Connect with us

Bengaluru City

ನಾಳೆಯಿಂದ ಬಸ್ ಸಂಚಾರ ಸಾಧ್ಯತೆ – ಏನು ಸೇವೆ ಇರಬಹುದು?

Published

on

ಬೆಂಗಳೂರು: ಇವತ್ತಿಗೆ ಲಾಕ್‍ಡೌನ್ 3.0 ಅಂತ್ಯಗೊಳ್ಳಲಿದ್ದು, ನಾಳೆಯಿಂದ ಹೊಸ ಸ್ವರೂಪದಲ್ಲಿ, ಹೊಸ ಆಯಾಮದಲ್ಲಿ ಲಾಕ್‍ಡೌನ್ ಜಾರಿಯಾಗಲಿದೆ. ಈಗಾಗಲೇ ಲಾಕ್‍ಡೌನ್ 4.0 ಹೇಗಿರುತ್ತೆ ಅನ್ನೋ ಕುತೂಹಲ ದೇಶದೆಲ್ಲೆಡೆ ಮನೆಮಾಡಿದೆ. ಅಲ್ಲದೇ ರಾಜಧಾನಿ ಬೆಂಗಳೂರಿಗೆ ಬಿಗ್ ರಿಲೀಫ್ ಸಿಗುತ್ತಾ ಅಂತ ಜನ ಕಾಯುತ್ತಿದ್ದಾರೆ.

ಲಾಕ್‍ಡೌನ್ ಟಫ್ ಇದ್ದಷ್ಟು ದಿನ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಆದರೆ ಲಾಕ್‍ಡೌನ್ ಸಡಿಲಿಕೆಯಾದ ನಂತರ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರೋವಾಗ 3ನೇ ಲಾಕ್‍ಡೌನ್ ಮುಗೀತಾ ಬಂದಿದೆ. ಇದರ ನಡುವೆ ಕಂಟೈನ್ಮೆಂಟ್ ಝೋನ್‍ಗಷ್ಟೇ ಲಾಕ್‍ಡೌನ್ ಎನ್ನಲಾಗುತ್ತಿದೆ. ನಾಳೆಯಿಂದ ಬೆಂಗಳೂರಿನಲ್ಲಿ ಷರತ್ತುಬದ್ಧವಾಗಿ ಬಿಎಂಟಿಸಿ ಬಸ್ ಓಡಾಟಕ್ಕೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಎಲ್ಲಾ ಬಸ್ ಡಿಪೋಗಳಲ್ಲಿ ಚಾಲಕರು ಹಾಗೂ ನಿರ್ವಾಹಕರ ಫಿಟ್ನೆಸ್ ಪರೀಕ್ಷೆ ನಡೆದಿದೆ.

ನಾಳೆಯಿಂದ ಬಿಎಂಟಿಸಿ ಬಸ್ ಸಂಚಾರ
ನಾಳೆಯಿಂದ ಬಿಎಂಟಿಸಿ ಬಸ್‍ಗಳ ಓಡಾಟಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು, ಮೇ 18ರಿಂದ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಸಾಮಾಜಿಕ ಅಂತರ ಆಧರಿಸಿ ಬಿಎಂಟಿಸಿ ಬಸ್‍ಗಳ ಓಡಾಟಕ್ಕೆ ಸಿದ್ಧತೆ ಮಾಡಲಾಗಿದೆ. ಈಗಾಗಲೇ ಬಿಎಂಟಿಸಿಯ ಎಲ್ಲ ಸಿಬ್ಬಂದಿಗೂ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಎಲ್ಲಾ ಸಿಬ್ಬಂದಿಗೂ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯವಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಕರು ಗುಂಪು ಗುಂಪಾಗಿ ನಿಂತುಕೊಂಡು ಪ್ರಯಾಣಿಸುವಂತಿಲ್ಲ. ಕ್ಯೂ ಆರ್ ಕೋಡ್ ಮೂಲಕ ಟಿಕೆಟ್ ನೀಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಪ್ರತಿ ಟ್ರಿಪ್ ಆದ ಮೇಲೂ ಕಡ್ಡಾಯವಾಗಿ ಬಸ್‍ಗಳಿಗೆ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು. ಚಾಲಕ, ಡ್ರೈವರ್‍ಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಕಡ್ಡಾಯವಾಗಿದೆ.

ಬೆಂಗಳೂರಿನಲ್ಲಿ ಲಾಕ್‍ಡೌನ್ ಸಡಿಲ ಮಾಡುವ ಸಾಧ್ಯತೆ ಇದ್ದು, ಬೇರೆ ಯಾವೆಲ್ಲಾ ಸೇವೆ ಇರಬಹುದು ಅನ್ನೋದು ಜನರ ಪ್ರಶ್ನೆಯಾಗಿದೆ. ಹೀಗಾಗಿ ನಾಳೆಯಿಂದ ಬಿಎಂಟಿಸಿ ಬಸ್ ಸಂಚಾರದ ಜೊತೆ ಉಳಿದ ಯಾವೆಲ್ಲಾ ಸೇವೆಗಳು ಸಿಗಬಹುದು ಅನ್ನೋದನ್ನ ನೊಡೋದಾದರೆ,

ಏನೆಲ್ಲಾ ಸೇವೆ ಇರಬಹುದು?
* ಬಸ್ ಜೊತೆ ಆಟೋ ಓಡಾಟ ಸಾಧ್ಯತೆ
* ಟ್ಯಾಕ್ಸಿ, ಓಲಾ, ಊಬರ್ ಓಡಾಡಬಹುದು
* ಜಿಮ್, ಸ್ಪಾ, ಸಲೂನ್ ಓಪನ್‍ಗೂ ಅನುಮತಿ ಸಾಧ್ಯತೆ

ಇವೆಲ್ಲಾ ಅನುಮಾನ?
* ಥಿಯೇಟರ್, ಶಾಪಿಂಗ್ ಮಾಲ್, ಕಾಂಪ್ಲೆಕ್ಸ್, ಸ್ಪೋರ್ಟ್ಸ್,
* ದೇಗುಲ, ಜಾತ್ರೆ, ಸಂತೆ, ಧಾರ್ಮಿಕ ಉತ್ಸವ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮ
* ಮೇ ಬಳಿಕವಷ್ಟೇ ಶಾಲಾ-ಕಾಲೇಜು ಆರಂಭ ಆಗಬಹುದು
* ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಷ್ಟೇ ಸೀಮಿತ

ಬೆಂಗಳೂರಿನಲ್ಲಿ ಸದ್ಯ 18 ಕಂಟೈನ್ಮೆಂಟ್ ಝೋನ್‍ಗಳಿದ್ದು, ಕಂಟೈನ್ಮೆಂಟ್ ಝೋನ್‍ನಲ್ಲಷ್ಟೇ ಲಾಕ್‍ಡೌನ್ ಆಗಬಹುದು ಎನ್ನಲಾಗುತ್ತಿದೆ. ಇಲ್ಲಿ ಯಾವುದೇ ರಿಯಾಯಿತಿನೂ ಇರಲ್ಲ. 56 ದಿನದ ಬಳಿಕ ಹೊಸ ಪ್ರಪಂಚ ಶುರುವಾಗಲಿದೆ.