Connect with us

Bengaluru City

ಬೆಂಗ್ಳೂರಿನಲ್ಲಿ ಮಿತಿ ಮೀರುತ್ತಿದೆ ಕೊರೊನಾ ಅಟ್ಟಹಾಸ

Published

on

– 2 ವಲಯಗಳಲ್ಲಿ 24 ಕಂಟೈನ್ಮೆಂಟ್ ಝೂನ್‍ಗಳು

ಬೆಂಗಳೂರು: ಒಂದು ಕಡೆ ಲಾಕ್‍ಡೌನ್ ಸಡಿಲಿಕೆ ಮತ್ತೊಂದು ಕಡೆ ಕೊರೊನಾ ಸ್ಫೋಟವಾಗುತ್ತಿದೆ. ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಸಂಖ್ಯೆ ಏರಿಕೆಯಾಗುತ್ತಿವೆ.

ಮೇ 16ಕ್ಕೆ 200 ಇದ್ದದ್ದು, 12 ದಿನಕ್ಕೆ 88 ಪ್ರಕರಣ ದಾಖಲಾಗಿವೆ. ಇವತ್ತು ಅಥವಾ ನಾಳೆ ಬೆಂಗಳೂರಿನಲ್ಲಿ 300ಕ್ಕೆ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ. ಈ ಮೂಲಕ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಸ್ಫೋಟವಾಗುತ್ತಿದೆ. ಹೀಗಾಗಿ ನಗರದಲ್ಲಿ ಕಂಟೈನ್ಮೆಂಟ್ ಝೂನ್‍ಗಳು ಏರಿಕೆಯಾಗುತ್ತಿದೆ.

ಕೊರೊನಾ ಹಬ್‍ಗಳಾದ ಶಿವಾಜಿನಗರ, ಪಾದರಾಯನ ಪುರದಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಹೊಸ ಏರಿಯಾಗಳಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ.

ಶಿವಾಜಿನಗರ, ಕೆಜಿಹಳ್ಳಿ, ಅಸ್ಟಿಂಗ್ ಟೌನ್, ಪಾದರಾಯನಪುರ ಮತ್ತು ಯಲಹಂಕ ಏರಿಯಾಗಳಲ್ಲಿ ಸೋಂಕಿತರ ಸಂಪರ್ಕದಲ್ಲಿ ಇದ್ದವರ ರಿಸಲ್ಟ್ ಬರಬೇಕಿದೆ. ಇನ್ನೂ ಅಂತರರಾಷ್ಟ್ರೀಯ ಮತ್ತು ಅಂತರರಾಜ್ಯ ಪ್ರಯಾಣ ಮಾಡಿದ್ದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಸಂಖ್ಯೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟವಾಗುತ್ತಾ ಎಂಬ ಆತಂಕ ಶುರುವಾಗಿದೆ.

ಬೆಂಗಳೂರಿನ ಹೊಸ ಹೊಸ ಏರಿಯಾದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗುತ್ತಿದ್ದು. ಕಂಟೈನ್ಮೆಂಟ್ ಝೂನ್‍ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೇ 15ರವರೆಗೂ 16 ಕಂಟೈನ್ಮೆಂಟ್ ಝೂನ್‍ಗಳು. ಬುಧವಾರ 24ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಯಾವ್ಯಾವ ವಲಯದಲ್ಲಿ ಎಷ್ಟೇಷ್ಟು ಕಂಟೈನ್ಮೆಂಟ್ ಝೂನ್, ಯಾವ್ಯಾವ ವಾರ್ಡ್ ಅಂತ ನೋಡೋದಾದರೆ..

ಬೆಂಗಳೂರಿನಲ್ಲಿ ಒಟ್ಟು 2 ವಲಯಗಳಲ್ಲಿ 24 ಕಂಟೈನ್ಮೆಂಟ್ ಝೂನ್‍ಗಳು
1. ಬೊಮ್ಮನಹಳ್ಳಿ ವಲಯ 5 ಕಂಟೈನ್ಮೆಂಟ್ ಝೂನ್
* ಬಿಳೇಕಲ್ಲಳ್ಳಿ – ವಾರ್ಡ್ ನಂ 188
* ಹೋಗಸಂದ್ರ – ವಾರ್ಡ್ ನಂಬರ್ – 189
* ಬೇಗೂರು ವಾರ್ಟ್ 192 ವಾರ್ಡ್
* ಮಂಗಮ್ಮನ ಪಾಳ್ಯ ವಾರ್ಡ್ ನಂ 190
* ಪುಟ್ಟೆನಹಳ್ಳಿ ವಾರ್ಡ್ ನಂ 187

2. ಮಹಾದೇವಪುರ ವಲಯ 4 ಕಂಟೈನ್ಮೆಂಟ್ ಝೂನ್
* ಹಗಡೂಡು ವಾರ್ಡ್ ನಂಬರ್-84
* ಹೂಡಿ – ವಾರ್ಡ್ ನಂ 54
* ರಾಮಮೂರ್ತಿ ನಗರ – ವಾರ್ಡ್ ನಂ 26
* ವರ್ತೂರು – ವಾರ್ಡ್‍ನಂ 149

3. ಪೂರ್ವ ವಲಯ- 5 ಕಂಟೈನ್ಮೆಂಟ್ ಝೋನ್
* ಶಿವಾಜಿನಗರ ವಾರ್ಡ್ ನಂ- 92
* ವನ್ನಾರ ಪೇಟೆ – ವಾರ್ಡ್ ನಂ 115
* ಎಸ್.ಕೆ ಗಾರ್ಡನ್ – ವಾರ್ಡ್ ನಂ 61
* ನಾಗಾವಾರ – ವಾರ್ಡ್ ನಂ 23
* ಹೆಚ್.ಬಿ.ಆರ್. ಲೇಔಟ್ – ವಾರ್ಡ್ ನಂ 24

4. ಬೆಂಗಳೂರು ದಕ್ಷಿಣ ವಲಯ- 2
* ವಾರ್ಡ್ ನಂ-176 – ಬಿಟಿಎಂ ಲೇಔಟ್
* ವಾರ್ಡ್ ನಂ 146 -ಲಕ್ಕಸಂದ್ರ

5. ಬೆಂಗಳೂರು ಪಶ್ಚಿಮ ವಲಯ- 5
* ವಾರ್ಡ್ ನಂ- 45 ಮಲ್ಲೇಶ್ವರಂ..
* ವಾರ್ಡ್ ನಂ-235, ಪಾದರಾಯನಪುರ.
* ವಾರ್ಡ್ ನಂ-136, ಜಗಜೀವನರಾಮನಗರ
* ವಾರ್ಡ್ ನಂ- 139- ಕೆ ಆರ್ ಮಾರ್ಕೆಟ್
* ವಾರ್ಡ್ ನಂ 44 – ಮಾರಪ್ಪನ ಪಾಳ್ಯ

6. ಆರ್.ಆರ್.ನಗರ ವಲಯ- 2 ಕಂಟೈನ್ಮೆಂಟ್
* ಹೇರೋಹಳ್ಳಿ – ವಾರ್ಡ್ ನಂ 72
* ಜ್ಞಾನಭಾರತಿ ನಗರ – ವಾರ್ಡ್ ನಂ 129

7. ಯಲಹಂಕ ವಲಯ 1 ಕಂಟೈನ್ಮೆಂಟ್ ಝೂನ್
* ಥಣಿಸಂಧ್ರ – ವಾರ್ಡ್ ನಂ 06