Corona
ದೇಶಾದ್ಯಂತ ಜ.13ರಿಂದಲೇ ಕೊರೊನಾ ಲಸಿಕೆ ವಿತರಣೆ

– ಸಂಕ್ರಾಂತಿಯ ಹಿಂದಿನ ದಿನದಿಂದ ಲಸಿಕೆ ವಿತರಣೆ
– ದೇಶಾದ್ಯಂತ ನಾಲ್ಕು ಡಿಪೋಗಳ ಸ್ಥಾಪನೆ
ನವದೆಹಲಿ: ಹೊಸ ವರ್ಷಕ್ಕೆ ಎರಡು ಕೊರೊನಾ ಲಸಿಕೆಗೆ ಅನುಮತಿ ಸಿಕ್ಕ ಬೆನ್ನಲ್ಲೇ ಈಗ ಸಂಕ್ರಾಂತಿಯ ಹಿಂದಿನ ದಿನದಿಂದ ಲಸಿಕೆ ವಿತರಣೆಯಾಗಲಿದೆ. ಜನವರಿ 13ರಿಂದಲೇ ಕೊರೊನಾ ಲಸಿಕೆಯನ್ನು ವಿತರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿದೆ.
ಲಸಿಕೆಗೆ ಅನುಮತಿ ಸಿಕ್ಕ ಬೆನ್ನಲ್ಲೇ ವಿತರಣೆ ಯಾವಾಗ ಆರಂಭವಾಗುತ್ತೆ ಎಂಬ ಪ್ರಶ್ನೆ ಎದ್ದಿತ್ತು. ಬಳಿಕ ಸಂಕ್ರಾಂತಿ ವೇಳೆಗೆ ವಿತರಣೆ ಆರಂಭವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಸಂಕ್ರಾಂತಿಗೆ ಮುನ್ನಾದಿನವೇ ಲಸಿಕೆ ಹಂಚಿಕೆಗೆ ಅನುಮತಿ ನೀಡಲಾಗಿದೆ. ಆರಂಭದಲ್ಲಿ ಕೊರೊನಾ ವಾರಿಯರ್ಸ್ ಗೆ ಲಸಿಕೆಯನ್ನು ವಿತರಿಸಲಾಗುತ್ತಿದೆ. ಬಳಿಕ ಹಂತ ಹಂತವಾಗಿ ಎಲ್ಲರಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ.
ಕೊರೊನಾ ಲಸಿಕೆ ಹಂಚಿಕೆಗೆ ಆರೋಗ್ಯ ಸಚಿವಾಲಯ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಈ ಕುರಿತು ಡ್ರೈ ರನ್ ಸಹ ನಡೆಸಲಾಗಿದೆ. ಇದೇ ಮಾದರಿಯಲ್ಲಿ ಇದೀಗ ಲಸಿಕೆ ಹಂಚಿಕೆಯಾಗುತ್ತದೆ. ಸುಮಾರು 6.5 ಕೋಟಿ ಡೋಸ್ಗಳನ್ನು ಸೇರಮ್ ಇನ್ಸ್ಟಿಟ್ಯೂಟ್ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಿದೆ. ಬಳಿಕ ಆದ್ಯತೆ ಮೇರೆಗೆ ದೇಶಾದ್ಯಂತೆ ಲಸಿಕೆ ಹಂಚಿಕೆ ಮಾಡಲಾಗುತ್ತದೆ.
ಕರ್ನಲ್(ಹರ್ಯಾಣ),ಮುಂಬೈ, ಚೆನ್ನೈ, ಕೋಲ್ಕತ್ತಾಗಳಲ್ಲಿ ಒಟ್ಟು ನಾಲ್ಕು ಲಸಿಕೆ ಡಿಪೋಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳ ಮೂಲಕವೇ ಲಸಿಕೆಯನ್ನು ಹಂಚಲು ಆರೋಗ್ಯ ಸಚಿವಾಲಯ ಪ್ಲಾನ್ ಮಾಡಿಕೊಂಡಿದೆ. ಆರಂಭದಲ್ಲಿ ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗುತ್ತದೆ. ಬಳಿಕ ಹಂತ ಹಂತವಾಗಿ ಕೋವ್ಯಾಕ್ಸಿನ್ ಲಸಿಕೆ ಹಂಚಿಕೆ ಮಾಡಲಾಗುತ್ತದೆ.
There are 4 primary vaccine stores called GMSD located in Karnal, Mumbai, Chennai and Kolkata and there are 37 vaccine stores in the country. They store vaccines in bulk and distributes further: Union Health Secretary Rajesh Bhushan pic.twitter.com/XLemvehiH5
— ANI (@ANI) January 5, 2021
ದೇಶದ 4 ಕಡೆ ಲಸಿಕೆ ಡಿಪೋ ತೆರೆದರೆ 37 ಕಡೆ ಲಸಿಕೆ ಸಂಗ್ರಹಣಾ ಕೇಂದ್ರ ಸ್ಥಾಪನೆಯಾಗಲಿದೆ. ಪುಣೆಯಿಂದ ವಿಮಾನಗಳ ಮೂಲಕ ಡಿಪೋಗಳಿಗೆ ಲಸಿಕೆ ಪೊರೈಕೆ ಆಗಲಿದೆ. ಅಲ್ಲಿಂದ ವಾಹನಗಳ ಮೂಲಕ ವಿತರಣೆ ಆಗಲಿದೆ. ದೇಶಾದ್ಯಂತ ನಡೆಸಿದ ಡ್ರೈ ರನ್ ಬಳಿಕ ಲಸಿಕೆ ವಿತರಣೆ ದಿನಾಂಕ ನಿಗದಿ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
