Connect with us

Dharwad

ಕೊರೊನಾ ಹಿನ್ನೆಲೆ ತರಕಾರಿ ಮಾರುಕಟ್ಟೆ ಸ್ಥಳಾಂತರ- ಕೊಳ್ಳುವವರೂ ಇಲ್ಲ, ಮಾರುವವರೂ ಇಲ್ಲ

Published

on

– ಚಿನ್ನದ ಅಂಗಡಿ ಬಂದ್‍ಗೆ ಗದಗನಲ್ಲಿ ಆಕ್ರೋಶ

ಧಾರವಾಡ/ಗದಗ: ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ, ಧಾರವಾಡ ಮಹಾನಗರ ಪಾಲಿಕೆ ಧಾರವಾಡ ತರಕಾರಿ ಮಾರುಕಟ್ಟೆಯನ್ನು ನಗರದ ಕೆಇ ಬೊರ್ಡ್ ಶಾಲೆಯ ಆವರಣಕ್ಕೆ ಸ್ಥಳಾಂತರಿಸಿದೆ. ಆದರೆ ಅಲ್ಲಿ ಕೊಳ್ಳವವರೂ ಬರುತ್ತಿಲ್ಲ, ಮಾರುವವರೂ ಬರುತ್ತಿಲ್ಲ. ಹೀಗಾಗಿ ಆವರಣ ಬಿಕೋ ಎನ್ನುತ್ತಿದೆ.

ವ್ಯಾಪಾರಕ್ಕೆ ಬರುವವರಿಗೆ ಇಗಾಗಲೇ ಪಾಲಿಕೆ ಮಾರ್ಕಿಂಗ್ ಮಾಡಿ ಜಾಗ ಗುರುತಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಕೆಲವೇ ಕೆಲವು ತರಕಾರಿ ವ್ಯಾಪಾರಿಗಳು ಮಾತ್ರ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ವ್ಯಾಪಾರ ಇಲ್ಲದ ಕಾರಣ ಮೊದಲಿನ ಜಾಗಕ್ಕೇ ಕಳುಹಿಸಿ ಎಂದು ಮನವಿ ಮಾಡುತಿದ್ದಾರೆ.

ಬಿಸಿಲಿನಲ್ಲಿ ಕೂರಲು ಆಗುತ್ತಿಲ್ಲ, ಅಲ್ಲದೆ ಜನರು ಸಹ ಇತ್ತ ಬರುತ್ತಿಲ್ಲ. ವ್ಯಾಪಾರವೇ ಆಗುತ್ತಿಲ್ಲ. ಹೀಗಾಗಿ ತುಂಬಾ ಕಷ್ಟವಾಗುತ್ತಿದೆ. ನಮ್ಮನ್ನು ಮೊದಲಿನ ಜಾಗಕ್ಕೇ ಕಳುಹಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಗ್ರಾಹಕರು ಸಹ ಮಾರುಕಟ್ಟೆಯತ್ತ ಬಾರುತ್ತಿಲ್ಲ. ಹೀಗಾಗಿ ಆವರಣ ಬಿಕೋ ಎನ್ನುತ್ತಿದೆ.

ಚಿನ್ನದ ಅಂಗಡಿ ಬಂದ್ ಗೆ ಆಕ್ರೋಶ

ಸರ್ಕಾರದ ಆಫ್ ರೂಲ್ಸ್ ನಿರ್ಧಾರದ ವಿರುದ್ಧ ಗದಗ ಜಿಲ್ಲೆಯ ಅನೇಕ ಚಿನ್ನದ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಕೋವಿಡ್ ನಿಯಮಗಳನ್ನು ಪಾಲಿಸುತ್ತೇವೆ. ಅಂಗಡಿ ತೆರೆಯಲು ಅವಕಾಶ ಕಲ್ಪಿಸಿ ಕೊಡಿ ಎಂದು ಚಿನ್ನದ ಅಂಗಡಿಯ ಅನೇಕ ಮಾಲೀಕರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಾಜ್ಯದ ಅನೇಕ ಕಡೆಗಳಲ್ಲಿ ಮಾರ್ಕೆಟ್ ಓಪನ್ ಇದೆ. ಗದಗನಲ್ಲಿ ಮಾತ್ರ ಬಂದ್ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 2 ವರ್ಷಗಳಿಂದ ವ್ಯಾಪಾರ ಕುಂಠಿತದಿಂದ ಸಾಕಷ್ಟು ತೊಂದರೆಯಲ್ಲಿದ್ದೆವೆ. ಜೀವನ ನಡೆಸುವುದು ದುಸ್ತರವಾಗಿದೆ. ರಾಜಕಾರಣಿಗಳು ಚುನಾವಣೆ, ಸಭೆ, ಸಮಾರಂಭಗಳಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅವರಿಗಿಲ್ಲದ ಕಾನೂನು ಸಣ್ಣಪುಟ್ಟ ವ್ಯಾಪಾರಸ್ಥರು, ಸಾರ್ವಜನಿಕರಿಗೆ ಯಾಕೆ ಎಂದು ಸರ್ಕಾರದ ವಿರುದ್ಧ ಗುಡುಗಿದರು. ಮದುವೆ, ಶುಭ ಸಮಾರಂಭಗಳ ಈ ಸೀಸನ್ ನಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದರೆ ಬದುಕೊದು ಹೇಗೆ ಎಂದು ಪ್ರಶ್ನಿಸಿದರು. ವೀಕೆಂಡ್ ಲಾಕ್‍ಡೌನ್ ಬಿಟ್ಟು ಉಳಿದ ದಿನಗಳಲ್ಲಿ, ಕೋವಿಡ್ ನಿಯಮ ಪಾಲಿಸುತ್ತೇವೆ ದಿನಕ್ಕೆ 4 ಗಂಟೆ ವರೆಗೆಯಾದರೂ, ಅಂಗಡಿ ತೆರೆಯಲು ಅನುಮತಿ ಕೊಡಿ ಎಂದು ಚಿನ್ನದ ಅಂಗಡಿ ಮಾಲೀಕರು ಬೇಡಿಕೆ ಇಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *