Connect with us

Districts

ಕೊರೊನಾ ಭೀತಿ: ಯಾದಗಿರಿಯಲ್ಲಿ ಮಾಸ್ಕ್ ಖಾಲಿ

Published

on

ಯಾದಗಿರಿ: ಹೈದರಾಬಾದ್‍ನಲ್ಲಿ ಕೊರೊನಾ ವೈರಸ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಗಡಿ ಪ್ರದೇಶ ಯಾದಗಿರಿಯಲ್ಲಿ ಕೂಡ ಕೊರೊನಾ ಕಂಟಕ ಎದುರಾಗುವ ಭೀತಿ ಉಂಟಾಗಿದೆ. ಆದರೆ ಈ ಬೆನ್ನಲ್ಲೇ ಯಾದಗಿರಿ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ.

ಕೊರೊನಾ ವೈರಸ್ ಬಾರದಂತೆ ಅವಶ್ಯವಾಗಿ ಧರಿಸಲು ಬೇಕಾದ ಮಾಸ್ಕ್ ಗಳಿಗೆ ಈಗ ಫುಲ್ ಡಿಮ್ಯಾಂಡ್ ಬಂದಿದೆ. ಮಾಸ್ಕ್ ಪೂರೈಕೆ ಕಡಿಮೆ ಇರುವ ಕಾರಣ ಜಿಲ್ಲೆಯಲ್ಲಿ ಸದ್ಯ ಮಾಸ್ಕ್ ಗಳೇ ಸಿಗುತ್ತಿಲ್ಲ. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಬಿಟ್ಟರೆ ಬೇರೆ ಕಡೆ ಮಾಸ್ಕ್ ಗಳು ದೊರೆಯುತ್ತಿಲ್ಲ.

ಶಹಾಪುರ, ಸುರಪುರ, ಗುರುಮಠಕಲ್, ವಡಗೇರಾ ಮೊದಲಾದ ಕಡೆಯ ಮೆಡಿಕಲ್ ಶಾಪ್‍ಗಳಲ್ಲಿ ಮಾಸ್ಕ್‍ಗಳು ಖಾಲಿ ಖಾಲಿಯಾಗಿವೆ. ಪಕ್ಕದ ಹೈದರಾಬಾದ್‍ನಲ್ಲಿ ಕೊರೊನಾ ಪಾಸಿಟಿವ್ ಬಂದ್ ಹಿನ್ನೆಲೆಯಲ್ಲಿ ಜನರು ಮುಗಿಬಿದ್ದು, ಒಂದೇ ರಾತ್ರಿಯಲ್ಲಿ ಸಾವಿರಾರು ಮಾಸ್ಕ್ ಗಳನ್ನು ಖರೀದಿಸಿದ್ದಾರೆ. ಎನ್-90 ಮಾಸ್ಕ್‍ಗಳು ಹಾಗೂ ಡೆಸ್ಪೊಸಬಲ್ ಮಾಸ್ಕ್‍ಗಳು ಮೆಡಿಕಲ್‍ನಲ್ಲಿ ನೋ ಸ್ಟಾಕ್ ಆಗಿವೆ.

ಜಿಲ್ಲೆಯಲ್ಲಿ ಅಂದಾಜು 430 ಖಾಸಗಿ ಮೆಡಿಕಲ್ ಅಂಗಡಿಗಳಿವೆ. ಮೆಡಿಕಲ್‍ಗಳಿಗೆ ಔಷಧಿ ಪೂರೈಕೆ ಮಾಡುವ ಹೋಲ್ ಸೇಲ್ ಔಷಧಿ ಅಂಗಡಿಗಳಲ್ಲಿ ಕೂಡ ಮಾಸ್ಕ್‍ಗಳು ಸೀಗುತ್ತಿಲ್ಲ. ಹೀಗಾಗಿ ಜಿಲ್ಲೆಯ ಜನ ಚಿಂತಾಗ್ರಾಂತರಾಗಿದ್ದಾರೆ.