದ್ದಾರೆ.

ತುಮಕೂರಿನ ಶಿರಾದ 60 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು 13 ಜನರ ಸ್ನೇಹಿತರೊಂದಿಗೆ ದೆಹಲಿಗೆ ತೆರಳಿದ್ದ ಎನ್ನಲಾಗಿದೆ. ಇವರಲ್ಲಿ ಒಬ್ಬರು ತಿಪಟೂರು, ಒಬ್ಬರು ಮಂಡ್ಯದ ನಾಗಮಂಗಲ. ಮೃತ ವೃದ್ಧ ಶಿರಾ ನಗರ, ಇನ್ನುಳಿದಂತೆ 10 ಜನರು ತುಮಕೂರು ನಗರದವರು ಎನ್ನಲಾಗಿದೆ. ಅಲ್ಲದೇ ಮೃತ ವೃದ್ಧನ ಮೂವರು ಪತ್ನಿಯರು, 9 ಜನ ಮಕ್ಕಳು, 5 ಜನ ಮೊಮ್ಮಕ್ಕಳು, ಸೊಸೆ, ಮತ್ತೊಬ್ಬ ಸ್ನೇಹಿತ ಸೇರಿದಂತೆ ಒಟ್ಟು 33 ಜನರ ನಡುವೆ ನೇರಸಂಪರ್ಕ ಇಟ್ಟುಕೊಂಡಿದ್ದರು.

ಈತನಿಗೆ ಈ ಮೊದಲು ಚಿಕಿತ್ಸೆ ನೀಡಿದ್ದ ಇಬ್ಬರು ಖಾಸಗಿ ವೈದ್ಯರು, ಓರ್ವ ಸರ್ಕಾರಿ ವೈದ್ಯರಿಗೂ ಐಸೋಲೇಷನ್ ನಲ್ಲಿ ಇರಿಸಲಾಗಿದೆ. ಇವರ ಕುಟುಂಬದ ಸಂಪರ್ಕಿಸಿ ನಿಗಾ ವಹಿಸಲಾಗಿದೆ. ಎಲ್ಲರನ್ನ ತುಮಕೂರು ಜಿಲ್ಲೆಯ ಶಿರಾ ನಗರದ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿ 28 ದಿನಗಳ ಐಸೋಲೇಷನ್ ವಾರ್ಡಿನಲ್ಲಿ ಇರಿಸಲಾಗುತ್ತಿದೆ. ಸದ್ಯ ತುಮಕೂರು ಹಾಗೂ ಶಿರಾ ನಗರ ಕಂಪ್ಲಿಟ್ ಲಾಕ್ ಮಾಡಲಾಗಿದ್ದು, ಯಾರು ಬರದಂತೆ ತೆರಳದಂತೆ ಲಾಕ್ ಮಾಡಲಾಗಿದೆ.

ಇದರಲ್ಲಿ ಎಂಟು ಜನರ ವರದಿ ನೆಗಟಿವ್ ಬಂದಿದೆ. ಇನ್ನುಳಿದ 13 ಜನರ ವರದಿಗೆ ಕಾಯಲಾಗುತ್ತಿದೆ. ದೆಹಲಿಗೆ ಹೋಗಿದ್ದವರ ಸ್ಯಾಂಪಲ್ ಕಳಿಸಲಾಗಿದ್ದು, ನಾಳೆ ವರದಿ ಬರಲಿದೆ. ಸುಮಾರು 9 ಅಡಿ ಆಳದಲ್ಲಿ ಆರೋಗ್ಯ ಇಲಾಖೆಯೇ ಎಲ್ಲಾ ಕ್ರಮಗಳನ್ನ ತೆಗೆದುಕೊಂಡು ತುಮಕೂರಿನ ಜಲ್ಕಾ ಮಕಾನ್ ದರ್ಗಾದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಈ ವೇಳೆ ವಿವಿಧ ರಾಸಾಯನಿಕ ಸಿಂಪಡಿಸಿ ಅಂತ್ಯಕ್ರಿಯೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸೊಂಕು ಪತ್ತೆಯಾಗಿ ಸಾವನ್ನಪ್ಪಿರುವುದು. ಹೀಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಇನ್ನಷ್ಟು ಬಿಗಿ ನಿರ್ಣಯ ಕೈಗೊಳ್ಳುತ್ತಿದೆ.

ಕೊರೊನಾ ಮೃತನ ಟ್ರಾವೆಲ್ ಹಿಸ್ಟರಿ:
* ಮಾರ್ಚ್ 05 ರಂದು ತುಮಕೂರಿನಿಂದ 13 ಮಂದಿ ಜೊತೆ ಸಂಪರ್ಕ ಕ್ರಾಂತಿ ಟ್ರೈನ್‍ನಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದರು.
* ಮಾರ್ಚ್ 07 ರಂದು ಮಧ್ಯಾಹ್ನ 3.30ಕ್ಕೆ ದೆಹಲಿಯ ಹಜರತ್ ನಿಜಾಮುದ್ದಿನ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ.
* ಬಳಿಕ ಟ್ಯಾಕ್ಸಿ ಮೂಲಕ ಜಾಮೀಯ ಮಸ್ಜಿದ್‍ಗೆ ಪ್ರಯಾಣ ನಡೆಸಿದ್ದರು.
* ಮಾರ್ಚ್ 07 ರಿಂದ ಮಾರ್ಚ್ 11 ರವರೆಗೆ ಜಾಮೀಯ ಮಸ್ಜಿದ್ ಬಳಿ ಲಾಡ್ಜ್‌ವೊಂದರಲ್ಲಿ ವಾಸ ಮಾಡಿದ್ದಾರೆ.
* ಮಾರ್ಚ್ 11 ರಂದು ಬೆಳಗ್ಗೆ 9 ಗಂಟೆಗೆ ಕಾಂಗೂ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿನತ್ತ ಪಯಣ ಮಾಡಿದ್ದಾರೆ.
* ಮಾರ್ಚ್ 14 ರಂದು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣಕ್ಕೆ ಆಗಮಿಸಿದ ವೃದ್ಧ, ಅಂದು ಬೆಳ್ಳಗ್ಗೆಯೇ ಚಿತ್ರದುರ್ಗ- ಬೆಂಗಳೂರು ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಶಿರಾದತ್ತ ಪ್ರಯಾಣ ಮಾಡಿದ್ದಾನೆ. ಈ ವೇಳೆ ಏನೂ ಸಮಸ್ಯೆ ಇರಲಿಲ್ಲ.
* ಮಾರ್ಚ್ 14 ರಿಂದ ಮುಂಜಾನೆ ಶಿರಾ ಪಟ್ಟಣದ ಮನೆಯಲ್ಲಿ ವಾಸ.
* ಮಾರ್ಚ್ 18 ರಂದು ಜ್ವರ ಕೆಮ್ಮು ಶೀತ ಕಾಣಿಸಿಕೊಂಡಿದೆ. ಕೂಡಲೇ ಶಿರಾದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ.
* ಮಾರ್ಚ್ 19 ರ ಸಂಜೆಯೂ ಆಸ್ಪತ್ರೆಗೆ ಭೇಟಿ ನೀಡಿದ್ದು, ಆದರೂ ಕಡಿಮೆಯಾಗಿಲ್ಲ.


* ಮಾರ್ಚ್ 21 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಎಕ್ಸ್ ರೇ, ರಕ್ತ ಪರೀಕ್ಷೆ ಪಡೆದಿದ್ದಾರೆ. ಆಗ ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ಹೋಗಿ ಅಂತ ಸೂಚಿಸಿದ್ದಾರೆ.
* ಮಾರ್ಚ್ 22 ರಂದು ಆತ ಎಲ್ಲಿ ಹೋದ ಎಂದು ತಿಳಿದಿಲ್ಲ.
* ಮಾರ್ಚ್ 23 ರಂದು ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ, ಚಿಕಿತ್ಸೆ ಪಡೆದು ಬಳಿಕ ಶಿರಾಗೆ ವಾಪಸ್ ಆಗಿದ್ದಾರೆ.
* ಮರುದಿನ ಮಾರ್ಚ್ 24 ರಂದು ಮತ್ತೆ ಜಿಲ್ಲಾಸ್ಪತ್ರೆಗೆ ಆಗಮಿಸಿ ದಾಖಲಾಗಿದ್ದಾರೆ. ಬಳಿಕ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗಿತ್ತು.
* ಸೋಂಕಿತನ ರಕ್ತ ಮಾದರಿ, ಕಫ ಪರೀಕ್ಷೆಗೆ ರವಾನಿಸಲಾಗಿತ್ತು. ತಡರಾತ್ರಿ ಸೊಂಕು ಇರುವುದು ದೃಢವಾಗಿತ್ತು.
* ಮಾರ್ಚ್ 26 ರಂದು ರಾತ್ರಿ 10.30ಕ್ಕೆ ಸೋಂಕಿತನ P-56 ವರದಿಯಲ್ಲಿ ಕೋವಿಡ್-19 ದೃಢವಾಗಿ,
* ಮಾರ್ಚ್ 27 ರ ಬೆಳಗ್ಗೆ 10.45ಕ್ಕೆ P-56 ಸೋಂಕಿತ ಸಾವನ್ನಪ್ಪಿದ್ದಾರೆ ಎಂದು ಡಿಸಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ.