Connect with us

ಉತ್ತರ ಪ್ರದೇಶದಲ್ಲಿ ವೀಕೆಂಡ್ ಲಾಕ್‍ಡೌನ್- ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ

ಉತ್ತರ ಪ್ರದೇಶದಲ್ಲಿ ವೀಕೆಂಡ್ ಲಾಕ್‍ಡೌನ್- ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ

ಲಕ್ನೋ: ಕೊರೊನಾ ನಿಯಂತ್ರಣಕ್ಕಾಗಿ ಉತ್ತರ ಪ್ರದೇಶದ ಸರ್ಕಾರ ವೀಕೆಂಡ್ ಲಾಕ್‍ಡೌನ್ ಘೋಷಣೆ ಮಾಡಿದೆ. ಇಡೀ ಉತ್ತರ ಪ್ರದೇಶದಲ್ಲಿ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‍ಡೌನ್ ಇರಲಿದೆ. 500ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಹಾಕಲಾಗಿದೆ.

ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ವೀಕೆಂಡ್ ಲಾಕ್‍ಡೌನ್ ಇರಲಿದೆ. ರಾತ್ರಿ 8 ರಿಂದ ಬೆಳಗ್ಗೆ 7ರವರೆಗೆ ನೈಟ್ ಕರ್ಫ್ಯೂ ಇರಲಿದೆ. ವೀಕೆಂಡ್ ಲಾಕ್‍ಡೌನ್ ನಲ್ಲಿ ಅನಾವಶ್ಯಕವಾಗಿ ತಿರುಗಾಡುವಂತಿಲ್ಲ. ಅವಶ್ಯಕ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ವ್ಯಾಕ್ಸಿನ್ ಪಡೆಯುವರು ವೀಕೆಂಡ್ ಲಾಕ್‍ಡೌನ್ ದಿನ ಆಸ್ಪತ್ರೆಗೆ ಬಂದು ಲಸಿಕೆ ಪಡೆಯಲು ಅನುಮತಿ ನೀಡಲಾಗಿದೆ.

ಯುಪಿ ಸರ್ಕಾರ ಈ ಮೊದಲು ಸಂಡೇ ಲಾಕ್‍ಡೌನ್ ಹೇರಿತ್ತು. ರಾಜ್ಯದ ಸೋಂಕು ಹೆಚ್ಚು ಕಾಣಿಸಿಕೊಂಡ ಪ್ರದೇಶಗಳಲ್ಲಿ ಮಾತ್ರ ಲಾಕ್‍ಡೌನ್ ಸೇರಿದಂತೆ ಕಠಿಣ ರೂಲ್ಸ್ ಗಳನ್ನ ತಂದಿತ್ತು. ಇದೀಗ ಇಡೀ ರಾಜ್ಯಕ್ಕೆ ವೀಕೆಂಡ್ ಲಾಕ್‍ಡೌನ್ ಘೋಷಿಸಲಾಗಿದೆ.

ಸೋಮವಾರ ಅಲಹಾಬಾದ್ ಹೈಕೋರ್ಟ್ ವಾರಾಣಸಿ, ಕಾನ್ಪುರ ನಗರ, ಗೋರಖ್ಪುರ, ಲಕ್ನೋ ಮತ್ತು ಪ್ರಯಾಗ್‍ರಾಜ್ ನಲ್ಲಿ ಏಪ್ರಿಲ್ 26ರವರೆಗೆ ಲಾಕ್‍ಡೌನ್ ಮಾಡುವಂತೆ ಆದೇಶ ನೀಡಿತ್ತು. ಲಾಕ್‍ಡೌನ್ ಮಾಡೋದರಿಂದ ಜನರು ಸಂಕಷ್ಟದಲ್ಲಿ ಸಿಲುಕುತ್ತಾರೆ. ಹಾಗೆ ಲಾಕ್‍ಡೌನ್ ಮಾಡಲ್ಲ ಎಂದು ಯುಪಿ ಸರ್ಕಾರ ಹೇಳಿತ್ತು. ಇದೀಗ ಅಲಹಾಬಾದ್ ಹೈಕೋರ್ಟ್ ಅದೇಶದಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ನಿಯಂತ್ರಣ ಅವಶ್ಯಕವಾಗಿದೆ. ಈಗಾಗಲೇ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮುಂದೆಯೂ ಕಠಿಣ ರೂಲ್ಸ್ ತರಲಾಗುವುದು. ಜೀವ ಉಳಿಸೋದರ ಜೊತೆಗೆ ಜೀವನವನ್ನ ಕಾಪಾಡಬೇಕು. ಇಂತಹ ಸಂದರ್ಭದಲ್ಲಿ ಇಡೀ ನಗರವನ್ನ ಲಾಕ್‍ಡೌನ್ ಮಾಡಿದ್ರೆ ಜೀವನ ನಿರ್ವಹಣೆ ಕಷ್ಟ ಆಗಲಿದೆ. ಜನರು ಸಹ ಸ್ವಯಂ ನಿರ್ಬಂಧ ಹಾಕಿಕೊಳ್ಳುತ್ತಿದ್ದಾರೆ ಎಂದು ಸರ್ಕಾರ ತಿಳಿಸಿರತ್ತು.

Advertisement
Advertisement
Advertisement